ಎದೆಹಾಲಿನ ಶಾಕಿಂಗ್ ಸುದ್ದಿಗಳು..!

Video Description

ಎದೆಹಾಲಿನ ಮಹತ್ವವೇನು? ಎದೆಹಾಲಿನ ಶಾಕಿಂಗ್ ಸುದ್ದಿಗಳು..! ಹಲವು ಮಹಿಳೆಯರಲ್ಲಿ ಎದೆಹಾಲು ಊಣಿಸುವುದರ ಬಗ್ಗೆ ತಪ್ಪು ಕಲ್ಪನೆ ಇದೆ. ತಮ್ಮ ದೈಹಿಕ ಸೌಂದರ್ಯ ಹಾಳಾಗುತ್ತದೆಂಬ ತಪ್ಪು ನಂಬಿಕೆಯಿಂದ ಮಗುವನ್ನು ತಾಯಿಯ ಹಾಲಿನಿಂದ ವಂಚಿಸುತ್ತಿದ್ದಾರೆ. ಆದರೆ ಎದೆ ಹಾಲು ಮಗುವಿಗೆ ಅವಶ್ಯವಿರುವ ಎಲ್ಲ ಪೌಷ್ಟಿಕಾಂಶಗಳನ್ನೊಳಗೊಂಡ, ಯಾವುದೇ ಕಲ್ಮಶವಿರುವ ನೈಸರ್ಗಿಕ ಆಹಾರ. ಇದರಲ್ಲಿರುವ ಎಲ್ಲಾ ಅವಶ್ಯಕ ಅಂಶಗಳು ಹೊಸ ವಾತಾವರಣದಲ್ಲಿ ಅರಳುತ್ತಿರುವ ಮುಗ್ಧ ಮಗುವಿಗೆ ಪ್ರಮುಖ ಆಸರೆಯಾಗುತ್ತದೆ. ಜನಿಸಿದ ನಂತರ ಎದುರಾಗುವ ಅನೇಕ ರೋಗ-ರುಜಿನಗಳನ್ನು ಶಮನಗೊಳಿಸುತ್ತದೆ. ಹೆರಿಗೆಯಾದ ತಕ್ಷಣ ಮಗುವಿಗೆ ಎದೆಹಾಲನ್ನು ಮಗುವಿಗೆ ಊಣಬಡಿಸಿದ ದಿನ ಹಳದಿ ಬಣ್ಣದ ಒಂದು ತರಹದ ದಪ್ಪಗಿನ ದ್ರವವು ಸ್ತನದಿಂದ ಸ್ರವಿಸುತ್ತದೆ. ಇದನ್ನು ಕೊಲೆಸ್ಟ್ರಾಮ್‌ ಎಂದು ಕರೆಯುತ್ತಾರೆ. ಈ ದ್ರವವು ಹೆರಿಗೆಯಾಗಿ ಎರಡು ಮೂರು ದಿನಗಳ ಒಳಗಿನ ಅವಧಿಯಲ್ಲಿ ತಾಯಿಯು ಸ್ರವಿಸುವ ವಿಶೇಷ ಹಾಲು. ಇದು ಅಲ್ಪ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಆ ವೇಳೆಯಲ್ಲಿ ಕೂಸಿಗೆ ಇಷ್ಟು ಪ್ರಮಾಣ ಸಾಕು. ಈ ಹಾಲಿನಲ್ಲಿ ಇಂಟರ್‌ಫೆರಾನ್‌ ಎಂಬ ಪ್ರೋಟಿನ್‌ ಹೇರಳವಾಗಿರುತ್ತದೆ. ಎಳೆಯ ಕೂಸನ್ನು ಕಾಡಬಲ್ಲ ಅನೇಕ ವೈರಸ್‌ಗಳಿಗೆ ಈ ಪ್ರೋಟಿನ್‌ ರಾಮಬಾಣ. ಹಾಗೆಯೇ ಇದರಲ್ಲಿನ ಪೈಬ್ರೋನೆಕ್ಟಿವ್‌ ಅಂಶವು ಮಗುವಿನ ದೇಹ ರಕ್ಷ ಣಾ ಪಡೆಯ ಜೀವಕೋಶಗಳಿಗೆ ವಿಶೇಷ ಶಕ್ತಿಯನ್ನು ಒದಗಿಸುತ್ತದೆ. ಎ, ಸಿ, ಡಿ, ಜೀವಸತ್ವಗಳು ಮಗುವನ್ನು ಇರುಳುಗಣ್ಣು, ರಿಕೆಟ್ಸ್‌ನಂಥ ಅನೇಕ ಭೀಕರ ರೋಗಗಳಿಂದ ದೂರವಿಡುತ್ತದೆ. ಹೆರಿಗೆಯಾದ 2-3 ದಿನದಲ್ಲಿ ಮೊದಲ ಬರುವ ಗಿಣ್ಣದ ಹಾಲಿನಲ್ಲಿ "ಕೋಲೆಸ್ಟ್ರಾಂ" ಎಂಬ ರೋಗನಿರೋಧಕ ಶಕ್ತಿ ಹೆಚ್ಚಿದ್ದು ಮಗುವಿಗೆ ಮುಂದೆ ಬರುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟತ್ತದೆ. ತಾಯಿಯ ಎದೆಹಾಲು ಕುಡಿಸುವುದರಿಂದ ತಾಯಿ ಮಗುವಿನ ಬಾಂಧವ್ಯ, ಪ್ರೀತಿ, ವಾತ್ಸಲ್ಯ ಹೆಚ್ಚಾಗುತ್ತದೆ. ಎದೆಹಾಲು ಕುಡಿಯುವ ಮಕ್ಕಳಲ್ಲಿ ಅಧಿಕ ಬೊಜ್ಜು ಬೆಳೆಯುವುದಿಲ್ಲ ಇದರಿಂದಾಗಿ ಅವರು ಮದು ಮೇಹ, ಅಸ್ತಮ ಹಾಗೂ ಇನ್ನೀತರ ಸೋಂಕುಗಳಿಂದ ರಕ್ಷಣೆ ಪಡೆಯುತ್ತಾರೆ. ಮಗು ಹುಟ್ಟಿದ ಅರ್ಧ ಗಂಟೆಯಿಂದ ಸುಮಾರು 2-3 ವರ್ಷಗಳ ಕಾಲ ಎದೆಹಾಲು ಉಣಿಸಬಹುದು. ಆದರೆ ಮೊದಲ 06 ತಿಂಗಳ ಕಾಲ ಎದೆಹಾಲು ಮಾತ್ರ ಕುಡಿಸಬೇಕು. ತಾಯಿಯ ಎದೆಹಾಲು ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳು ಎದೆಹಾಲಿನಲ್ಲಿರುತ್ತದೆ. ಮಗುವಿಗೆ ಸುಲಭವಾಗಿ ಜೀರ್ಣಿಸಿಕೊಳ್ಳುವ ಆಹಾರ ಇದಾಗಿದೆ. ಮೂಳೆ ಮತ್ತು ಹಲ್ಲುಗಳ ಬೆಳವಣಿಗೆಗೆ ಸಹಾಯಕವಾಗುವ ಕ್ಯಾಲ್ಷಿಯಂ, ಫಾಸ್ಫರಸ್‌ನಂಥ ಲವಾಂಶಗಳನ್ನು ಹೀರಿಕೊಳ್ಳಲು ಸಹಾಯಕವಾಗುತ್ತದೆ. ತಾಯಿದೇಹದ ಬಿಳಿಕಣಗಳು ಮಗುವಿನ ದೇಹಕ್ಕೆ ರಕ್ಷ ಣೆ ನೀಡಲು ತಾಯಿ ದೇಹ ತನ್ನ ರಕ್ತದಲ್ಲಿಯ ದೇಹರಕ್ಷಣಾ ಪಡೆಯ ಬಿಳಿಕಣ(ಲ್ಯಾಕೋಸೈಟ್‌)ಗಳನ್ನು ಎದೆಹಾಲು ಮೂಲಕ ಮಗುವಿನ ದೇಹಕ್ಕೆ ರವಾನಿಸುತ್ತದೆ. ಇದು ಯಾವುದೇ ಸೋಂಕಿನ ವಿರುದ್ಧ ನೇರವಾಗಿ ಸೆಣಿಸಲು ಶಕ್ಯವಾಗಿರುತ್ತವೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.