ಮಗುವಿನ ಲಂಚ್ ಬಾಕ್ಸ್ ಹೀಗಿರಲಿ

Video Description

ಮಗು ಇಷ್ಟಪಡುವಂತೆ ಲಂಚ್ ಬಾಕ್ಸ್ ಸಿದ್ಧಪಡಿಸುವುದು ಹೇಗೆ? ಮಗುವಿನ ಲಂಚ್ ಬಾಕ್ಸ್ ಹೀಗಿರಲಿ ನಮ್ಮ ಮಗು ಅದು ತಿನ್ನುವುದಿಲ್ಲ ಇದು ತಿನ್ನುವುದಿಲ್ಲ ಬರಿಯ ರಸ್ತೆ ಬದಿಯ ಆಹಾರದಿಂದಲೇ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ, ಜಂಕ್ ಫುಡ್‌ಗಳೇ ಅವರಿಗಿಷ್ಟ ಎಂಬುದು ಹೆಚ್ಚಿನ ತಾಯಂದಿರ ದೂರಾಗಿದೆ. ಆದರೆ ನಿಮ್ಮ ಮಗು ನೀವು ಮಾಡಿಕೊಟ್ಟ ಆಹಾರವನ್ನು ತಿನ್ನಬೇಕು ಎಂದಾದಲ್ಲಿ ಅದನ್ನು ಕೊಂಚ ಕಲರ್‌ಫುಲ್ ಮತ್ತು ಟೇಸ್ಟೀಫುಲ್ ಆಗಿ ತಯಾರು ಮಾಡಬೇಕು. ನಿಮ್ಮ ಮಗುವಿಗೆ ಯಾವ ಆಹಾರ ಇಷ್ಟ ಎಂಬುದನ್ನು ನೀವು ಅರಿತುಕೊಳ್ಳಬೇಕು. ಉದಾಹರಣೆಗೆ ಮಗುವಿಗೆ ಪನೀರ್, ಚೀಸ್, ಇಷ್ಟ ಎಂದಾದಲ್ಲಿ ಇದನ್ನು ಬಳಸಿಕೊಂಡು ಬೇರೆ ಬೇರೆ ತರಕಾರಿಗಳನ್ನು ಮಿಶ್ರ ಮಾಡಿ ನೀವು ಖಾದ್ಯಗಳನ್ನು ತಯಾರು ಮಾಡಬಹುದು. ಪನ್ನೀರ್ ಪಲಾವ್, ಪನ್ನೀರ್ ಗ್ರೇವಿ, ಪನ್ನೀರ್ ಚಪಾತಿ, ಪನ್ನೀರ್ ಫ್ರೈ ಹೀಗೆ ನೀವು ರೆಸಿಪಿಗಳನ್ನು ಹುಡುಕಿದರೆ ಮಗುವಿಗೆ ಬೇರೆ ಬೇರೆ ರೀತಿಯಲ್ಲಿ ಪನ್ನೀರ್ ರೆಸಿಪಿಗಳನ್ನು ಮಾಡಿಕೊಡಬಹುದು. ಮಗುವಿಗೆ ಊಟದ ಬಾಕ್ಸ್ ಕಳುಹಿಸುವಾಗ ಅದನ್ನು ಸುಂದರವಾಗಿ ಗಾರ್ನಿಶ್ ಮಾಡಿ. ಟೊಮೇಟೊ ಕತ್ತರಿಸಿ ಅದರ ಮೇಲೆ ಜೋಡಿಸಿ ಇಲ್ಲದಿದ್ದರೆ ಕೊತ್ತಂಬರಿ ಸೊಪ್ಪು, ಸೌತೆಕಾಯಿಯಿಂದ ಅಲಂಕರಿಸಿ ಇದರಿಂದ ಮಗು ಸಲಾಡ್ ಕೂಡ ತಿಂದಂತಾಗುತ್ತದೆ. ಬೇರೆ ಬೇರೆ ರೆಸಿಪಿಗಳನ್ನು ನಿಮಗೆ ತಯಾರು ಮಾಡಲು ಸಾಧ್ಯವಿಲ್ಲದಿದ್ದರೆ ಇದ್ದ ರೆಸಿಪಿಯನ್ನೇ ಕೊಂಚ ತುಪ್ಪ ಗೋಡಂಬಿ ಹಾಕಿ ಸುಂದರವಾಗಿ ರುಚಿಯಾಗಿ ಸಿದ್ಧಪಡಿಸಿಕೊಡಿ. ಮರುದಿನ ಮಗು ಅದೇ ರೆಸಿಪಿಯನ್ನು ಮಾಡಿಕೊಡುವಂತೆ ನಿಮ್ಮನ್ನು ಕೇಳುವಂತಾಗಲಿ. ಮಗುವಿಗೆ ಸಂತುಲಿತ ಆಹಾರವನ್ನು ನೀಡಬೇಕು ಎಂಬುದು ಪ್ರತಿಯೊಬ್ಬ ತಾಯಿಯ ಬಯಕೆಯಾಗಿರುತ್ತದೆ. ನಿಮ್ಮ ಮಗುವಿನ ಆಹಾರದಲ್ಲಿ ಪ್ರೊಟೀನ್, ವಿಟಮಿನ್‌ಗಳ ಅಂಶ ಸರಿಯಾಗಿ ಇದೆ ಎಂಬುದನ್ನು ಮನನ ಮಾಡಿಕೊಳ್ಳಿ. ಯಾವ ಆಹಾರ ಉತ್ತಮ ಯಾವುದು ಕೆಟ್ಟದ್ದು ಎಂಬುದನ್ನು ಅವರಿಗೆ ತಿಳಿಹೇಳಿ. ರಸ್ತೆ ಬದಿಯ ಆಹಾರಗಳನ್ನು ತಿಂದರೆ ಬಂದೊದಗುವ ಅಪಾಯಗಳ ಬಗ್ಗೆ ಅವರಿಗೆ ತಿಳಿಸಿಕೊಡಿ. ಮಗುವಿನ ಬಾಕ್ಸ್‌ಗೆ ನೀವು ಹಣ್ಣು ಕಳುಹಿಸುತ್ತಿದ್ದೀರಿ ಎಂದಾದಲ್ಲಿ ಒಂದೇ ಹಣ್ಣನ್ನು ಕಳುಹಿಸುವ ಬದಲಿಗೆ ಫ್ರುಟ್ ಸಲಾಡ್ ಅಥವಾ ತರಕಾರಿ ಸಲಾಡ್ ಅನ್ನು ಮಾಡಿಕೊಡಿ. ಹಾಲಿನೊಂದಿಗೆ ಚಾಕಲೇಟ್, ಸ್ಟ್ರಾಬೆರ್ರಿ ಸಿರಪ್‌ಗಳನ್ನು ಮಿಶ್ರ ಮಾಡಿ ಅವರಿಗೆ ಕುಡಿಯಲು ನೀಡಿ. ಹಾರ್ಲಿಕ್ಸ್, ಬೂಸ್ಟ್ ಇಷ್ಟಪಡುತ್ತಿದ್ದರೆ ಅದನ್ನು ಕೂಡ ಸ್ವಲ್ಪ ಬೆರೆಸಿ ಕೊಡಿ. ಆದಷ್ಟು ಸಕ್ಕರೆ ತಿನಿಸುಗಳನ್ನು ಮಗುವಿಗೆ ಕಡಿಮೆ ನೀಡಿ. ಆದಷ್ಟು ಮಕ್ಕಳು ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವಂತೆ ಮಾಡಿ. ಮಗುವಿನ ಲಂಚ್ ಬಾಕ್ಸ್ ಪ್ಲಾಸ್ಟಿಕ್‌ನದ್ದಾಗದಿರಲಿ ಟಪ್ಪರ್‌ ವೇರ್ ಇಲ್ಲದಿದ್ದರೆ ಸ್ಟೀಲ್‌ ಡಬ್ಬದಲ್ಲಿಯೇ ಆಹಾರಗಳನ್ನು ಪ್ಯಾಕ್ ಮಾಡಿಕೊಡಿ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.