ಹುತ್ತದ ಮಣ್ಣು ನಿಮಗೆಷ್ಟು ಗೊತ್ತು..?

Video Description

ನಿಮಗೆ ಗೊತ್ತೇ? ಗೆದ್ದಲು ಕಟ್ಟಿದ ಗೂಡಿನಲ್ಲಿ ಹಾವಿನ ವಾಸ! ಹುತ್ತದ ಮಣ್ಣು ನಿಮಗೆಷ್ಟು ಗೊತ್ತು..? ಗೆದ್ದಲು ಹುಳು ಕಟ್ಟಿದ ಗೂಡಿನಲ್ಲಿ ಹಾವುಗಳು ಬಂದು ನೆಲೆನಿಲ್ಲುತ್ತವೆ. ಈ ಗೂಡಿನಿಂದ ತೇವಾಂಶ ನೆಲೆನಿಲ್ಲುತ್ತದೆ. ಗೆದ್ದಲು ರೈತ ಮಿತ್ರಕೂಡ ಹೌದು. ಗೆದ್ದಲು ಹುಳುಗಳಲ್ಲಿ ರಾಣಿ ಹುಳು, ಸೈನಿಕ ಹುಳು ಮತ್ತು ಕಾರ್ಮಿಕ ಹುಳು ಎಂಬ ಮೂರು ಗುಂಪುಗಳಿವೆ. ಗೆದ್ದಲು ಮಣ್ಣನ್ನು ಗಣೇಶ ಪ್ರತಿಮೆಯನ್ನು ಮಾಡಲು ಬಳಸಲಾಗುತ್ತದೆ. ಗೆದ್ದಲು ಸಂಪೂರ್ಣವಾಗಿ ಹೋದ ನಂತರವೇ ಹಾವುಗಳು ಈ ಗೂಡುಗಳನ್ನು ವಾಸಸ್ಥಾನವನ್ನಾಗಿ ಮಾಡಿಕೊಳ್ಳುತ್ತದೆ. ಇದು ತಣ್ಣನೆಯ ತಾವಳವಾಗಿರುವುದರಿಂದ ಗೂಡಿಗೆ ಹಾವುಗಳು ಬಂದು ವಾಸ ಮಾಡುತ್ತವೆ. ಪ್ರಾಚೀನ ಕಾಲದಿಂದಲೂ ನಮ್ಮ ಪೂರ್ವಿಕರು ಮಣ್ಣಿನ ತತ್ವವನ್ನು ಚಿಕಿತ್ಸೆಗೆ ಬಳಸುತ್ತಿದ್ದರು. ಕಪ್ಪು ಮಣ್ಣು ಅಥವಾ ಹುತ್ತದ ಮಣ್ಣನ್ನು ಪ್ರಕತಿ ಚಿಕಿತ್ಸಾಲಯಗಳಲ್ಲಿ ಚಿಕಿತ್ಸೆಗೆ ಬಳಸುತ್ತಾರೆ. ಹುತ್ತದ ಮಣ್ಣು ಚರ್ಮದ ವ್ಯಾಧಿಗಳಲ್ಲಿ ವಿಶೇಷ ಪರಿಣಾಮ ಹೊಂದಿದ್ದರೆ ಕಪ್ಪು ಮಣ್ಣು ಸೂರ್ಯ ಕಿರಣಗಳ ಶಕ್ತಿಯನ್ನು ದೇಹಕ್ಕೆ ವರ್ಗಾಯಿಸುವ ಮತ್ತು ದೇಹದಿಂದ ಅಧಿಕ ಉಷ್ಣಾಂಶವನ್ನು ಹೀರುವ ಅಗಾಧಶಕ್ತಿ ಹೊಂದಿದೆ. ಮೊಡವೆಯಿಂದ ಉಂಟಾದ ಕಲೆಯನ್ನು ಹೋಗಲಾಡಿಸುತ್ತದೆ. ಉರಿಯೂತವನ್ನು ತಡೆಯುತ್ತದೆ. ಕಣ್ಣಿನ ಆಯಾಸವನ್ನು ಕಡಿಮೆ ಮಾಡುತ್ತದೆ. ಕುಷ್ಠರೋಗ, ಅಲರ್ಜಿ, ಸೋರಿಯಾಸಿಸ್ ಹಾಗೂ ಇತರ ಚರ್ಮರೋಗಗಳಿಗೆ ಮಡ್ ಥೆರಪಿಯಿಂದ ಪರಿಹಾರ ಕಂಡುಕೊಳ್ಳಬಹುದು. ಚಿಕಿತ್ಸೆಗೆ ಬಳಸುವ ಮಣ್ಣನ್ನು ಅತ್ಯಂತ ಜಾಗರೂಕತೆಯಿಂದ ಆಯ್ಕೆ ಮಾಡಬೇಕು. ರಾಸಾಯನಿಕ ಪದಾರ್ಥಗಳಿಂದ ಮುಕ್ತವಾದ ಪ್ರದೇಶದಿಂದ ಮಣ್ಣು ತೆಗೆಯುವುದು ಉತ್ತಮ ಅಥವಾ ಭೂಮಿಯ ಮೇಲ್ಮೈಯಿಂದ 3-4 ಅಡಿ ಆಳದಿಂದ ಮಣ್ಣನ್ನು ತೆಗೆಯುವುದು. ಆ ರೀತಿ ತೆಗೆದ ಮಣ್ಣನ್ನು ಕಲ್ಮಶಗಳಿಂದ ಶುದ್ಧೀಕರಿಸಿ ಎರಡು ದಿನಗಳವರೆಗೆ ಒಣಗಿಸಿ ಮಣ್ಣು ಮೃದುವಾಗುವಂತೆ ಪುಡಿಮಾಡಿ ಶೋಧಿಸಿ ನಂತರ ಒಂದು ಬಕೆಟ್ ನಲ್ಲಿ ನೆನೆ ಹಾಕಬೇಕು. ಹದಮಾಡಿದ ಮಣ್ಣನ್ನು ವ್ಯಕ್ತಿಯ ಪೂರ್ಣ ದೇಹಕ್ಕೆ ಲೇಪಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಣ್ಣು ಕಿವಿ ಮತ್ತು ಕಣ್ಣುಗಳ ಒಳ ಸೇರದಂತೆ ಎಚ್ಚರ ವಹಿಸಬೇಕು. ಮಣ್ಣನ್ನು ಲೇಪಿಸಿದ ನಂತರ ಸುಮಾರು 45 ನಿಮಿಷಗಳ ವರೆಗೆ ಸೂರ್ಯಕಿರಣಗಳಿಗೆ ಮೈ ಒಡ್ಡಬೇಕು. ನಂತರ ತಣ್ಣೀರಿನ ಸ್ನಾನ ಮಾಡಬೇಕು. ಪ್ರಕತಿ ಚಿಕಿತ್ಸಾಲಯಗಳಲ್ಲಿ ಕಾಟನ್ ಬಟ್ಟೆಯಲ್ಲಿ ಮಣ್ಣಿನ ಪ್ಯಾಕ್ ತಯಾರಿಸಿ ಹೊಟ್ಟೆ ಹಾಗೂ ಕಣ್ಣುಗಳ ಮೇಲೆ ಈ ಪಟ್ಟಿಗಳನ್ನು ಎಲ್ಲ ಸಾಧಕರಿಗೆ ಪ್ರತಿದಿನ ನೀಡಲಾಗುತ್ತದೆ. ಇನ್ನೂ ತೊಂದರೆ ಇರುವ ಭಾಗಕ್ಕೆ ನೇರವಾಗಿಯೂ ಸಹ ಮಣ್ಣಿನ ಲೇಪನ ಮಾಡಬಹುದು. ಮಣ್ಣಿನ ಅರ್ಧ ಸ್ನಾನ ಅಂದರೆ ಈ ವಿಧಾನದಲ್ಲಿ ಮಣ್ಣನ್ನು ದೇಹದ ನಿರ್ದಿಷ್ಟ ಭಾಗಕ್ಕೆ ಲೇಪಿಸಲಾಗುತ್ತದೆ. ಅದು ನೇರವಾಗಿ ಚರ್ಮದ ಮೇಲಾಗಿರಬಹುದು ಮಣ್ಣಿನ ಪಟ್ಟಿಗಳ ಮೂಲಕವಾಗಿರಬಹುದು. ಹೀಗೆ ಹುತ್ತದ ಮಣ್ಣನ್ನು ದೇಹದ ಕಾಯಿಲೆಗಳನ್ನು ಚರ್ಮ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಬಳಸಬಹುದಾಗಿದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.