ಕ್ಯಾಲೊರಿ ಕರಗಿಸಲು ಇಲ್ಲಿದೆ ಉಪಾಯ..!

Video Description

ದೇಹದ ಬೊಜ್ಜು ಕರಗಿಸಲು ಇಲ್ಲಿದೆ ಸರಳ ಟಿಪ್ಸ್ ಕ್ಯಾಲೊರಿ ಕರಗಿಸಲು ಇಲ್ಲಿದೆ ಉಪಾಯ..! ದೇಹದಲ್ಲಿ ಕೊಬ್ಬು ಸಂಗ್ರಹಣೆ ಇಲ್ಲದಿದ್ದರೆ ಬೊಜ್ಜು ಬೆಳೆಯುವುದು ಎನ್ನುವುದು ಇತ್ತೀಚಿನ ದಿನಗಳಲ್ಲಿ ಕಾಯಿಲೆಯ ಮೂಲವಾಗಿದ್ದು ಹೆಚ್ಚಿನ ಕಾಳಜಿಯನ್ನು ವಹಿಸದೇ ಇದ್ದರೆ ಇದು ನಿಮ್ಮ ಜೀವಕ್ಕೆ ಅಪಾಯವನ್ನು ತಂದೊಡ್ಡುತ್ತದೆ. ಹಿತಮಿತವಾದ ಆಹಾರ ಕ್ರಮ, ಜಂಕ್ ಫುಡ್‌ಗಳಿಂದ ದೂರವಿರುವುದು, ಸಕ್ಕರೆ ಪ್ರಮಾಣವನ್ನು ಕಡಿಮೆ ಸೇವಿಸುವುದು, ಯೋಗ, ಜಿಮ್, ದೈಹಿಕ ಕಸರತ್ತುಗಳು, ನಡಿಗೆ, ಓಟ ಮೊದಲಾದ ಚಟುವಟಿಕೆಗಳನ್ನು ನೀವು ಮಾಡುವುದರಿಂದ ನಿಮ್ಮ ಹೆಚ್ಚಿನ ಕೊಬ್ಬನ್ನು ನೀವು ದೂರವಾಗಿಸಿಕೊಂಡು ನಿಮ್ಮ ದೇಹವನ್ನು ಸುಂದರಗೊಳಿಸಬಹುದು ಮತ್ತು ಆರೋಗ್ಯಕರವಾಗಿ ಕೂಡ ಇರಬಹುದು. ನಿಮ್ಮ ದೇಹ ಮತ್ತು ನಿಮ್ಮ ಆರೋಗ್ಯ ನಿಮ್ಮ ಸ್ವತ್ತಾಗಿದೆ. ನೀವು ಎಷ್ಟೇ ಹಣವಂತರಾಗಿರಿ ಮತ್ತು ಉತ್ತಮ ಆರೋಗ್ಯ ನಿಮ್ಮದಲ್ಲ ಎಂದಾದಲ್ಲಿ ನೀವು ಎಷ್ಟು ಹಣವನ್ನು ಹೊಂದಿದ್ದರೂ ಅದು ವೇಸ್ಟ್. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ತಮಗೆ ಸಮಯವಿಲ್ಲವೆಂಬ ಕಾರಣಕ್ಕಾಗಿ ದೈಹಿಕ ಚಟುವಟಿಕೆಗಳತ್ತ ಗಮನಹರಿಸುತ್ತಿಲ್ಲ. ಪ್ರತಿನಿತ್ಯ ಮಾನವ ತನಗಾಗಿ ಒಂದು ಗಂಟೆ ಸಮಯವನ್ನು ಮೀಸಲಿಡಬೇಕು. ಈ ಸಮಯದಲ್ಲಿ ನೀವು ಯಾವುದೇ ವ್ಯಾಯಾಮಗಳನ್ನು ಮಾಡಬಹುದು. ಜಿಮ್, ಯೋಗ, ಕರಾಟೆ, ಕುಂಫು,ಕಳರಿ ಪೈಟ್, ಏರೋಬಿಕ್ಸ್, ಕಿಕ್ ಬಾಕ್ಸಿಂಗ್ ಹೀಗೆ ಕೊಬ್ಬು ಕರಗಿಸಲು ಇಂದು ಬೇರೆ ಬೇರೆ ರೀತಿಯ ಕಸರತ್ತುಗಳಿದ್ದು ಅದನ್ನು ನೀವು ಅನುಸರಿಸಬಹುದಾಗಿದೆ. ನೀವು ಸೇವಿಸುವ ಆಹಾರದಲ್ಲಿ ಹೆಚ್ಚಿನ ಪ್ರೊಟೀನ್ ಇದೆಯೇ ಎಂಬುದನ್ನು ಮನನ ಮಾಡಿಕೊಳ್ಳಿ. ಕಾರ್ಬೊಹೈಡ್ರೇಡ್ ಅನ್ನು ಆದಷ್ಟು ಕಡಿಮೆ ಮಾಡಿ ಮತ್ತು ಪ್ರೊಟೀನ್ ಅಂಶಗಳಿಗೆ ಹೆಚ್ಚಿನ ಗಮನವನ್ನು ನೀಡಿ. ಜೊತೆಗೆ ಸಾಕಷ್ಟು ನೀರು ನೀವು ಸೇವಿಸುತ್ತಿದ್ದೀರಿ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ನಿಮ್ಮ ದೇಹದಲ್ಲಿ ಬೇಡದೇ ಇರುವ ಕಲ್ಮಶಗಳನ್ನು ಹೊರಹಾಕಲು ನೀರು ಸಹಕಾರಿಯಾಗಿದೆ. ನಿಮ್ಮ ದೇಹದ ತೂಕಕ್ಕೆ ಅನುಗುಣವಾಗಿ ಸಾಕಷ್ಟು ಪ್ರಮಾಣದಲ್ಲಿ ನೀವು ನೀರು ಕುಡಿಯುತ್ತಿದ್ದೀರಿ ಎಂಬುದನ್ನು ಕಂಡುಕೊಳ್ಳಿ. ನೀವು ಹೊಟ್ಟೆ ಕರಗಿಸಲು ಬೇರೆ ರೀತಿಯ ಆಹಾರ ಪದ್ಧತಿ ಪ್ರಾರಂಭಿಸಿರದಿದ್ದಲ್ಲಿ ಇದನ್ನು ಮಾಡಿನೋಡಿ. ಬಹುಶಃ ನೀವು ಮೊದಲಿನಿಂದಲೂ ಬೆಳಗಿನ ತಿಂಡಿ,ಮದ್ಯಾನ್ಹದ ಊಟ,ಮತ್ತು ರಾತ್ರಿ ಊಟ ಮಾಡಿಕೊಂಡು ಬಂದಿರಬಹುದು.ಆದರೆ ಅಧ್ಯಯನ ಕಂಡು ಹಿಡಿದ ಪ್ರಕಾರ ದಿನದಲ್ಲಿ ಮೂರು ದೊಡ್ಡ ಊಟ ಮಾಡುವ ಬದಲು ಐದರಿಂದ ಆರು ಬಾರಿ ಸಣ್ಣ ಪ್ರಮಾಣದಲ್ಲಿ ತಿನ್ನುವವರು ತಮ್ಮ ಹೊಟ್ಟೆಯ ಸುತ್ತಳತೆಯನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನಲಾಗುತ್ತದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.