ಸಂತಾನ ನಿಯಂತ್ರಣಕ್ಕೆ ಏನೇನು ದಾರಿ..?

Video Description

ಸಂತಾನ ನಿಯಂತ್ರಣ ಮಾಡುವುದು ಹೇಗೆ? ಸಂತಾನ ನಿಯಂತ್ರಣಕ್ಕೆ ಏನೇನು ದಾರಿ..? ಸರಿಯಾದ ಜನನ ನಿಯಂತ್ರಣ ಆಯ್ಕೆ ಮಾಡಿಕೊಳ್ಳುವುದು ಒಂದು ರೀತಿಯಲ್ಲಿ ಗೊಂದಲವನ್ನುಂಟು ಮಾಡುವ ಕ್ರಿಯೆಯಾಗಿರುತ್ತದೆ. ಜೊತೆಗೆ ಅನೇಕ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಏಳುತ್ತವೆ. ಜನನ ನಿಯಂತ್ರಣ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಜೀವನಶೈಲಿ, ಆರೋಗ್ಯ, ವ್ಯಕ್ತಿತ್ವದ ವಿಧ, ಸಂಬಂಧದ ಸ್ಥಾನ ಮಾನ, ಅನುಕೂಲ (ನಿಮ್ಮ ಮತ್ತು ನಿಮ್ಮ ಸಂಗಾತಿಯ), ಲೈಂಗಿಕವಾಗಿ ಹರಡುವ ರೋಗಗಳ ಅಪಾಯ (ಎಸ್‌ಟಿಡಿ), ಜನನ ನಿಯಂತ್ರಣ ವಿಧಾನದ ವೆಚ್ಚ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಆಮೇಲೆ ಜನನ ನಿಯಂತ್ರಣವ ವಿಧಾನವನ್ನು ಆರಿಸಿಕೊಳ್ಳಬೇಕಾಗುತ್ತದೆ. ಹೊಸ ವಿಧಾನದಲ್ಲಿ ಜನಸಂಖ್ಯೆ ನಿಯಂತ್ರಣಕ್ಕಾಗಿ ಕಾಂಡೋಮ್ ಹಾಗೂ ಮಾತ್ರೆಗಳ ಅಗತ್ಯವಿರುವುದಿಲ್ಲ. ಬದಲಾಗಿ ವಜಿನಲ್‌ ರಿಂಗ್ ನ್ನು ಬಳಕೆ ಮಾಡಲಾಗುತ್ತದೆ. ಸಣ್ಣ ಪ್ರಮಾಣದಲ್ಲಿ ಹಾರ್ಮೋನುಗಳನ್ನು ಬಿಡುಗಡೆ ಮಾಡುವ ಪ್ಲಾಸ್ಟಿಕ್ ರಿಂಗ್ ಮಾದರಿಯಲ್ಲಿರಲಿರುವ ವಜಿನಲ್ ರಿಂಗ್‍ನ್ನು ಗರ್ಭ ನಿರೋಧಕವಾಗಿ ಬಳಕೆ ಮಾಡಲಾಗುತ್ತಿದೆ. ವಜಿನಲ್ ರಿಂಗ್ ಬಳಕೆಯಿಂದ ಬಂಜೆತನ ಉಂಟಾಗುವ ಆತಂಕವೂ ಇರುವುದಿಲ್ಲ ಎನ್ನುತ್ತಾರೆ ವೈದ್ಯರು. ವಜಿನಲ್ ರಿಂಗ್ ನ್ನು ಮಹಿಳೆಯರೇ ಅಳವಡಿಸಿಕೊಳ್ಳಬಹುದಾಗಿದ್ದು, ದೀರ್ಘಾವಧಿಯಲ್ಲಿ ಅಗತ್ಯವಿದ್ದರೆ ವೈದ್ಯರು ಹಾಗೂ ನರ್ಸ್ ಗಾಲ ಸಹಾಯದಿಂದ ಅಳವಡಿಸಿಕೊಳ್ಳಬಹುದಾಗಿದೆ. ಗರ್ಭಧಾರಣೆಯನ್ನು ನಿರೋಧಿಸುವ ಅತ್ಯಂತ ಸುಲಭ ಮತ್ತು ಅತಿ ಸುರಕ್ಷಿತ ವಿಧಾನವೆಂದರೆ ಲೈಂಗಿಕ ಕ್ರಿಯೆಯನ್ನು ನಡೆಸದೇ ಇರುವುದು. ಅದಲ್ಲದೆ ಮತ್ತೊಂದು ಉತ್ತಮ ವಿಧಾನವೆಂದರೆ ಜನನಾಂಗಗಳ ಸಂಪರ್ಕವನ್ನು ಹೊಂದದೇ ಇರುವುದು- ಇದಿಲ್ಲದೆಯೂ ಲೈಂಗಿಕ ಕ್ರಿಯೆಯು ಸಂತೃಪ್ತಿದಾಯಕವಾಗಿರಬಹುದು. ತಿಂಗಳ ಕೆಲವು ದಿನಗಳಲ್ಲಿ ಮಾತ್ರ ಗರ್ಭಧಾರಣೆ ಸಾಧ್ಯ ಎಂಬುದು ಮಹಿಳೆಯರಿಗೆ ಪುರಾತನ ಕಾಲದಿಂದಲೂ ತಿಳಿದಿತ್ತು. ಹಾಗಾಗಿ ಆ ದಿನಗಳಲ್ಲಿ ಲೈಂಗಿಕ ಕ್ರಿಯೆಯನ್ನು ತಪ್ಪಿಸಿದರೆ ಗರ್ಭಧಾರಣೆಯನ್ನು ತಡೆಯಬಹುದು ಎಂಬುದರ ಅರಿವಿತ್ತು. ಈ ವಿಧಾನಗಳಿಂದ ಯಾವುದೇ ಬಗೆಯ ಕೃತಕ ಗರ್ಭನಿರೋಧಕಗಳನ್ನು ಬಳಸದೆ ಗರ್ಭಧಾರಣೆಯನ್ನು ತಡೆಯಬಹುದು. ಗರ್ಭಧಾರಣೆಯನ್ನು ನಿರೋಧಿಸುವ ಅತ್ಯಂತ ಸುಲಭ ಮತ್ತು ಅತಿ ಸುರಕ್ಷಿತ ವಿಧಾನವೆಂದರೆ ಲೈಂಗಿಕ ಕ್ರಿಯೆಯನ್ನು ನಡೆಸದೇ ಇರುವುದು. ಅದಲ್ಲದೆ ಮತ್ತೊಂದು ಉತ್ತಮ ವಿಧಾನವೆಂದರೆ ಜನನಾಂಗಗಳ ಸಂಪರ್ಕವನ್ನು ಹೊಂದದೇ ಇರುವುದು- ಇದಿಲ್ಲದೆಯೂ ಲೈಂಗಿಕ ಕ್ರಿಯೆಯು ಸಂತೃಪ್ತಿದಾಯಕವಾಗಿರಬಹುದು. ತಿಂಗಳ ಕೆಲವು ದಿನಗಳಲ್ಲಿ ಮಾತ್ರ ಗರ್ಭಧಾರಣೆ ಸಾಧ್ಯ ಎಂಬುದು ಮಹಿಳೆಯರಿಗೆ ಪುರಾತನ ಕಾಲದಿಂದಲೂ ತಿಳಿದಿತ್ತು. ಹಾಗಾಗಿ ಆ ದಿನಗಳಲ್ಲಿ ಲೈಂಗಿಕ ಕ್ರಿಯೆಯನ್ನು ತಪ್ಪಿಸಿದರೆ ಗರ್ಭಧಾರಣೆಯನ್ನು ತಡೆಯಬಹುದು ಎಂಬುದರ ಅರಿವಿತ್ತು. ಈ ವಿಧಾನಗಳಿಂದ ಯಾವುದೇ ಬಗೆಯ ಕೃತಕ ಗರ್ಭನಿರೋಧಕಗಳನ್ನು ಬಳಸದೆ ಗರ್ಭಧಾರಣೆಯನ್ನು ತಡೆಯಬಹುದು.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.