ಯಾಕೆ ವಿಟಮಿನ್ ಡಿ ದೇಹಕ್ಕೆ ಬೇಕೇ ಬೇಕು..?

Video Description

ವಿಟಮಿನ್ ಡಿ ದೇಹಕ್ಕೆ ಏಕೆ ಬೇಕು? ಯಾಕೆ ವಿಟಮಿನ್ ಡಿ ದೇಹಕ್ಕೆ ಬೇಕೇ ಬೇಕು..? ನಮ್ಮ ದೇಹದ ಆರೋಗ್ಯ ಕಾಪಾಡಲು ವಿಟಮಿನ್ ಜೀವಸತ್ವಗಳು ತುಂಬಾ ಅವಶ್ಯಕ. ಅದರಲ್ಲೂ ಇಂದಿನ ಜೀವನ ಶೈಲಿಯಲ್ಲಿ ಸಾಮಾನ್ಯವಾಗಿ ಅನೇಕರಲ್ಲಿ ವಿಟಮಿನ್ ಡಿ ಕೊರತೆ ಕಾಡುತ್ತಿರುತ್ತದೆ. ಬಾಲ್ಯದಲ್ಲೇ ಇಂತಹದೊಂದು ಸಮಸ್ಯೆ ಕಾಣಿಸಿಕೊಂಡರೆ ರಿಕೆಟ್ಸ್ ತೊಂದರೆಗೆ ಒಳಗಾಗಬಹುದು. ಅಂದರೆ ಶಿಶುಗಳಲ್ಲಿ ಮೂಳೆಗಳು ರೂಪು ಗೊಳ್ಳುತ್ತಿರುವಾಗಲೇ ವಿಟಮಿನ್ ಡಿ ಕೊರತೆಯಾದರೆ ರಿಕೆಟ್ಸ್ (ಕುಟಿಲ ವಾತ) ರೋಗಕ್ಕೆ ಕಾರಣವಾಗುತ್ತದೆ. ವಿಟಮಿನ್ ಡಿ ಕೊರತೆಯಾದರೆ ಮೂಳೆಗಳು ದುರ್ಬಲಗೊಳ್ಳುತ್ತವೆ. ದೇಹದಲ್ಲಿನ ಕ್ಯಾಲ್ಸಿಯಂ ಮಟ್ಟವನ್ನು ನಿಯಂತ್ರಿಸುವ ಮೂಲಕ ವಿಟಮಿನ್ ಡಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ದೇಹದ ರೋಗನಿರೋಧಕ ಹೆಚ್ಚಿಸುವಲ್ಲಿ ವಿಟಮಿನ್ ಡಿ ಅತ್ಯವಶ್ಯಕ. ಇದರ ಕೊರತೆಯಿಂದಾಗಿ, ಮಧುಮೇಹ, ರಕ್ತಹೀನತೆ, ರಿಕೆಟ್ಸ್ ಮುಂತಾದ ಅನೇಕ ರೀತಿಯ ಕಾಯಿಲೆಗಳು ಉಂಟಾಗಬಹುದು. ವಿಟಮಿನ್​ ಡಿ ದೇಹಕ್ಕೆ ತುಂಬ ಮುಖ್ಯ. ಸೂರ್ಯನ ಬೆಳಕಿನಿಂದಲೂ ಈ ವಿಟಮಿನ್​ ನಮ್ಮ ದೇಹಕ್ಕೆ ಸಿಗುತ್ತದೆ. ನಮ್ಮ ಚರ್ಮದ ಮೇಲೆ ಮುಂಜಾನೆಯ ಸೂರ್ಯನ ಕಿರಣಗಳು ಬಿದ್ದಾಗ ವಿಟಮಿನ್​ ಡಿ ಉತ್ಪತ್ತಿಯಾಗುತ್ತದೆ. ನಮ್ಮ ದೇಹದ ಹಲವು ಕಾರ್ಯಗಳು ಸರಿಯಾಗಿ ನಡೆಯಬೇಕು ಎಂದರೆ ವಿಟಮಿನ್​ ಡಿ ಸಮತೋಲನವಾಗಿ ಇರಬೇಕು. ಯಾವುದೇ ಆಹಾರ ತಿಂದಾಗ ಅದರಿಂದ ಸಿಗುವ ಕ್ಯಾಲ್ಸಿಯಂ, ಫಾಸ್ಪರಸ್​ ಅಂಶಗಳನ್ನು ನಮ್ಮ ದೇಹ ಹಿಡಿದಿಟ್ಟುಕೊಳ್ಳಲು ವಿಟಮಿನ್​ ಡಿ ತುಂಬ ಸಹಕಾರಿ. ಹಾಗೇ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಎಲುಬು, ಹಲ್ಲುಗಳು ಗಟ್ಟಿಯಾಗಿರಬೇಕೆಂದರೆ ಡಿ ವಿಟಮಿನ್​ ಬೇಕೇಬೇಕು. ಮಂಡಿನೋವು, ಕೀಲು ನೋವುಗಳಂಥ ದೀರ್ಘಕಾಲಿಕ ರೋಗಗಳನ್ನೂ ನಿಯಂತ್ರಿಸುತ್ತದೆ. ಇತ್ತೀಚೆಗಂತೂ ದೇಹದಲ್ಲ ವಿಟಮಿನ್ ಡಿ ಕೊರತೆ ಉಂಟಾಗುವುದು ತುಂಬ ಸಹಜವಾದ ಸಮಸ್ಯೆಯೆಂಬಂತೆ ಆಗಿದೆ. ಆದರೆ ತುಂಬ ಜನರಿಗೆ ಈ ಬಗ್ಗೆ ಅರಿವು ಇರುವುದಿಲ್ಲ. ಹಲ್ಲು ಹಾಳಾಗುವುದು, ದಂತದಲ್ಲಿ ರಕ್ತ ಒಸರುವುದು, ಡಯಾಬಿಟಿಸ್​, ಸಂಧಿವಾತ, ಕೀಲುನೋವು, ಐಬಿಎಸ್​, ಆಯಾಸ, ಕೂದಲು ಉದುರುವಿಕೆ, ಅಜೀರ್ಣದಂಥ ಆರೋಗ್ಯ ಸಮಸ್ಯೆಗಳಿಗೆ ವಿಟಮಿನ್​ ಡಿ ಕೊರತೆ ಕಾರಣವಾಗುತ್ತದೆ. ಮಾನಸಿಕ ಸಮಸ್ಯೆಗಳು, ಖಿನ್ನತೆ ಮತ್ತು ಸ್ಕಿಜೋಫ್ರೇನಿಯಾದಂತಹ ಮಾನಸಿಕ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ. ಇತ್ತೀಚಿನ ಮಕ್ಕಳಲ್ಲಿ ಕೋಪ, ಖಿನ್ನತೆ, ಮಾನಸಿಕ ಅಸ್ವಸ್ಥತೆ ಕಾಣಿಸಲು ಇದು ಒಂದು ಕಾರಣ ಎಂದು ತಿಳಿಸಲಾಗಿದೆ. ಹಾಗಾಗಿ ಬಾಲ್ಯದಲ್ಲಿ ಮಕ್ಕಳಿಗೆ ಮತ್ತು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿರುವವರಿಗೆ ಈ ಜೀವಸತ್ವ ಹೆಚ್ಚು ಹೊಂದಿರುವ ಆಹಾರಗಳನ್ನು ಹೆಚ್ಚಾಗಿ ನೀಡಬೇಕೆಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ವಿಟಮಿನ್ ಡಿ ಇರುವ ಆಹಾರಗಳೆಂದರೆ ಮಶ್ರೂಮ್, ಮೀನು, ಮೊಟ್ಟೆಯ ಹಳದಿ ಭಾಗ, ಹಾಲು ಇತ್ಯಾದಿಗಳಾಗಿವೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.