ನಿಮಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸ ಇದೆಯಾ..?

Video Description

ನಿದ್ದೆಯಲ್ಲಿ ನಡೆಯುವ ಅಭ್ಯಾಸವನ್ನು ಹೇಗೆ ನಿಯಂತ್ರಿಸಬಹುದು? ನಿಮಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸ ಇದೆಯಾ..? ಕೆಲವರು ತಮಗೆ ಗೊತ್ತಿಲ್ಲದೆಯೇ ನಿದ್ದೆಯಲ್ಲಿ ನಡೆಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಸೊಮ್ನಮ್‌ಬ್ಯುಲಿಸಮ್ (somnambulism) ಎಂದು ಕರೆಯಲಾಗುತ್ತದೆ. ಇದು ಮೆದುಳಿಗೆ ಸಂಬಂಧಪಟ್ಟ ಕಾಯಿಲೆಯಾಗಿದೆ. ಚಿಕ್ಕಂದಿನಲ್ಲಿ ಕಂಡುಬರುವ ಈ ಅಭ್ಯಾಸ ಹತ್ತು ವರ್ಷ ವಯಸ್ಸಾದಂತೆ ತನ್ನಷ್ಟಕ್ಕೆ ಕಡಿಮೆಯಾಗುತ್ತದೆ. ಆದರೆ ಕೆಲವರಲ್ಲಿ ಈ ಕಾಯಿಲೆ ವಯಸ್ಸಾದ ನಂತರ ಕೂಡ ಉಳಿದುಬಿಡುತ್ತದೆ. ಥಾಮಸ್ ಎಡಿಸನ್, ಜೆನಿಫರ್ ಅನಿಸ್ಟನ್‌ರಂತಹ ಖ್ಯಾತನಾಮರೂ ಕೂಡ ನಿದ್ದೆಯಲ್ಲಿ ನಡೆಯುವ ಅಭ್ಯಾಸವನ್ನು ಹೊಂದಿದ್ದರು. ಒಂದು ಸಮೀಕ್ಷೆಯ ಪ್ರಕಾರ ಶೇ 5 ರಷ್ಟು ಭಾರತೀಯರು ನಿದ್ದೆಯಲ್ಲಿ ನಡೆಯುವ ಅಭ್ಯಾಸ ಹೊಂದಿದ್ದಾರೆ. ಇದು ಅಪಾಯಕಾರಿಯಲ್ಲದಿದ್ದರೂ ಹೊಸ ಸ್ಥಳಕ್ಕೆ ಹೋದಾಗ ಈ ರೋಗ ಪ್ರಾಣಾಂತಿಕ ಕೂಡ ಆಗಬಹುದು. ಹೆಚ್ಚಾಗಿ ಇದು ವಂಶಪಾರಂಪರ್ಯವಾಗಿ ಬರುವ ಕಾರಣವೆಂದು ತಜ್ಞರು ತಿಳಿಸಿದರೂ ದೈನಂದಿನ ಕೆಲಸದ ಅಥವಾ ಯಾವುದೋ ಒಂದು ವಿಷಯದ ಒತ್ತಡ ಮೆದುಳಿನ ಮೇಲೆ ಪ್ರಭಾವ ಬೀರಿ ನಿದ್ದೆಯಲ್ಲಿ ನಡೆಯುವ ಮತ್ತು ಇತರ ಘಟನೆಗಳಿಗೆ ಕಾರಣವಾಗಿದೆ ಎಂದು ಇತ್ತೀಚಿನ ಸಂಶೋಧನೆಗಳು ತಿಳಿಸಿವೆ. ಆದ್ದರಿಂದ ಎಷ್ಟೇ ಒತ್ತಡವಿದ್ದರೂ ನಿದ್ದೆಯ ಸಮಯದಲ್ಲಿ ನಿರಾಳವಾಗಿರುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ವಯಸ್ಕರಿಗೆ ದಿನಕ್ಕೆ ಕನಿಷ್ಟ ಆರು ಗಂಟೆಯ ನಿದ್ದೆ ಬೇಕು, ಎಂಟು ಗಂಟೆಯಾದರೆ ಉತ್ತಮ ಎಂದು ವಿಜ್ಞಾನ ತಿಳಿಸುತ್ತದೆ. ಆದರೆ ಕೆಲವರಿಗೆ ನಿದ್ದೆಯೇ ಬರದೇ ಹೊರಳಾಡುತ್ತಾ ಕೇವಲ ಮೂರು ನಾಲ್ಕು ಗಂಟೆಗಳ ನಿದ್ದೆ ಪಡೆಯುವುದರಿಂದ ಮರುದಿನ ಅಥವಾ ನಂತರದ ದಿನಗಳಲ್ಲಿ ನಿದ್ದೆಯಲ್ಲಿ ನಡೆಯುವ ಸಾಧ್ಯತೆ ಕಂಡುಬಂದಿದೆ. ಭಾರತದ ಖ್ಯಾತ ನಟ ಶಾರುಖ್ ಖಾನ್, ಸಂಗೀತ ನಿರ್ದೇಶಕ ವಿಶಾಲ್ ದಾದ್ಲಾನಿ ಮೊದಲಾದವರೂ ಈ ತೊಂದರೆಗೆ ಒಳಗಾಗಿದ್ದಾರೆ. ಕೆಲವು ಔಷಧಿಗಳನ್ನು ತುಂಬಾ ಕಾಲದವರೆಗೆ ಸೇವಿಸುತ್ತಾ ಬಂದಿರುವುದರಿಂದ ಆಗುವ ಅಡ್ಡಪರಿಣಾಮಗಳಲ್ಲಿ ನಿದ್ದೆಯಲ್ಲಿ ನಡೆಯುವ ಅಭ್ಯಾಸವೂ ಒಂದು. ಅದರಲ್ಲೂ ಹೆಚ್ಚಾಗಿ ನಿದ್ದೆ ಬರಿಸುವ ಔಷಧಿಗಳ ಪ್ರಭಾವ ಇದರಲ್ಲಿ ಹೆಚ್ಚು. ನಿದ್ದೆಯಲ್ಲಿ ನಡೆಯುವ ಅಭ್ಯಾಸವುಳ್ಳವರು ಸಾಮಾನ್ಯ ಹೃದಯದ ತೊಂದರೆಯಿಂದಲೂ ಬಳಲುತ್ತಿರುತ್ತಾರೆ. ಇದಕ್ಕೆ ನೇರವಾದ ಸಂಬಂಧ ಏನು ಎಂಬುದು ಇದುವರೆಗೆ ಬಗೆಹರಿಯದ ರಹಸ್ಯವಾಗಿದ್ದು ಈ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯುತ್ತಿವೆ. ಯಾವುದಾದರೂ ದುಃಶ್ಚಟಕ್ಕೆ ಒಳಗಾಗಿ ವ್ಯಸನಿಗಳಾದವರು ನಿದ್ದೆಯಲ್ಲಿ ನಡೆಯುವುದು ಮಾತ್ರವಲ್ಲ, ಅಪಾಯಕಾರಿ ವ್ಯಕ್ತಿಗಳೂ ಆಗಬಹುದು. ವಿಶೇಷವಾಗಿ ಮೂಗಿನ ಮತ್ತು ರಕ್ತದ ಮೂಲಕ ಮಾದಕ ದ್ರವ್ಯಗಳನ್ನು ಸೇವಿಸುವವರು ನಡುರಾತ್ರಿ ಹೊರಹೋಗಿ ಕೊಲೆ,ಅತ್ಯಾಚಾರಗಳನ್ನು ಎಸಗಿರುವುದು ಬೆಳಕಿಗೆ ಬಂದಿದೆ. ಮದ್ಯಪಾನವೂ ಇನ್ನೊಂದು ಕಾರಣವಾಗಿದೆ. ಮದ್ಯಪಾನದ ಅಭ್ಯಾಸ ಹೆಚ್ಚಿರುವವರೂ, ಸದಾ ಮದ್ಯಪಾನ ಮಾಡುತ್ತಿದ್ದು ಒಂದೆರಡು ದಿನ ಮಾಡದಿದ್ದವರೂ ನಿದ್ದೆಯಲ್ಲಿ ನಡೆಯುವುದನ್ನೂ ಇತ್ತೀಚಿನ ಸಂಶೋಧನೆಗಳು ಸಾಬೀತುಪಡಿಸಿವೆ. ಈ ತೊಂದರೆ ಇದ್ದವರು ಸಾಕಷ್ಟು ಬೇಗನೇ ಮಲಗಿ ಬೇಗನೇ ಏಳುವ ಅಭ್ಯಾಸ ಮಾಡಬೇಕು. ರಾತ್ರಿಯ ಹೊರತು ಬೇರಾವ ಸಮಯದಲ್ಲೂ ನಿದ್ದೆ ಮಾಡಬೇಡಿ. ಉತ್ತಮ ಆಹಾರ ಮತ್ತು ವೈದ್ಯರು ನೀಡಿದ ಔಷಧಿಗಳನ್ನು ಸೇವಿಸಿ. ನಿಮ್ಮ ಮನಸ್ಸನ್ನು ನಿರಾಳಗೊಳಿಸುವ ಕೆಲವೊಂದು ಚಟುವಟಿಕೆಗಳನ್ನು ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ದೈನಂದಿನ ಚಿಂತನೆಗಳನ್ನು ನೆನೆಯದೇ ಬೇರೆ ವಿಷಯದ ಬಗ್ಗೆ ಚಿಂತಿಸುತ್ತಾ ಗಾಢನಿದ್ದೆಗೆ ಒಳಪಡಿ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.