ರೂಟ್ ಕೆನಾಲ್ ಮಾಡಿಸಿಕೊಂಡಿದ್ದೀರಾ..?

Video Description

ರೂಟ್ ಕೆನಾಲ್ ಮಾಡಿಸಿಕೊಂಡರೆ ಏನು ಮಾಡಬೇಕು? ರೂಟ್ ಕೆನಾಲ್ ಮಾಡಿಸಿಕೊಂಡಿದ್ದೀರಾ..? ಸಾಮಾನ್ಯವಾಗಿ ದಂತಕ್ಷಯವು ಆಳವಾದಲ್ಲಿ ರೂಟ್ ಕೆನಾಲ್ ಚಿಕಿತ್ಸೆ ಮಾಡಲಾಗುತ್ತದೆ. ರೂಟ್ ಕೆನಾಲ್ ಚಿಕಿತ್ಸೆಯಾದ ನಂತರ ಹಲ್ಲುಗಳು ಶಿಥಿಲವಾಗಿರುತ್ತವೆ. ಮುರಿದುಹೋಗುವ ಸಾಧ್ಯತೆಗಳು ಕೂಡ ಜಾಸ್ತಿ. ರೂಟ್ ಕೆನಾಲ್ ಚಿಕಿತ್ಸೆ ಯಾವಾಗ ಬೇಕಾಗುತ್ತದೆಂದು ನೋಡೋಣ. ಅತಿಯಾದ ಸೋಂಕು ಆಳವಾದ ದಂತಕುಳಿಗಳು ಬಿರುಕು ಬಿಟ್ಟ ಅಥವಾ ಭಾಗಶಃ ಮುರಿದ ಹಲ್ಲುಗಳು ಮುಂಚಿತವಾಗಿ ದಂತಕುಳಿಗಳಿದ್ದು ಅದರ ಚಿಕಿತ್ಸೆಯ ನಂತರವೂ ನೋವು ಮುಂದುವರಿದರೆ ್ಝ ಹಲ್ಲುಗಳು ಅತಿಯಾಗಿ ಸವೆದು ಬಿಸಿ ಅಥವಾ ತಂಪು ಪಾನೀಯ / ಆಹಾರ ತೆಗೆದುಕೊಳ್ಳುವಾಗ ಸೂಕ್ಷ್ಮತೆ (sensitivity) ಉಂಟಾದರೆ ಅಗೆಯುವಾಗ ಹಲ್ಲುನೋವು ಉಂಟಾದರೆ ಹುಳುಕು ಹಲ್ಲುಗಳಿಗೆ ಹೊಂದಿಕೊಂಡ ವಸಡಿನಲ್ಲಿ ಪದೇಪದೆ ಬಾವು ಅಥವಾ ಕೀವು ಕಾಣುತ್ತಿದ್ದಲ್ಲಿ ಯಾವುದೇ ಕಾರಣವಿಲ್ಲದಿದ್ದರೂ ಅಥವಾ ಮಲಗಿದಾಗ ಹಲ್ಲುನೋವು ಕಾಣಿಸಿಕೊಂಡರೆ ರೂಟ್ ಕೆನಾಲ್ ಚಿಕಿತ್ಸೆಯ ಅಗತ್ಯವಿರುತ್ತದೆ. ರೂಟ್ ಕೆನಾಲ್ ಚಿಕಿತ್ಸೆಯನ್ನು ನಡೆಸುವ ಮೊದಲು ಹಲ್ಲಿನ ಎಕ್ಸ್-ರೇ ತೆಗೆಯಬೇಕಾಗುತ್ತದೆ ಮತ್ತು ಆ ಹಲ್ಲಿನ ಸುತ್ತಲಿನ ವಸಡು ಮತ್ತು ಮೂಳೆಯ ಗುಣಮಟ್ಟದ ಆಧಾರದ ಮೇಲೆ ರೋಗದ ಮುನ್ನರಿವು ಹೇಗಿರುತ್ತದೆ ಎಂದು ಅರಿತು ಚಿಕಿತ್ಸಾವಿಧಾನವನ್ನು ಆಯ್ಕೆ ನೀಡುತ್ತಾರೆ. ಸೋಂಕಿತ pulp ತೆಗೆದು ಚಿಕಿತ್ಸೆ ನೀಡುವುದರಿಂದ ನೈಜ ಹಲ್ಲುಗಳನ್ನು ಉಳಿಸಿಕೊಳ್ಳಲು ಸಹಾಯವಾಗುತ್ತದೆ. ರೂಟ್ ಕೆನಾಲ್ ಚಿಕಿತ್ಸೆಗೆ ಪರ್ಯಾಯ ಎಂದರೆ ಹಲ್ಲು ತೆಗೆಯುವುದು ಮತ್ತು ಆ ಜಾಗದಲ್ಲಿ ಕೃತಕ ಹಲ್ಲುಗಳನ್ನು ಅಳವಡಿಸುವುದು. ರೂಟ್ ಕೆನಾಲ್ ಚಿಕಿತ್ಸೆಯ ನಂತರ ಕೆಲವು ದಿನಗಳ ಕಾಲ ಗಮನಿಸಿ ಶಾಶ್ವತ ಫಿಲ್ಲಿಂಗ್ ಮಾಡಿ ಚಿಕಿತ್ಸೆಯಾದ ಹಲ್ಲಿಗೆ ಕ್ಯಾಪ್ ಹಾಕುತ್ತಾರೆ. ಇಲ್ಲದಿದ್ದರೆ ಹಲ್ಲು ಮುರಿತಕ್ಕೆ ಒಳಗಾಗುವ ಸಂಭವ ಹೆಚ್ಚಿರುತ್ತದೆ. ಮಕ್ಕಳಲ್ಲಿ ಹುಳುಕು ಆಳವಾಗಿದ್ದಲ್ಲಿ ಹಾಲು ಹಲ್ಲುಗಳಿಗೂ ರೂಟ್ ಕೆನಾಲ್ ಚಿಕಿತ್ಸೆ ಮಾಡಿ ಅದು ಬೀಳುವವರೆಗೂ ಕಾಪಾಡಿಕೊಳ್ಳಬಹುದು. ಚಿಕಿತ್ಸೆಯಾದ ನಂತರ ನಿಯತವಾಗಿ ವೈದ್ಯರನ್ನು ಭೇಟಿ ಮಾಡಿ ಉತ್ತಮ ಮೌಖಿಕ ಆರೋಗ್ಯವನ್ನು ಕಾಪಾಡಿಕೊಂಡರೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಸ್ಥಳೀಯ ಅರಿವಳಿಕೆ ಧರಿಸಿದಾಗ, ನಿಮ್ಮ ಹಲ್ಲು ವಿಧಾನದಿಂದ ನೋಯಬಹುದು. ನಿಮ್ಮ ದಂತವೈದ್ಯರು ಮನೆಯಲ್ಲಿ ತೆಗೆದುಕೊಳ್ಳಲು ನೋವು ನಿವಾರಕವನ್ನು ಶಿಫಾರಸು ಮಾಡಬಹುದು, ಮತ್ತು ನಿಮ್ಮ ಮೂಲ ಕಾಲುವೆಯ ಹಿಂಭಾಗದ ಸಂದರ್ಭಗಳನ್ನು ಅವಲಂಬಿಸಿ, ಪ್ರತಿಜೀವಕಗಳನ್ನು ಹಲ್ಲುಗಳಲ್ಲಿ ಉಳಿದ ಯಾವುದೇ ಸೋಂಕನ್ನು ತೆರವುಗೊಳಿಸಲು ಸೂಚಿಸಲಾಗುತ್ತದೆ. ನೀವು ಪ್ರಕ್ರಿಯೆಯ ಮೊದಲು ಪ್ರತಿಜೀವಕಗಳ ಮೇಲೆ ಇದ್ದರೆ, ನಿಮ್ಮ ದಂತವೈದ್ಯರು ಉಳಿದ ಔಷಧಿಗಳನ್ನು ಮುಗಿಸಲು ನಿಮಗೆ ಸೂಚನೆ ನೀಡುತ್ತಾರೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.