ಮೂರನೇ ತಿಂಗಳ ಬಸಿರಿನ ಬವಣೆಗಳೇನು ಗೊತ್ತಾ..?

Video Description

ಮೂರನೇ ತಿಂಗಳಿನಲ್ಲಿ ಗರ್ಭಿಣಿಯರು ಅನುಭವಿಸುವ ಬವಣೆಗಳೇನು? ಮೂರನೇ ತಿಂಗಳ ಬಸಿರಿನ ಬವಣೆಗಳೇನು ಗೊತ್ತಾ..? ಗರ್ಭಿಣಿ ಸ್ತ್ರೀಯರ ಗರ್ಭದಲ್ಲಿ ಪ್ರಸವ ಪೂರ್ವ ಸ್ಥಿತಿಯಲ್ಲಿ ಮಗುವಿನ ಬೆಳವಣಿಗೆಯು ೯ ಹಂತಗಳಲ್ಲಿ ಅಂದರೆ, ನವ ಮಾಸಗಳವರೆಗೂ ನಡೆಯುತ್ತದೆ. ಆದರೆ ಕೇಲವು ಸಂದರ್ಭಗಳಲ್ಲಿ 7 ತಿಂಗಳಲ್ಲಿ ಮಗುವಿನ ಜನನ ಸಂಭವಿಸಬಹುದು. ಈ ರೀತಿಯ ಸನ್ನಿವೇಶಗಳಲ್ಲಿ ಕೇಲವು ಸುರಕ್ಷಿತ ಹೇರಿಗೆಗಳು ಸಹ ಕಂಡು ಬರುತ್ತವೆ. ಇನ್ನೂ ಕೇಲವು ಸನ್ನಿವೇಶಗಳಲ್ಲಿ ಶಿಶುಮರಣವು ಸಹ ಸಂಭವಿಸುತ್ತವೆ. ನವ ಮಾಸಗಳಲ್ಲಿ ಮಗುವಿನ ಬೆಳವಣಿಗೆಯ ಹಂತಗಳು ಈ ಕೆಳಗಿನಂತಿವೆ. ಮತ್ತು ಗರ್ಭಿಣಿ ಸ್ತ್ರೀಯ ಆರೋಗ್ಯದಲ್ಲಿ ಉಂಟಾಗುವ ಏರು-ಪೇರುಗಳನ್ನು ಸಹ ಕಾನಬಹುದು. ಬೀಜವು ಮೊಳಕೆಯೊಡೆಯುವ ಹಾಗೆ ಫಲಭರಿತ ಅಂಡಾಶಯದ ಉಂಡೆಯಲ್ಲಿನ ಜೀವಾಣುಗಳು ಮೊಳಕೆಯೊಡೆಯುತ್ತವೆ. ಮದಲನೇ ತಿಂಗಳಲ್ಲಿ ಗರ್ಭಕೊಶ ವಿಕಸನಗೊಳ್ಳುತ್ತದೆ. ಮಗುವಿನ ಕಣ್ಣಿನ ಗೂಡು ರಚನೆಯಾಗುತ್ತದೆ. ಅದಕ್ಕೆ ಹರಿದಾಡುವ ಜಂತುವಿನಂತಹ ತಲೆ ಮತ್ತು ಬಾಲಗಳಿರುತ್ತವೆ. ಅದರ ಕೈಕಾಲುಗಳು ಸ್ಪಷ್ಟವಾಗಿ ಮೊಳಕೆಯೊಡೆದಿರುತ್ತದೆ. ಅದು ಸಣ್ಣಗೆ ಸನಿಕೆಯ ಆಕಾರದಲ್ಲಿರುತ್ತದೆ. ಎರಡನೇಯ ತಿಂಗಳ ವೇಳೆಗೆ ಕೈ ಕಾಲಿನ ಬೆರಳುಗಳು ಆಕಾರ ಪಡೆಯುತ್ತಾ ಬರುತ್ತವೆ. ಮತ್ತು ಹಿಂಗಾಲು- ಮುಷ್ಟಿಗಳು ರೂಪುಗೊಳ್ಳುತ್ತವೆ. ಮಗು ತೇಲಾಡಲು ಪ್ರಾರಂಭಿಸುತ್ತದೆ. ತಲೆ ಗೋಳಾಕಾರವಾಗಿರುತ್ತದೆ. ಕೇಲವು ಹೆಂಗಸರಿಗೆ ತುಂಬಾ ವಾಂತಿಯಾಗುತ್ತದೆ ಮತ್ತು ಯಾವುದೇ ಆಹಾರವನ್ನು ತಿನ್ನಲು ಕುಡಿಯಲು ಸಾಧ್ಯವಾಗುವುದಿಲ್ಲ. ಇದು ೩ ತೊಂಗಳ ನಂತರವು ಮುಂದುವರೆದರೆ ವೈದ್ಯರನ್ನು ನೋಡುವುದು ಉತ್ತಮ ಅವರು ಕೊಡುವ ಔಷದಿಗಳಿಂದ ಮಗು ಬೆಳೆಯಲು ಸಹಾಯವಾಗುವುದಲ್ಲದೆ, ತಾಯಿ ನಿಶ್ಯಕ್ತಳಾಗುವುದನ್ನು ಮತ್ತು ಸಹಜ ಗರ್ಭಪಾತವಾಗುವುದನ್ನು ತಪ್ಪಿಸಬಹುದು. ಭಾರವಾದ ಕೆಲಸ ಮಾಡುವುದರಿಂದ ಕೇಲವರಿಗೆ ಗರ್ಭ ಧರಿಸಿದ ಮೊದಲ 3 ತಿಂಗಳಲ್ಲಿ ಯೋನಿಯ ಮೂಲಕ ರಕ್ತ ಹೋಗುತ್ತಿರುತ್ತದೆ. ಹಾಗಾದಲ್ಲಿ ಸಂಪೂರ್ಣ ವಿಶ್ರಾಂತಿ ಮಾಡಬೇಕು. ಇನ್ನೂ ಮುಂದುವರೆದರೆ ವೈದ್ಯರನ್ನು ಕಾಣಬೇಕು. ಈ ವೇಳೆಗೆ ಮಗುವಿನ ಹೃದಯ ಬಡಿತ ಪ್ರಾರಂಭವಾಗುತ್ತದೆ. ತಲೆಯ ಮತ್ತು ಕಣ್ಣುಹುಬ್ಬಿನ ಕೂದಲು ಬೆಳೆಯಲು ಪ್ರಾರಂಭವಾಗುತ್ತದೆ. ಈಗಾಗಲೇ ರಚನೆಯಾಗಿರುವ ತಟ್ಟಿ (ಕಸ) ಹೊಕ್ಕಳು ಕುಡಿಯ ಮೂಲಕ ಅದಕ್ಕೆ ಆಹಾರವನ್ನು ಒದಗಿಸುತ್ತವೆ. ಮಗುವಿನ ಉಸಿರಾಟ ಪ್ರಾರಂಭವಾಗುತ್ತದೆ. ಅದು ತಟ್ಟೆಯ (ಕಸ) ಒಳಗಡೆ ಇರುವ ಆಮ್ನಿಯೊಟಿಕ್ ರಸವನ್ನು ಕುಡಿಯಲು ಶುರುಮಾಡಿ ಮೂತ್ರ ವಿಸರ್ಜನೆ ಮಾಡಹತ್ತುತ್ತವೆ. ಈವೇಳೆಗೆ ಸಾಮಾನ್ಯವಾಗಿ ವಾಂತಿ ಬರುವುದು ಕಡಿಮೆಯಾಗುತ್ತದೆ. ಇಲ್ಲವೇ ನಿಂತೇ ಹೋಗುತ್ತದೆ ಕೆಳಹೊಟ್ಟೆಯನ್ನು ಮುಟ್ಟಿಕೊಂಡು ಭ್ರೂಣ ಇರುವುದನ್ನು ಕಂಡುಕೊಳ್ಳಬಹುದು. ಕೆಲವು ಮಹಿಳೆಯರಿಗೆ ಮೂರನೇ ತ್ರೈಮಾಸಿಕದಲ್ಲಿ ತುರಿಕೆಯಂತಹ ಆಘಾತಕಾರಿ ಲಕ್ಷಣ ಕಾಣಿಸಿಕೊಳ್ಳುತ್ತದೆ. 7ನೇ ತಿಂಗಳ ಸುಮಾರಿಗೆ ಗರ್ಭಿಣಿಯ ಹೊಟ್ಟೆಯ ಸುತ್ತ ತೀವ್ರವಾದ ತುರಿಕೆಯನ್ನು ಅನುಭವಿಸುತ್ತಾರೆ. ಇದು ಎಲ್ಲಾ ಮಹಿಳೆಯರಲ್ಲೂ ಕಾಣಿಸಿಕೊಳ್ಳುವುದಿಲ್ಲ. ಆದರೆ ಸಾಮಾನ್ಯವಾದ ಸಮಸ್ಯೆ ಎಂದು ಪರಿಗಣಿಸಲಾಗಿದೆ. ಮಗುವಿನ ಬೆಳವಣಿಗೆ ಉಂಟಾದಂತೆ ಚರ್ಮವು ವಿಸ್ತ್ರಣೆಗೆ ಒಳಗಾಗುತ್ತದೆ. ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಹಾರ್ಮೋನ್‍ಗಳ ಬದಲಾವಣೆಯಿಂದ ಚರ್ಮವು ಶುಷ್ಕತೆಗೆ ಒಳಗಾಗಿರುತ್ತದೆ. ಆಗ ಹಿಗ್ಗುವಿಕೆ ಉಂಟಾದಾಗ ಚರ್ಮ ಬಿರಿದು ತುರಿಕೆ ಹಾಗೂ ನೋವು ಕಾಣಿಸಿಕೊಳ್ಳುವುದು. ಅಂತಹ ಸಂದರ್ಭದಲ್ಲಿ ವೈದ್ಯರ ಸಲಹೆಯ ಮೇರೆಗೆ ಸೂಕ್ತವಾದ ಮಾಯ್ಚುರೈಸ್ ಕ್ರೀಮ್ ಅಥವಾ ವಿಟಮಿನ್ ಇ ಭರಿತವಾದ ಎಣ್ಣೆಯನ್ನು ಅನ್ವಯಿಸಬೇಕಾಗುವುದು. ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಸಮಸ್ಯೆಯೆಂದರೆ ಪಿಂಕ್ ಟೂತ್ ಬ್ರಷ್. ಗರ್ಭಾವಸ್ಥೆಯಲ್ಲಿ ಉಂಟಾಗುವ ಹಾರ್ಮೋನ್ ಬದಲಾವಣೆಯಿಂದ ಕೆಲ ಮಹಿಳೆಯರಲ್ಲಿ ಮೂಗು ಮತ್ತು ಬಾಯಲ್ಲಿ ರಕ್ತ ಬರುವ ಸಾಧ್ಯತೆಗಳಿರುತ್ತವೆ. ಬಾಯಲ್ಲಿ ಒಸಡುಗಳಿಂದ ರಕ್ತಬರುವುದು. ಈ ಸಮಸ್ಯೆಯ ನಿವಾರಣೆಗೆ ಮೌಖಿಕವಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ರಕ್ತಸ್ರಾವದ ಒಸಡು ಇದೆಯೆಂದು ಹಲ್ಲುಜ್ಜುವುದನ್ನು ಬಿಡಬಾರದು.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.