ಸ್ಯಾಂಡ್ ವಿಚ್ ಬಗೆ ಬಗೆ ರೆಸಿಪಿ ಹೀಗೆ ಮಾಡಿ..!

Video Description

ಚಳಿಗೆ ಗರಿ ಗರಿಯಾದ ಸ್ಯಾಂಡ್‌ವಿಚ್ ರೆಸಿಪಿ ಸ್ಯಾಂಡ್ ವಿಚ್ ಬಗೆ ಬಗೆ ರೆಸಿಪಿ ಹೀಗೆ ಮಾಡಿ..! ಚಳಿಗಾಲ ಬಂತೆಂದರೆ ಸಾಕು ಬಗೆ ಬಗೆ ರೆಸಿಪಿಗಳನ್ನು ಬಿಸಿ ಬಿಸಿಯಾಗಿ ಸವಿಯುವ ಮನಸ್ಸಾಗುತ್ತದೆ. ಅದೂ ಅಲ್ಲದೆ ಮಕ್ಕಳೂ ಕೂಡ ಈ ಸಮಯದಲ್ಲಿ ಹೆಚ್ಚಿನ ಬೇಡಿಕೆಯನ್ನು ಇಡುತ್ತಾರೆ ಆಗ ನೀವು ಥಟ್ ಅಂತ ರುಚಿಯಾಗಿರುವ ಆಲೂಗಡ್ಡೆ ಸ್ಯಾಂಡ್ ವಿಚ್ ಅನ್ನು ರೆಡಿ ಮಾಡಬಹುದು. ಅತ್ಯಂತ ಕಡಿಮೆ ಸಮಯದಲ್ಲಿ ರುಚಿಕರವಾದ ಬ್ರೆಡ್ ಸ್ಯಾಂಡ್ ವಿಚ್ ಅನ್ನು ನೀವು ಮಕ್ಕಳಿಗೆ ಮಾಡಿಕೊಡಬಹುದು ಅಂತೆಯೇ ಸಂಜೆಯ ಸ್ನ್ಯಾಕ್ಸ್ ಆಗಿ ನೀವು ಸವಿಯಬಹುದು. ಮೊದಲಿಗೆ ಆಲೂಗಡ್ಡೆ ಸ್ಯಾಂಡ್ ವಿಚ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ ಇದಕ್ಕೆ ನೀವು ಆಲೂಗಡ್ಡೆಯನ್ನು ಸ್ಮ್ಯಾಶ್ ಮಾಡಿಕೊಳ್ಳಬೇಕು ನಂತರ ಇದಕ್ಕೆ ಕ್ಯಾರೆಟ್ ತುರಿ, ಕೊತ್ತಂಬರಿ ಸೊಪ್ಪು, ಉಪ್ಪು ಖಾರದ ಪುಡಿಯನ್ನು ಸೇರಿಸಿ ಮಿಶ್ರ ಮಾಡಿಕೊಳ್ಳಬೇಕು. ನಂತರ ಎರಡು ಬ್ರೆಡ್ ತುಂಡುಗಳನ್ನು ತೆಗೆದುಕೊಂಡು ಒಂದರ ಮೇಲೆ ಟೊಮೇಟೊ ಕೆಚಪ್ ಹರಡಿ ನಂತರ ಇದರ ಮೇಲೆ ಅಲೂಗಡ್ಡೆಯ ಮಿಶ್ರಣವನ್ನು ಇರಿಸಿ ಇನ್ನೊಂದು ಬ್ರೆಡ್ ಮೇಲೆ ಬೆಣ್ಣೆ ಸವರಿ ಆಮೇಲೆ ಗ್ರಿಲ್ ಅಥವಾ ತವಾ ಬಳಸಿ ಬ್ರೆಡ್ ಟೋಸ್ಟ್ ಮಾಡಿಕೊಳ್ಳಿ. ಈ ರೀತಿಯ ಕ್ರಂಚಿ ಸಂಜೆಯ ಸ್ನ್ಯಾಕ್ಸ್ ನಿಮ್ಮ ರಾತ್ರಿಯ ಹಸಿವನ್ನು ತೀರಾ ಕಡಿಮೆ ಮಾಡುತ್ತದೆ. ಬ್ರೌನ್ ಬ್ರೆಡ್ ಇಲ್ಲವೇ ಗೋಧಿ ಬ್ರೆಡ್‌ನಲ್ಲಿ ಕೂಡ ಈ ಆರೋಗ್ಯಕರ ರೆಸಿಪಿಯನ್ನು ನೀವು ಸಿದ್ಧಮಾಡಿಕೊಳ್ಳಬಹುದು. ಇದರಲ್ಲಿ ಮಿಶ್ರ ಮಾಡುವ ತರಕಾರಿಯನ್ನು ನೀವು ಹೆಚ್ಚಿಸಿಕೊಳ್ಳಬಹುದು. ಸ್ವೀಟ್ ಕಾರ್ನ್ ಸ್ಯಾಂಡ್‌ವಿಚ್ ಮಾಡುವುದನ್ನು ನಾವು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದು ಇದಕ್ಕೆ ನಿಮಗೆ ಸ್ವೀಟ್ ಕಾರ್ನ್, ಈರುಳ್ಳಿ, ಟೊಮೇಟೊ, ಚೀಸ್ ಬಳಸಿ ಈ ಸ್ಯಾಂಡ್‌ವಿಚ್ ನೀವು ಸಿದ್ಧಪಡಿಸಬಹುದು. ಇದೆಲ್ಲಾವನ್ನು ಮಿಶ್ರ ಮಾಡಿಕೊಂಡು ಆಲೂಗಡ್ಡೆ ಸ್ಯಾಂಡ್‌ವಿಚ್‌ಗೆ ಬ್ರೆಡ್ ಸಿದ್ಧಪಡಿಸಿದ ಹಾಗೆಯೇ ಸಿದ್ಧಮಾಡಿಟ್ಟುಕೊಳ್ಳಿ. ಮನೆಯಲ್ಲೇ ಈ ರೀತಿಯ ರೆಸಿಪಿಗಳನ್ನು ನೀವು ಸಿದ್ಧಮಾಡಿಕೊಳ್ಳುವುದರಿಂದ ಶುದ್ಧವಾಗಿ ಆರೋಗ್ಯಕರವಾಗಿ ನೀವು ಸ್ಯಾಂಡ್‌ವಿಚ್‌ಗಳನ್ನು ಸೇವಿಸಬಹುದಾಗಿದೆ. ಹೊರಗಿನ ಅನಾರೋಗ್ಯಕರ ರೆಸಿಪಿಗಳನ್ನು ನೀವು ಸೇವಿಸುವುದಕ್ಕಿಂತ ಮನೆಯಲ್ಲಿಯೇ ಸ್ಯಾಂಡ್‌ವಿಚ್‌ಗಳನ್ನು ಮಾಡಿ ತಿನ್ನಿ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.