ಇದು ಕರುನಾಡ ಹೆಮ್ಮೆಯ ಕೋಳಿ ಕಾಳಗ..!

Video Description

ಇದು ಕರುನಾಡ ಹೆಮ್ಮೆಯ ಕೋಳಿ ಅಂಕ..! ತುಳುನಾಡಿನ ಜನಪದ ಆಟಗಳಲ್ಲಿ ಕೋಳಿ ಅಂಕ ಕೂಡ ಒಂದು. ಕೋಳಿಕಟ್ಟಕ್ಕೆ ಭೂತಾರಾಧನೆಯೇ ಆಧಾರವಾಗಿದೆ. ಇದೊಂದು ಸ್ಪರ್ಧಾತ್ಮಕ ಆಟವೆನಿಸಿದ್ದು ಕೋಳಿಗಳ ಕಾಳಗ ಎಂಬ ಹೆಸರೂ ಇದಕ್ಕಿದೆ. ಕೋಳಿಕಟ್ಟಕ್ಕಾಗಿ ವಿಶೇಷ ರೀತಿಯಲ್ಲಿ ಸಾಕಿದ ಕೋಳಿಗಳನ್ನೇ ಬಳಸುತ್ತಾರೆ. ಕೋಳಿಕಟ್ಟದ ದಿನ ಸಮೀಪಿಸಿತೆಂದರೆ ಮನೆಯ ಯಜಮಾನ ಎಣ್ಣೆಯಲ್ಲಿ ಹಾಕಿಟ್ಟ ಬಾಳುಗಳನ್ನು ಒಂದೊಂದಾಗಿ ಹಲಗೆಯ ಮೇಲೆ ಬಿಳಿಕಲ್ಲಿನ ಪುಡಿ ಹಾಕಿ ಹರಿತ ಮಾಡುತ್ತಾನೆ. ಅನಂತರ ಮನೆ ಕೆಲಸದವನೂ ಆ ಬಾಳುಗಳನ್ನು ಮಸೆಯುತ್ತಾನೆ. ಬಾಳುಗಳನ್ನು ಇಡಲು ಪ್ರತ್ಯೇಕ ಒಂದು ಸೂಡಿ. ಅದರ ಒಳಗೆ ದೋರೆ. ಹರಕು ತೆಳ್ಳಗಾದ ಬಿಳಿ ಬಟ್ಟೆಯ ತುಂಡು. ಅದರೊಂದಿಗೆ ಸೂಜಿ ಮತ್ತು ನೂಲು. ಹೀಗೆ ಎಲ್ಲವನ್ನು ಸಿದ್ಧಗೊಳಿಸು ಇಡುತ್ತಾರೆ. ಎರಡೂ ಕೋಳಿಗಳ ಕಾಲಿಗೆ ಸಣ್ಣ ಚೂರಿ (ಬಾಳು) ಕಟ್ಟಿ ಕೋಳಿಗಳನ್ನು ಕಾದಾಟಕ್ಕೆ ಬಿಡುತ್ತಾರೆ. ಇನ್ನು ಈ ಸ್ಪರ್ಧೆಯಲ್ಲೂ ಷರತ್ತುಗಳಿದ್ದು ಆಯಾಯ ಕೋಳಿಗಳ ಯಜಮಾನರು ಈ ಷರತ್ತನ್ನು ನಿರ್ಧರಿಸುತ್ತಾರೆ. ಸತ್ತ ಕೋಳಿಗಳನ್ನು ಸಮಪಾಲು ಮಾಡಲಾಗುತ್ತದೆ. ಕೋಳಿ ಕಾಳಗ ನಡೆಯುವಾಗ ನೆಲಕ್ಕೆ ಬಿದ್ದಂತಹ ರಕ್ತ ದೈವಕ್ಕೆ ನೀಡಿದ ಆಹಾರ ಎಂಬುದು ತುಳುನಾಡ ಜನರ ನಂಬಿಕೆಯಾಗಿದೆ. ಕೋಳಿಗಳ ಪಂಚಾಗವೂ ಇದ್ದು ಯಾವ ರಂಗಿನ ಕೋಳಿಗೆ ಯಾವ ದಿನ ಹುಟ್ಟು, ಬಾಲ್ಯ, ಯೌವನ, ಮುಪ್ಪು, ಮರಣ ಎಂಬುದು ಕೋಳಿ ಶಾಸ್ತ್ರಜ್ಞರಿಗೆ ತಿಳಿದಿರುತ್ತದೆ. ಇಲ್ಲಿ ಹುಣ್ಣಿಮೆ ಹಾಗೂ ಅಮವಾಸ್ಯೆಗಳೂ ಪ್ರಮುಖ ಪಾತ್ರ ವಹಿಸುತ್ತದೆ. ಅದನ್ನೆಲ್ಲಾ ತಿಳಿದುಕೊಂಡೇ ಆ ಪ್ರಕಾರ ಕೋಳಿ ಅಂಕ ನಡೆಸುವವರಿದ್ದಾರೆ. ಯಾವ ಕೋಳಿ ಗೆಲ್ಲುತ್ತದೆ ಎಂದು ಪಂಥ ಹಾಕಿ ಜೂಜಾಡುವ ಪದ್ಧತಿ ಹಿಂದಿನಿಂದಲೂ ಇತ್ತು.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.