ರಾಗಿಯಿಂದ ಮಾಡಿ ಬಗೆ ಬಗೆ ರೆಸಿಪಿ..!

Video Description

ರಾಗಿ ತಿಂದವನು ನಿರೋಗಿ ಹೇಗೆ? ರಾಗಿಯಿಂದ ಮಾಡಿ ಬಗೆ ಬಗೆ ರೆಸಿಪಿ..! ಇತ್ತೀಚಿನ ದಿನಗಳಲ್ಲಿ ರಾಗಿ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಇದಕ್ಕೆ ಅದರ ಆರೋಗ್ಯಕ್ಕೆ ಸಹಾಯಕಾರಿಯಾಗಿರುವ ಅಂಶವೇ ಪ್ರಧಾನ ಕಾರಣ. ಇದನ್ನು ಭಾರತ ಸೇರಿದಂತೆ ಆಫ್ರಿಕಾ, ಈಜಿಪ್ಟ್ ಮತ್ತು ಯುರೋಪ್‌ನ ಕೆಲವು ಭಾಗಗಳಲ್ಲಿ ಕೂಡಾ ಬೆಳೆಯುತ್ತಾರೆ. ಇದು ದೇಹಕ್ಕೆ ತಂಪು ಮತ್ತು ಶಕ್ತಿಯನ್ನು ನೀಡುವುದರ ಜೊತೆಗೆ ಹಲವು ರೋಗಗಳನ್ನು ನಿವಾರಿಸುವ ಶಕ್ತಿ ಈ ರಾಗಿಗೆ ಇದೆ. ಅಸ್ತಮಾದಿಂದ ಬಳಲುತ್ತಿರುವವರಿಗೆ ರಾಗಿ ಉತ್ತಮ ಆಹಾರವಾಗಿದ್ದು, ಇದನ್ನು ಬಳಕೆ ಮಾಡುವ ಮೂಲಕ ಆರೋಗ್ಯ ವೃದ್ಧಿಗೊಳಿಸುವುದು ಮಾತ್ರವಲ್ಲದೇ ರೋಗ ಬರದಂತೆ ಕೂಡಾ ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಧಾನ್ಯಗಳ ಎಲ್ಲಾ ಪ್ರಭೇದಗಳು ಪಾಲಿಫೆನೊಲ್ಸ್ ಎಂದು ಕರೆಯಲ್ಪಡುವ ಫೈಟೊಕೆಮಿಕಲ್‌ಗಳಲ್ಲಿ ತುಂಬಿರುತ್ತವೆ. ಅವು ಪ್ರಬಲವಾಗಿ ರೋಗನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ. ಇದು ಮನುಷ್ಯನ ದೇಹದ ಪ್ರತಿರೋಧಕತೆಯನ್ನು ಹೆಚ್ಚಿಸಬಹುದು ಮತ್ತು ವೈರಸ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕ್ಯಾನ್ಸರ್‌ನ್ನು ತಡೆಗಟ್ಟುವಲ್ಲಿ ಸಹಾಯಕಾರಿಯಾಗಿದೆ: ರಾಗಿಯಲ್ಲಿ ಕ್ವೆರ್ಸೆಟಿನ್, ಸೆಲೆನಿಯಮ್ ಮತ್ತು ಪ್ಯಾಂಟೋಥೆನಿಕ್ ಆಮ್ಲದ ಅಂಶಗಳಿರುವುದರಿಂದ ಇದು ದೇಹದಲ್ಲಿ ಕ್ಯಾನ್ಸರ್ ಕೋಶಗಳನ್ನು ಉತ್ಪಾದಿಸುವುದನ್ನು ಕಡಿಮೆಗೊಳಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಜಾಸ್ತಿಯಾಗಿರುವುದರಿಂದ ರಾಗಿಯಲ್ಲಿರುವ ಫೈಬರ್ ಅಂಶವು 30% ರಷ್ಟು ಸ್ತನ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ ಎಂದು ಹೇಳಲಾಗುತ್ತದೆ. ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ರಕ್ತಹೀನತೆಯು ಬಹಳ ಅಪಾಯಕಾರಿ ಹಾಗೂ ಮಾರಣಾಂತಿಕವೂ ಹೌದು. ರಾಗಿಯಲ್ಲಿ ಕೆಂಪು ರಕ್ತ ಕಣಗಳ ರಚನೆಗೆ ಬೇಕಾದ ಹಿಮೋಗ್ಲೋಬಿನ್ ಅಂಶವು ಜಾಸ್ತಿ ಇರುವುದರಿಂದ ರಾಗಿಯು ರಕ್ತಹೀನತೆಯನ್ನು ತಡೆಯುವಲ್ಲಿ ಸಹಕಾರಿಯಾಗಿದೆ. ನಮ್ಮ ದೇಹದಲ್ಲಿರುವ ವಿಷ ಆಮ್ಲವನ್ನು ತೆಗೆದುಹಾಕಲು ರಾಗಿ ಒಂದು ಉತ್ತಮವಾದ ಆಹಾರ ಎಂದೇ ಹೇಳಬಹುದು. ಇದರಲ್ಲಿರುವ ಕ್ವೆರ್ಸೆಟಿನ್ ಎಂಬ ಅಂಶವು ವಿಷ ಆಮ್ಲದ ವಿರುದ್ಧ ಹೋರಾಡಿ ಅದು ನಮ್ಮ ದೇಹದಲ್ಲಿ ಉತ್ಪತ್ತಿ ಆಗದಂತೆ ತಡೆಯುತ್ತದೆ ಇದರಿಂದ ದೇಹ ಆರೋಗ್ಯಯುತವಾಗಿರುತ್ತದೆ ಹಸಿ ರಾಗಿಯನ್ನು ನೀರಿನಲ್ಲಿ ನೆನೆಸಿ ಅದನ್ನು ಕಡೆದು ಹಾಲು ಏಲಕ್ಕಿ ಸಕ್ಕರೆಯೊಂದಿಗೆ ಮಿಶ್ರ ಮಾಡಿ ಸೋಸಿ ಕುಡಿಯುವುದರಿಂದ ರಾಗಿ ಹಾಲು ಸಿದ್ಧ. ರಾಗಿ ಮುದ್ದೆ ಮಲಬದ್ಧತೆಯನ್ನು ನಿವಾರಿಸುವಲ್ಲಿ ಎತ್ತಿದ ಕೈ ಎಂದೆನಿಸಿದೆ. ರಾಗಿಯಿಂದ ಬೇರೆ ಬೇರೆ ಕುರಕಲು ತಿಂಡಿಗಳನ್ನು ಸಿದ್ಧಪಡಿಸಬಹುದು. ರಾಗಿ ಚಕ್ಕುಲಿ, ರಾಗಿ ಉಪ್ಪಿಟ್ಟು, ರಾಗಿ ದೋಸೆಯನ್ನು ಮಾಡಿ ಮಕ್ಕಳಿಗೆ ನೀಡಬಹುದು. ರಾಗಿಯ ಅಂಬಲಿಯನ್ನು ರಾತ್ರಿಪೂರ್ತಿ ಫ್ರಿಜ್‌ನಲ್ಲಿಟ್ಟು ಬಿಲ್ಲೆಗಳನ್ನಾಗಿ ಕಟ್ ಮಾಡಿ ರಾಗಿ ಹಲ್ವಾದಂತೆ ಮಕ್ಕಳಿಗೆ ನೀಡಬಹುದು. ರಾಗಿಯ ಹಾಲು ಬಾಯಿ, ರಾಗಿಯ ಇಡ್ಲಿ, ರಾಗಿ ರೊಟ್ಟಿ, ರಾಗಿ ಕಟ್ಲೇಟ್, ರಾಗಿ ಹುರಿಹಿಟ್ಟು ರಾಗಿ ಲಾಡು ಹೀಗೆ ರಾಗಿಯಿಂದ ವಿಧ ವಿಧವಾದ ರೆಸಿಪಿಗಳನ್ನು ತಯಾರಿಸಬಹುದು. ರಾಗಿ ಪಕೋಡ ಕೂಡ ಮಾಡಿ ಮಕ್ಕಳಿಗೆ ಸ್ನ್ಯಾಕ್‌ನಂತೆ ಸಂಜೆಯ ಹೊತ್ತು ನೀಡಬಹುದು.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.