ಗರ್ಭಕೊರಳಿನ ಕ್ಯಾನ್ಸರ್ ಗೆ ಇದೆ ಮದ್ದು..!

Video Description

ಗರ್ಭಕೊರಳಿನ ಕ್ಯಾನ್ಸರ್‌ಗೆ ಪರಿಣಾಮಕಾರಿ ಚಿಕಿತ್ಸೆ ಏನು? ಗರ್ಭಕೊರಳಿನ ಕ್ಯಾನ್ಸರ್ ಗೆ ಇದೆ ಮದ್ದು..! ಸರ್ವಿಕಲ್ ಕ್ಯಾನ್ಸರ್ ಸ್ತನ ಕ್ಯಾನ್ಸರ್‌ನ ನಂತರ ಮಹಿಳೆಯರಲ್ಲಿ ಕಂಡುಬರುತ್ತಿರುವ ಎರಡನೆಯ ಅತಿ ದೊಡ್ಡ ಕ್ಯಾನ್ಸರ್ ಎಂದೆನಿಸಿದೆ. ಭಾರತದಲ್ಲಿ ಈ ಕ್ಯಾನ್ಸರ್‌ನಿಂದ ಸಾಯುತ್ತಿರುವವರ ಸಂಖ್ಯೆ ತುಸು ಹೆಚ್ಚೇ ಇದೆ. ಸರ್ವಿಕ್ಸ್ ಎಂಬುದು ಗರ್ಭಕೋಶದ ಕೆಳಭಾಗ. ಗರ್ಭಕೋಶಕ್ಕೂ ಯೋನಿಗೂ ಸಂಪರ್ಕ ಮಾರ್ಗವಾಗಿ ಯೋನಿಯಲ್ಲಿ ಹೊರಚಾಚಿಕೊಂಡಿರುವ ಭಾಗ. ಕ್ಯಾನ್ಸರ್ ಪತ್ತೆಹಚ್ಚಲು ಇದೀಗ ಸ್ಕ್ರೀನಿಂಗ್ ವಿಧಾನಗಳಿದ್ದು ಆರಂಭದಲ್ಲಿ ರೋಗವನ್ನು ಪತ್ತೆಹಚ್ಚಿದಲ್ಲಿ ಶೇಕಡಾ 99 ರಷ್ಟು ಚಿಕಿತ್ಸೆ ಫಲಪ್ರದ ಎಂದೆನಿಸುತ್ತದೆ. ಹ್ಯೂಮನ್ ಪ್ಯಾಪಿಲೋಮ ವೈರಸ್ ಸೋಂಕು ಈ ಸರ್ವಿಕಲ್ ಕ್ಯಾನ್ಸರ್‌ಗೆ ಕಾರಣವಾಗಿದೆ. ಬಾಲ್ಯವಿವಾಹ, ಚಿಕ್ಕವಯಸ್ಸಿನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು, ಬಹಳ ಮಕ್ಕಳನ್ನು ಅಂತರವಿಲ್ಲದೆ ಹೆರುವುದು, ಸಂತಾನ ನಿರೋಧಕ ಗುಳಿಗೆಗಳನ್ನು ಬಹಳ ಕಾಲ ಸೇವಿಸುವುದು, ಬಹುಸಂಗಾತಿಗಳನ್ನು ಹೊಂದಿರುವುದು ಈ ಕ್ಯಾನ್ಸರ್‌ಗೆ ಕಾರಣವಾಗಿದೆ. ಅಶುಚಿತ್ವ, ಅಪೌಷ್ಟಿಕತೆ ರೋಗನಿರೋಧಕ ಶಕ್ತಿ ಕುಂದುವಿಕೆ, ಹೆಚ್ಚು ಸಮಯ ಸ್ಟಿರಾಯ್ಡ್ ಔಷಧಿಗಳ ಸೇವನೆ ಇದರಿಂದ ಕೂಡ ಈ ಕ್ಯಾನ್ಸರ್‌ಗೆ ಕಾರಣವಾದ ವೈರಸ್ ಉದ್ಭವಿಸುತ್ತದೆ. ಈ ವೈರಸ್‌ನಲ್ಲಿ ಸುಮಾರು 100 ವಿಧಗಳಿವೆ. ಪ್ರಾರಂಭದ ಹಂತದಲ್ಲಿ ಈ ರೋಗ ಯಾವುದೇ ಕಾಯಿಲೆ ಲಕ್ಷಣಗಳನ್ನು ತೋರಿಸುವುದಿಲ್ಲ. ನಂತರ ಉಲ್ಬಣಗೊಂಡು ಸುತ್ತಮುತ್ತಲಿನ ಅಂಗಗಳಿಗೆ ಅಂದರೆ ಮಲ, ಮೂತ್ರಕೋಶಕ್ಕೆ ಹರಡುವುದೇ ಈ ಕ್ಯಾನ್ಸರ್‌ನ ದುರಂತವಾಗಿದೆ. ಋತುಚಕ್ರಗಳ ನಡುವೆ ರಕ್ತಸ್ರಾವ ಅನಿಯಮಿತವಾಗಿ ನಡೆಯುವುದು. ಲೈಂಗಿಕ ಕ್ರಿಯೆಯ ನಂತರ ರಕ್ತಸ್ರಾವ, ಮುಟ್ಟು ನಿಂತ ಮೇಲೆ ರಕ್ತಸ್ರಾವ ಕೆಲವರಲ್ಲಿ ವಾಸನೆಯುಳ್ಳ ಕೆಂಪು ಮಿಶ್ರಿತ ಬಿಳಿನೀರಿನಂತ ರಕ್ತಸ್ರಾವವಾಗಬಹುದು. ಅದೇ ರೀತಿ ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳಬಹುದು. ಕ್ಯಾನ್ಸರ್ ಉಲ್ಬಣಗೊಂಡು ಮೂತ್ರಕೋಶಕ್ಕೆ ಹರಡಿದಾಗ ಉರಿಮೂತ್ರ ಪದೇ ಪದೇ ವಿಸರ್ಜನೆಗೊಳ್ಳಬಹುದು. ಸರ್ವಿಕಲ್ ಕ್ಯಾನ್ಸರ್‌ನಲ್ಲಿ ಸಾವನ್ನಪ್ಪುವುದು ಮೂತ್ರಪಿಂಡದ ವೈಫಲ್ಯತೆಯಿಂದ. ಪ್ಯಾಪ್ ಲೇಪನ ವಿಧಾನದಿಂದ ಈ ಸರ್ವಿಕಲ್ ಕ್ಯಾನ್ಸರ್ ಬರುವ ಬಹಳ ದಿನಗಳ ಮೊದಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಬಹುದು. ಪ್ಯಾಪ್‌ಸ್ಮಿಯರ್ ಎನ್ನುವುದು ಸ್ಟೆಕ್ಯುಲಮ್‌ನಿಂದ ಯೋನಿಯ ಬಾಯಿಯನ್ನು ಅಗಲ ಮಾಡಿ ಯೋನಿಯ ಹಿಂಭಾಗದಲ್ಲಿರುವುದರಿಂದ ಜೀವಕೋಶಗಳನ್ನು ಬ್ರಶ್ ಅಥವಾ ಸ್ಪೆಟುಲಾದ ಸಹಾಯದಿಂದ ತೆಗೆದು ನಿರ್ದಿಷ್ಟ ದ್ರಾವಣವನ್ನು ಬಳಸಿ ಅದನ್ನು ತಜ್ಞರು ಪರಿಶೀಲಿಸಿ ವರದಿ ನೀಡುತ್ತಾರೆ. ಭಾರತದಂತಹ ಮುಂದುವರಿದ ರಾಷ್ಟ್ರಗಳಲ್ಲಿ 45 ವರ್ಷಗಳೊಳಗೆ ಒಮ್ಮೆಯಾದರೂ ಪ್ಯಾಪ್‌ಸ್ಮಿಯರ್ ಮಾಡಿಸಬೇಕೆಂದು ವಿಶ್ವಆರೋಗ್ಯ ಸಂಸ್ಥೆ ಪ್ರತಿಪಾದಿಸುತ್ತದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.