ಲಿಫ್ಟ್ ನಲ್ಲಿ ಸಿಕ್ಕಿ ಹಾಕಿಕೊಂಡರೆ ಹೀಗೆ ಮಾಡಿ..!

Video Description

ಒಮ್ಮೊಮ್ಮೆ ನಮ್ಮ ಜೀವನದಲ್ಲಿ ನಮಗೆ ಗೊತ್ತಿಲ್ಲದಂತೆ ಕೆಲವೊಂದು ಅನಿರೀಕ್ಷಿತ ಘಟನೆಗಳು ನಡೆದುಹೋಗುತ್ತವೆ. ಆ ಸಮಯದಲ್ಲಿ ಗಾಬರಿಯಾಗದೆ, ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಇಂದಿಲ್ಲಿ ನಾವು ಹೇಳಹೊರಟಿರುವುದು ಅಂತಹದ್ದೇ ಒಂದು ಅನಿರೀಕ್ಷಿತ ಸನ್ನಿವೇಶದ ಕುರಿತಾಗಿದೆ. ಒಮ್ಮೊಮ್ಮೆ ನಾವು ಲಿಫ್ಟ್‌ನಲ್ಲಿ ಹೋಗುತ್ತಿರಬೇಕಾದರೆ ಅಚಾನಕ್ಕಾಗಿ ಲಿಫ್ಟ್ ಕಾರ್ಯನಿರ್ವಹಿಸದೆ ನಿಂತುಬಿಡುತ್ತದೆ. ನಾವು ಲಿಫ್ಟ್‌ನಲ್ಲಿ ಸಿಲುಕಿ ಹಾಕಿಕೊಂಡಿರುತ್ತೇವೆ. ಕರೆಂಟ್ ಕೂಡ ಹೊರಟು ಹೋಗುತ್ತದೆ ಈ ಸಮಯದಲ್ಲಿ ಹೆದರದೆ ಗಾಬರಿಯಾಗದೆ ಸಮಯೋಚಿತವಾಗಿ ಕೆಲಸ ಮಾಡಬೇಕಾಗುತ್ತದೆ. ದೀರ್ಘ ಉಸಿರನ್ನು ಬಿಡಿ. ಏಕೆಂದರೆ ನಿಮ್ಮ ಉಸಿರಾಟ ಈ ಸಮಯದಲ್ಲಿ ಅಗತ್ಯವಾಗಿದೆ ಕಾಲ್ ಬಟನ್ ಅನ್ನು ಪ್ರೆಸ್ ಮಾಡಿ ನಿಮ್ಮ ಇಲಾವೇಟರ್‌ನಲ್ಲಿ ತೊಂದರೆ ಉಂಟಾದರೆ ಕಾಲ್ ಬಟನ್ ಪ್ರೆಸ್ ಮಾಡಿ ನಿಮ್ಮ ಸಹಾಯಕ್ಕೆ ಯಾರು ಬೇಕಾದರೂ ಬರಬಹುದು ಇನ್ನು ಲಿಫ್ಟ್‌ನಲ್ಲಿ ಬೇರೆ ಯಾರಾದರೂ ನಿಮ್ಮೊಂದಿಗೆ ಇದ್ದರೆ ಅವರಿಗೆ ನೀವು ಸಮಾಧಾನ ಹೇಳಬೇಕು. ಇಲ್ಲದಿದ್ದರೆ ಅವರು ಕೂಡ ಹೆದರುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಲಿಫ್ಟ್ ಅನ್ನು ಪ್ರವೇಶಿಸುವ ಸಮಯದಲ್ಲಿ ಅದನ್ನು ಒಮ್ಮೆ ಪರಿಶೀಲಿಸಿ ನಂತರ ಲಿಫ್ಟ್ ಬಳಸಿ. ಇನ್ನು ನೀವಿರುವ ಸ್ಥಳದಲ್ಲಿ ರಿಸೆಪ್ಶನ್ ಇದ್ದಲ್ಲಿ ಲಿಫ್ಟ್ ಹತ್ತುವ ಮುಂಚೆಯೇ ಅವರ ನಂಬರ್ ಪಡೆದುಕೊಳ್ಳಿ ಇನ್ನು ಫೋನ್‌ನಲ್ಲಿ ವೈಫೈ ಇದ್ದಲ್ಲಿ ನಿಮ್ಮ ಮನೆವಯವರು ಅಥವಾ ಸ್ನೇಹಿತರಿಗೆ ಕರೆ ಮಾಡಿ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.