ಕತ್ತಿನ ಹಿಂಭಾಗ ಕಪ್ಪಾಗಿ ಊದಿಕೊಳ್ಳುತ್ತಿದೆಯೇ..?

Video Description

ಕತ್ತಿನ ಭಾಗ ಕಪ್ಪಾಗುತ್ತಿದೆಯೇ ಇಲ್ಲಿದೆ ಪರಿಹಾರ ಕತ್ತಿನ ಹಿಂಭಾಗ ಕಪ್ಪಾಗಿ ಊದಿಕೊಳ್ಳುತ್ತಿದೆಯೇ..? ನಿಮ್ಮ ಕತ್ತಿನ ತ್ವಚೆಯು ಕಪ್ಪಾಗುತ್ತಿದೆ ಎಂದಾದಲ್ಲಿ ಇದಕ್ಕೆ ಕಾರಣ ಹಾರ್ಮೋನುಗಳು, ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದು ಮೊದಲಾದ ಕಾರಣಗಳಿಂದ ತ್ವಚೆಯ ಚರ್ಮ ಕಪ್ಪಾಗುತ್ತದೆ. ಈ ಭಾಗದ ತ್ವಚೆಯು ಹೆಚ್ಚು ಕಪ್ಪಾಗುತ್ತದೆ ಎಂದಾದಲ್ಲಿ ನೀವು ವೈದ್ಯರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕು ಮತ್ತು ಸೂಕ್ತ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬೇಕು. ಅದೇ ರೀತಿ ಈ ಜಾಗದಲ್ಲಿ ಮೃತ ಕೋಶಗಳಿದ್ದರೆ ಆ ಭಾಗ ಕಪ್ಪಾಗುತ್ತದೆ. ಅದೂ ಅಲ್ಲದೆ ವರ್ಣದ್ರವ್ಯ, ಹಾರ್ಮೋನು ಅನಿಯಂತ್ರತೆ, ಸನ್ ಟ್ಯಾನ್, ಕಳಪೆ ನೈರ್ಮಲ್ಯ, ಬಿರುಸುತನ, ಎನ್ಜಿಮಾ, ಅಲರ್ಜಿ ಇತ್ಯಾದಿಗಳಿಂದ ಕೂಡ ಕತ್ತು ಕಪ್ಪು ಬಣ್ಣಕ್ಕೆ ತಿರುಗುತ್ತದೆ. 1ಚಮಚದಷ್ಟು ಶ್ರೀಗಂಧದ ಹುಡಿಯನ್ನು 2 ಚಮಚ ರೋಸ್ ವಾಟರ್‌ನೊಂದಿಗೆ ಮಿಶ್ರ ಮಾಡಿ ಮತ್ತು ನಿಮ್ಮ ಕುತ್ತಿಗೆ ಎಲ್ಲಾ ಭಾಗಕ್ಕೂ ಹಚ್ಚಿ. 15 ನಿಮಿಷ ಹಾಗೆಯೇ ಬಿಡಿ ನಂತರ ತಣ್ಣೀರಿನಿಂದ ಈ ಭಾಗವನ್ನು ಸ್ವಚ್ಛಗೊಳಿಸಿ. ತೆಂಗಿನ ಹಾಲನ್ನು ಬಳಸಿಕೊಂಡು ನಿಮ್ಮ ಕುತ್ತಿಗೆ ಕಪ್ಪು ಭಾಗವನ್ನು ಬೆಳ್ಳಗೆ ಹೊಳೆಯುವಂತೆ ಮಾಡಬಹುದಾಗಿದೆ. ಮೊದಲಿಗೆ ತಣ್ಣೀರಿನಿಂದ ಈ ಭಾಗವನ್ನು ತೊಳೆದುಕೊಳ್ಳಿ. ನಂತರ ಹತ್ತಿಯ ಉಂಡೆಯನ್ನು ತೆಂಗಿನ ಹಾಲಿನಲ್ಲಿ ಅದ್ದಿ ಕುತ್ತಿಗೆಯ ಭಾಗಕ್ಕೆ ಹರಡಿ. ಅರ್ಧಗಂಟೆ ಹಾಗೆಯೇ ಬಿಡಿ. ನಂತರ ಈ ಭಾಗವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ತ್ವಚೆಯನ್ನು ಬೆಳ್ಳಗಾಗಿಸುವ ಗುಣವನ್ನು ಹೊಂದಿದ್ದು ಪರಿಣಾಮಕಾರಿಯಾಗಿ ನಿಮ್ಮ ಕುತ್ತಿಗೆಯ ಭಾಗಕ್ಕೆ ಕಾರ್ಯನಿರ್ವಹಿಸಲಿದೆ. ಎರಡು ಚಮಚದಷ್ಟು ಅಕ್ಕಿಹುಡಿಯನ್ನು ನೀರಿನಲ್ಲಿ ಕಲಸಿಕೊಂಡು ನಿಮ್ಮ ಕುತ್ತಿಗೆಯ ಭಾಗಕ್ಕೆ ಹಚ್ಚಿ. 20 ನಿಮಿಷಗಳ ತರುವಾಯ ಈ ಭಾಗವನ್ನು ತೊಳೆದುಕೊಳ್ಳಿ. ಎಲ್ಲರೂ ತಿಳಿದಿರುವಂತೆ ನಿಂಬೆಯಲ್ಲಿ ನೈಸರ್ಗಿಕ ಬ್ಲೀಚಿಂಗ್ ಗುಣ ಅಧಿಕವಾಗಿದೆ. ಈ ಗುಣದಿಂದಾಗಿ ಚರ್ಮದ ಕಪ್ಪು ಭಾಗವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಎರಡು ಚಮಚ ಗುಲಾಬಿ ನೀರಿನೊಂದಿಗೆ(ರೋಸ್ ವಾಟರ್) ಎರಡು ಟಿ ಚಮಚ ನಿಂಬೆ ರಸ ಮಿಶ್ರಣ ಮಾಡಿ ಮತ್ತು ಹತ್ತಿ ಚೆಂಡನ್ನು ಬಳಸಿ ಕುತ್ತಿಗೆಯ ಕಪ್ಪಾದ ಭಾಗಕ್ಕೆ ಹಚ್ಚಿ. ಈ ಮಿಶ್ರಣವನ್ನು ಹಚ್ಚಿದ ಮರುಕ್ಷಣವೇ ತೊಳೆಯಬೇಡಿ. ಅದನ್ನು ಇಡೀ ರಾತ್ರಿ ಹಗೆಯೇ ಬಿಟ್ಟು, ಮರುದಿನ ಬೆಳಿಗ್ಗೆ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ, ಒಂದು ತಿಂಗಳವರೆಗೆ ಈ ವಿಧಾನವನ್ನು ಪುನರಾವರ್ತಿಸಿ. ಇದು ಹೆಚ್ಚು ಶ್ರೀಮಂತ ಉತ್ಕರ್ಷಣ ನಿರೋಧಿ ಅಂಶಗಳನ್ನು ಹೊಂದಿದ್ದು ನಿಮ್ಮ ಕುತ್ತಿಗೆಯ ಸುತ್ತಲಿನ ಕೊಳೆ ಮತ್ತು ಕಪ್ಪು ಬಣ್ಣವನ್ನು ನಿವಾರಿಸಲಿದೆ. ಮೊದಲಿಗೆ ಎರಡು ಸ್ಟ್ರಾಬೆರ್ರಿಗಳನ್ನು ಜಜ್ಜಿಕೊಂಡು ಅದರ ರಸವನ್ನು ಹಿಂಡಿ ನಿಮ್ಮ ಕುತ್ತಿಗೆಗೆ ಹಚ್ಚಿಕೊಳ್ಳಿ. 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ಈ ಭಾಗವನ್ನು ತೊಳೆದುಕೊಳ್ಳಿ. ಇದು ತ್ವಚೆಯನ್ನು ಬೆಳ್ಳಗಾಗಿಸುವ ಗುಣವನ್ನು ಹೊಂದಿದ್ದು ನಿಮ್ಮ ಕಪ್ಪು ವರ್ತುಲವನ್ನು ಹೋಗಲಾಡಿಸಲಿದೆ. ಟೊಮೇಟೊವನ್ನು ಹಿಸುಕಿಕೊಂಡು ಅದನ್ನು ನಿಮ್ಮ ಕುತ್ತಿಗೆಯ ಸುತ್ತ ಹಚ್ಚಿಕೊಳ್ಳಿ. 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ತಣ್ಣೀರಿನಿಂದ ಈ ಭಾಗವನ್ನು ತೊಳೆದುಕೊಳ್ಳಿ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.