ಆಯಿಲ್ ಪುಲ್ಲಿಂಗ್ ನಿಮಗೆ ಗೊತ್ತಾ..?

Video Description

ಆಯಿಲ್ ಪುಲ್ಲಿಂಗ್ ಮಾಡುವುದರಿಂದ ದೊರೆಯುವ ಪ್ರಯೋಜನಗಳೇನು? ಆಯಿಲ್ ಪುಲ್ಲಿಂಗ್ ನಿಮಗೆ ಗೊತ್ತಾ..? ಪುರಾತನ ಆಯುರ್ವೇದೀಯ ವಿಧಾನವಾಗಿರುವ ಆಯಿಲ್ ಪುಲ್ಲಿಂಗ್ ಅಥವಾ ತೈಲ ಹೀರುವಿಕೆ ಹೆಸರುವಾಸಿ ಮತ್ತು ಹೆಚ್ಚು ಫಲಕಾರಿಯಾಗಿರುವ ಔಷಧವಾಗಿದೆ.ಹಾಗಿದ್ದರೆ ಆಯಿಲ್ ಪುಲ್ಲಿಂಗ್ ಎಂದರೇನು? ನಿಮ್ಮ ಬಾಯಿಯಲ್ಲಿ ಹೆಚ್ಚು ಪ್ರಮಾಣದ ತೈಲವನ್ನು ಇರಿಸಿಕೊಂಡು ಬಾಯಿಯನ್ನು ಸ್ವಚ್ಛಗೊಳಿಸುವುದಾಗಿದೆ. ಈ ಪದ್ಧತಿಯಲ್ಲಿ ಸುಮರು ೧೦ ಮಿಲಿಲೀಟರ್ ಅಂದರೆ ಎರಡು ಟೇಬಲ್ ಚಮಚದಷ್ಟು ಶುದ್ಧೀಕರಿಸಿದ ಸೂರ್ಯಕಾಂತಿ ಎಣ್ಣೆ ಅಥವಾ ಶೇಂಗಾ(ಕಡಲೇಕಾಯಿ) ಎಣ್ಣೆಯನ್ನು ಬಾಯಿಯಲ್ಲಿ ಹಾಕಿಕೊಂಡು 10 ರಿಂದ 15 ನಿಮಿಷ ನಿಧಾನವಾಗಿ ಮುಕ್ಕಳಿಸುವರು. ಆಕಸ್ಮಿಕವಾಗಿ ಒಂದಿಷ್ಟು ಎಣ್ಣೆ ಹೊಟ್ಟೆಯಲ್ಲಿ ಹೋದರೆ ಗಾಬರಿ ಆಗಬೇಕಿಲ್ಲ, ಅದರಿಂದ ಏನೂ ಅಪಾಯ ಇಲ್ಲ. ಆಯಿಲ್ ಪುಲ್ಲಿಂಗ್ ನಿಂದ ಸಾಮಾನ್ಯವಾಗಿ ಎಲ್ಲ ರೋಗಗಳು ನಿವಾರಣೆಯಾಗುತ್ತವೆ, ಇದು ರೋಗ ನಿವಾರಕವೂ ರೋಗ ನಿರೋಧಕವೂ ಆಗಿದೆ ಎಂದು ಹೇಳಲಾಗುತ್ತದೆ. ನೀವು ಎದ್ದ ನಂತರ ನೀರನ್ನು ಕುಡಿಯುವ ಮೊದಲು ಅಥವಾ ನಿಮ್ಮ ಹಲ್ಲನ್ನು ಉಜ್ಜಿಕೊಂಡ ನಂತರ ಹೆಚ್ಚು ಪ್ರಮಾಣದ ಎಣ್ಣೆಯನ್ನು ಬಾಯಲ್ಲಿ ಹಾಕಿಕೊಂಡು ಬಾಯಿ ಮುಕ್ಕಳಿಸಿ. ಇದು ಬ್ಯಾಕ್ಟೀರಿಯಾ, ಮತ್ತು ವಿಷಕಾರಿ ಅಂಶಗಳನ್ನು ಬಾಯಿಯಿಂದ ಹೊರಹಾಕುವಲ್ಲಿ ಸಹಕಾರಿಯಾಗಿದೆ. ತೆಂಗಿನ ಎಣ್ಣೆ, ವಾಲ್‌ನಟ್ ಎಣ್ಣೆ, ಆಲೀವ್ ಆಯಿಲ್ ಅನ್ನು ಈ ವಿಧಾನಕ್ಕಾಗಿ ನಿಮಗೆ ಬಳಸಿಕೊಳ್ಳಬಹುದು. ಸೈನಸ್ ಮತ್ತು ಇತರ ಕಾಯಿಲೆಗಳನ್ನು ದೂರವಿಡಲು ಆಯಿಲ್ ಪುಲ್ಲಿಂಗ್ ಸಹಕಾರಿಯಾಗಿದೆ. ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಮತ್ತು ಇತರ ವಿಷಕಾರಿ ಅಂಶಗಳನ್ನು ಹೊರಹಾಕುವ ಈ ವಿಧಾನ ಮ್ಯೂಕಸ್ ಒಳಚರ್ಮದ ಆರೋಗ್ಯಕ್ಕೆ ರಕ್ಷಕನಾಗಿದೆ. ಸಂಧಿ ಮತ್ತು ಬೆನ್ನು ನೋವಿನಿಂದ ಪರಿಹಾರ ಕಂಡುಕೊಳ್ಳಲು ಹಲವಾರು ಜನರು ಆಯಿಲ್ ಪುಲ್ಲಿಂಗ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಆಯಿಲ್ ಪುಲ್ಲಿಂಗ್ ವಿಧಾನ ಫಲವನ್ನು ಸ್ವಲ್ಪ ನಿಧಾನವಾಗಿ ದಯಪಾಲಿಸುತ್ತದಾದರೂ ಸಂಧಿವಾತವನ್ನು ಬುಡದಿಂದ ಹೊಡೆದೋಡಿಸುತ್ತದೆ. ಅಯಿಲ್ ಪುಲ್ಲಿಂಗ್ ಬ್ಯಾಕ್ಟೀರಿಯಾವನ್ನು ಹೇಗೆ ದೂರಮಾಡುತ್ತದೋ ಅಂತೆಯೇ ಬಾಯಿ ವಾಸನೆಯನ್ನು ನಿವಾರಿಸುವಲ್ಲಿ ಸರಳ ಮತ್ತು ನೈಸರ್ಗಿಕ ವಿಧಾನವಾಗಿದೆ. ಕೆಲವೊಂದು ಶೀತಲ ತೈಲವನ್ನು ಈ ಸಮಸ್ಯೆಯ ಪರಿಹಾರಕ್ಕಾಗಿ ಆಯಿಲ್ ಪುಲ್ಲಿಂಗ್ ವಿಧಾನಕ್ಕೆ ಬಳಸಿಕೊಳ್ಳಲಾಗುತ್ತದೆ. ವಸಡನ್ನು ಸುದೃಢವಾಗಿಸಿ ದಂತಕುಳಿಯ ವಿರುದ್ಧ ಹೋರಾಡುತ್ತದೆ ಮತ್ತು ಸೆನ್ಸಿಟಿವಿಟಿಯನ್ನು ತಗ್ಗಿಸುತ್ತದೆ. ಆಯಿಲ್ ಪುಲ್ಲಿಂಗ್‌ನ ಆರೋಗ್ಯಕರ ಪ್ರಯೋಜನ ಇದಾಗಿದ್ದು ಥೈರಾಯ್ಡ್ ಅನ್ನು ನೈಸರಗಿಕವಾಗಿ ಶಮನಗೊಳಿಸುತ್ತದೆ. ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಲು ತೆಂಗಿನೆಣ್ಣೆಯನ್ನು ಬಳಸಿ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.