ಮ್ಯೂಸಿಕ್ ಥೆರಪಿ - ನಿಮಗೆಷ್ಟು ಗೊತ್ತು..?

Video Description

ಮ್ಯೂಸಿಕ್ ಥೆರಪಿ ನಿಮ್ಮ ಮನಸ್ಸಿಗೆ ಸಾಂತ್ವಾನ ಮ್ಯೂಸಿಕ್ ಥೆರಪಿ - ನಿಮಗೆಷ್ಟು ಗೊತ್ತು..? ಒತ್ತಡ ನಿವಾರಣೆಗೆ ಇಂದು ಹೆಚ್ಚು ಜನಪ್ರಿಯವಾಗುತ್ತಿರುವ ಟ್ರೆಂಡ್ ಮ್ಯೂಸಿಕ್ ಥೆರಪಿಯಾಗಿದೆ. ತುಂಬಾ ದುಃಖವಾದಾಗ ಅಥವಾ ಸಂತೋಷ ಆದಾಗ ಸಂಗೀತವನ್ನು ಕೇಳುತ್ತಿದ್ದರೆ ಅದು ಕೂಡ ನಮ್ಮ ಭಾವನೆಗೆ ಸ್ಪಂದಿಸುತ್ತಿರುವಂತೆ ಭಾಸವಾಗಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.ಸಂಗೀತ ಮನರಂಜನೆ ಅಥವಾ ಮನ ನೆಮ್ಮದಿಯನ್ನು ಮಾತ್ರ ಸೀಮಿತವಾಗಿಲ್ಲ ಕಾಯಿಲೆಗಳನ್ನು ಹೋಗಲಾಡಿಸುವ ದಿವ್ಯ ಮಂತ್ರವಾಗಿ ಕೆಲಸ ಮಾಡುತ್ತದೆ ಎಂದು ತಿಳಿದು ಬಂದಿದೆ. ಸಂಗೀತದಿಂದ ಮನಸ್ಸಿಗೆ ಮು ಆಹ್ಲಾದ ದೊರೆಯುತ್ತದೆ. ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಸಂಗೀತಕ್ಕಿದೆ. ಆಯುರ್ವೇದ ಚಿಕಿತ್ಸೆಯಲ್ಲಿ ಅನೇಕ ಕಾಯಿಲೆಗಳನ್ನು ಗುಣಪಡಿಸಲು ಸಂಗೀತವನ್ನು ಬಳಸುತ್ತಾರೆ. ಭೈರವಿ, ಕಲ್ಯಾಣ್, ಯಮನ್ ಮುಂತಾದ ರಾಗಗಳನ್ನು ಮೂಳೆ ಸಂಬಂಧಿ ರೋಗಳನ್ನು ಗುಣಪಡಿಸಲು ಬಳಸುತ್ತಾರೆ. ತಬಲ, ಡೋಲು, ತಮಟೆ ಇವುಳನ್ನು ಖಿನ್ನತೆ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುವುದು. ಕೊಳಲು, ಗಿಟಾರ್, ಸಿತಾರ್ ಮಾನಸಿಕ ಸಮತೋಲನ ಕಳೆದು ಕೊಂಡ ಜನರಿಗೆ ಇದನ್ನು ಕೇಳಿಸಿದರೆ ಅವರು ಮಾನಸಿಕವಾಗಿ ಸದೃಢವಾಗಲು ಸಹಾಯ ಮಾಡುತ್ತದೆ. ಸಂಗೀತವನ್ನು ಕೇಳುತ್ತಿದ್ದರೆ ಮೆದುಳಿನಲ್ಲಿ ಎಂಡ್ರೊಪಿನ್ಸ್ ಬಿಡುಗಡೆ ಮಾಡುತ್ತದೆ, ಇದು ರಕ್ತದೊತ್ತಡವನ್ನು ಕಡಿಮೆ ಮಾಡಿ ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. ಮನಶಾಸ್ತ್ರಜ್ಞರು ಸಂಗೀತವು ಅನೇಕ ಗುಣಪಡಿಸಲಾಗದ ಮಾನಸಿಕ ಕಾಯಿಲೆಯನ್ನು ಗುಣಪಡಿಸುವ ಶಕ್ತಿ ಇದೆ ಎಂದು ಹೇಳುತ್ತಾರೆ. ಸಂಗೀತಕ್ಕೂ ಮೆದುಳಿಗೂ ಅಂತರ್ ಸಂಬಂಧವಿದ್ದು ಸಂಗೀತದ ಬೀಟ್‌ಗಳು ಮೆದುಳಿನ ಅಲೆಗಳನ್ನು ಉತ್ತೇಜಿಸುತ್ತದೆ ಮತ್ತು ಬಲವಾದ ಬೀಟ್‌ಗಳು ಯೋಚನಾ ಲಹರಿಯನ್ನು ಚುರುಕುಗೊಳಿಸುತ್ತದೆ. ನಿಧಾನವಾದ ಬೀಟ್‌ಗಳು ಮನಸ್ಸನ್ನು ಶಾಂತ ಧ್ಯಾನದ ಸ್ಥಿತಿಗೆ ಕೊಂಡೊಯ್ಯುತ್ತದೆ. ಮೆದುಳಿನ ಅಲೆಗಳಲ್ಲಾಗುವ ಮಾರ್ಪಾಡುಗಳು ದೇಹದ ಇತರ ಭಾಗಗಳ ಕಾರ್ಯಾಚರಣೆಯಲ್ಲಿ ಬದಲಾವಣೆ ತರುತ್ತದೆ ಎಂದು ಹೇಳಲಾಗಿದೆ. ಧನಾತ್ಮಕ ಚಿಂತೆನಗಳಿದ್ದರೆ ಮನಸ್ಸು ಹಗುರಾಗುತ್ತದೆ ಎಂದು ಹೇಳಲಾಗಿದೆ ಹೀಗಿರುವಾಗ ಸಂಗೀತವನ್ನು ಆಲಿಸುವುದರಿಂದ ಪಾಸಿಟಿವ್ ಚಿಂತನೆ ತನ್ನಷ್ಟಕ್ಕೆ ಉಂಟಾಗುತ್ತದೆ. ಸಂಗೀತಕ್ಕೆ ನೋವನ್ನು ನಿವಾರಿಸುವ ಶಕ್ತಿ ಇದೆ ಮಕ್ಕಳು ಸಂಪೂರ್ಣ ಓದಿನತ್ತ ಗಮನ ಹರಿಸುವಂತೆ ಮಾಡಲು ಕೂಡ ಸಂಗೀತ ಸಹಕಾರಿಯಾಗಿದೆ. ಯೋಗಾಭ್ಯಾಸ, ಮೆಡಿಟೇಶನ್ ಅಭ್ಯಾಸ ಮಾಡುವವರು ಸಂಗೀತಕ್ಕೆ ಆದ್ಯತೆ ನೀಡಿದರೆ ಪರಿಪೂರ್ಣ ಫಲಿತಾಂಶವನ್ನು ಪಡೆದುಕೊಳ್ಳಬಹುದು. ಸಂಗೀತ ಕೇಳಲು ಇಷ್ಟವಿಲ್ಲದಿದ್ದರೆ, ಇತರೇ ಇಂಪಾದ ನಿನಾದ ಕೇಳಬಹುದು. ಮನಸ್ಸಿಗೆ ಮುದ ನೀಡುವಂತಹ ಸಂಗೀತವನ್ನು ಕೇಳುತ್ತೀರಿ. ಇದರಿಂದ ಮುದುಡಿದ ಮನಸ್ಸು ಅರಳುತ್ತದೆ. ಕರ್ಕಶವಾದ ಸಂಗೀತವನ್ನು ಆಲಿಸಿದರೆ, ಮನಸ್ಸು ಜರ್ಝರಿತವಾಗುತ್ತದೆ. ಹೀಗೆ ಮನಸ್ಸಿಗೆ ಉಂಟಾದ ನೋವನ್ನು ಮರೆಮಾಚುವ ಶಕ್ತಿ ಸಂಗೀತಕ್ಕಿದೆ ಎನ್ನುವುದು 100 ಪರ್ಸೆಂಟ್ ಸತ್ಯ. ಮ್ಯೂಸಿಕ್ ಥೆರಪಿಯಿಂದ ನಮಗೆ ಸಂತೋಷ, ಉಲ್ಲಾಸ ಉಂಟಾಗುವುದರೊಂದಿಗೆ, ಮನಸ್ಸಿನಲ್ಲಿ ಉಂಟಾಗುವ ಕಿರಿ-ಕಿರಿ, ಅಸಮಾಧಾನವನ್ನು ಹೋಗಲಾಡಿಸಬಹುದು

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.