ಈರುಳ್ಳಿ ಹೇರ್ ಮಾಸ್ಕ್ ನಿಮ್ಮ ಕೂದಲ ರಕ್ಷಾ ಕವಚ..!

Video Description

ಈರುಳ್ಳಿ ಬಳಸಿ ತಲೆಗೂದಲಿನ ಆರೈಕೆ ಮಾಡುವುದು ಹೇಗೆ? ಈರುಳ್ಳಿ ಹೇರ್ ಮಾಸ್ಕ್ ನಿಮ್ಮ ಕೂದಲ ರಕ್ಷಾ ಕವಚ..! ತಲೆಗೂದಲಿನ ಸಮಸ್ಯೆ ಹೆಂಗಳೆಯರು ನಿತ್ಯವೂ ಅನುಭವಿಸುವ ಬವಣೆಯಾಗಿದೆ. ಕೂದಲು ಉದುರುವುದು, ತಲೆ ತುರಿಕೆ, ತಲೆ ಹೊಟ್ಟು ಹೀಗೆ ಕೂದಲಿನ ಸಮಸ್ಯೆಗಳು ತೀರುವುದೇ ಇಲ್ಲ. ಇದರ ನಿವಾರಣೆಗೆಂದೇ ಬಳಸದ ಉತ್ಪನ್ನಗಳಿಲ್ಲ ಸುತ್ತದ ಮಾರುಕಟ್ಟೆಗಳಿಲ್ಲ ಅಲ್ಲವೇ? ರಾಸಾಯನಿಕ ಉತ್ಪನ್ನಗಳಿಂದ ಕೂದಲಿನ ಸಮಸ್ಯೆಗಳು ತೀರಿಲ್ಲದಿದ್ದರೂ ಸಮಸ್ಯೆ ಇನ್ನಷ್ಟು ಹೆಚ್ಚಾಗಿರುವುದಂತೂ ನಿಜ ಅಲ್ಲವೇ? ಕೂದಲಿನ ಆರೈಕೆಗೆ ಈರುಳ್ಳಿಯನ್ನು ನಾನಾ ಬಗೆಯಲ್ಲಿ ಬಳಸುವುದು ಹೇಗೆ ಎಂಬುದೇ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿರುವ ಅಂಶಗಳಾಗಿವೆ. ಈರುಳ್ಳಿಯ ರಸದಿಂದ ಹೇರ್ ಪ್ಯಾಕ್ ತಯಾರಿಸಿಕೊಂಡು ಕೂದಲಿನ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು. ಅಂತೆಯೇ ಈ ತರಕಾರಿಯಲ್ಲಿರುವ ಸಲ್ಫರ್ ಅಂಶವು ಕೂದಲಿನ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ. ಈರುಳ್ಳಿಯನ್ನು ಸಮನಾಗಿ ತುಂಡರಿಸಿಕೊಂಡು ಅದನ್ನು ಚೆನ್ನಾಗಿ ತಿಕ್ಕಿಕೊಳ್ಳಿ. ನಂತರ ಈರುಳ್ಳಿಯ ರಸವನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ. 30-40 ನಿಮಿಷಗಳವರೆಗೆ ಹಾಗೆಯೇ ಬಿಡಿ. ಮೃದು ಶ್ಯಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ. ಕೂದಲಿನ ಪೋಷಣೆಗೆ ಇದು ಉತ್ತಮ ವಿಧಾನವಾಗಿದೆ. ಕೂದಲಿನ ಕಾಳಜಿಗಾಗಿ ಈರುಳ್ಳಿಯನ್ನು ಹಲವಾರು ವಿಧದಲ್ಲಿ ಬಳಸುವತ್ತ ನೀವು ಯೋಚಿಸುತ್ತಿದ್ದೀರಾ? ಈರುಳ್ಳಿಯ ರಸವನ್ನು ಹಿಂಡಿಕೊಂಡು ಅದನ್ನು ನೀರಿನೊಂದಿಗೆ ಬೆರೆಸಿಕೊಳ್ಳಿ. ಈ ದ್ರಾವಣವನ್ನು ಬಳಸಿಕೊಂಡು ಕೂದಲನ್ನು ತೊಳೆದುಕೊಳ್ಳಿ. ಆದರೆ ಈರುಳ್ಳಿಯ ಪರಿಮಳ ನಿವಾರಣೆಗೆ ಶಾಂಪೂವನ್ನು ನೀವು ಬಳಸಲೇಬೇಕು. ನಿಮಗೆ ತಿಳಿದಿರುವ ಹಾಗೆ ತೆಂಗಿನ ಎಣ್ಣೆಯು ಸಾಮಾನ್ಯವಾಗಿ ಕೇಶಕ್ಕೆ ಹಚ್ಚುವ ಎಣ್ಣೆಯಾಗಿದ್ದು, ಕೂದಲುದುರುವ ಸಮಸ್ಯೆಗೆ ನೆರವಾಗುತ್ತದೆ. ಈ ಎಣ್ಣೆಯನ್ನು ಈರುಳ್ಳಿ ರಸದ ಜೊತೆಗೆ ಬಳಸಿದರೆ ಈ ಸಮಸ್ಯೆಯನ್ನು ಇನ್ನೂ ಪರಿಣಾಮಕಾರಿಯಾಗಿ ನಿವಾರಣೆ ಮಾಡಬಹುದಾಗಿದ್ದು, ಕೂದಲ ಬೆಳವಣಿಗೆಯನ್ನು ಉತ್ತೇಜಿಸಲಿದೆ. 2 ಚಮಚ ತೆಂಗಿನ ಎಣ್ಣೆಯನ್ನು 1 ಚಮಚ ಈರುಳ್ಳಿಯ ರಸದೊಂದಿಗೆ ಬೆರೆಸಿ ಕೇಶಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ ಸ್ವಚ್ಛಗೊಳಿಸಿ. ವ್ಯತ್ಯಾಸ ನಿಮಗೇ ತಿಳಿಯುತ್ತದೆ. ಎರಡು ಚಮಚದಷ್ಟು ಈರುಳ್ಳಿ ರಸವನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಜೇನನ್ನು ಸೇರಿಸಿ. ನಿಮ್ಮ ತಲೆಬುರುಡೆಗೆ ಮತ್ತು ಕೂದಲಿಗೆ ಈ ಮಿಶ್ರಣವನ್ನು ಹಚ್ಚಿಕೊಳ್ಳಿ. 15-20 ನಿಮಿಷ ಬಿಟ್ಟು ಶಾಂಪೂ ಬಳಸಿ ಕೂದಲು ತೊಳೆಯಿರಿ. ವಾರಕ್ಕೊಮ್ಮೆ ಈ ಮಾಸ್ಕ್ ಅನ್ನು ಬಳಸಿ. ಈರುಳ್ಳಿಯನ್ನು ಚೆನ್ನಾಗಿ ರುಬ್ಬಿಕೊಳ್ಳಿ ಮತ್ತು ಆಲೀವ್ ಎಣ್ಣೆಯನ್ನು ಇದಕ್ಕೆ ಬೆರೆಸಿ ತಲೆಬುರುಡೆಗೆ ಹಚ್ಚಿಕೊಳ್ಳಿ. ಬೇಕೆಂದಲ್ಲಿ ಬೀರ್ ಅನ್ನು ಇದಕ್ಕೆ ಸೇರಿಸಿ. ನಂತರ ಕೂದಲಿಗೆ ಇದನ್ನು ಹಚ್ಚಿ 2 ಗಂಟೆಗಳವರೆಗೆ ಕಾಯಿರಿ. ತದನಂತರ ನಿಮ್ಮ ಕೂದಲನ್ನು ಚೆನ್ನಾಗಿ ತೊಳೆದುಕೊಳ್ಳಿ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.