ಟಿಪ್ಸ್ ಟೈಮ್..! ( ಸುಖಮಯ ಬದುಕಿಗೆ ಸುಲಭದ ಟಿಪ್ಸ್..)

Video Description

ಮನೆಯಲ್ಲೇ ನಿಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಿ ಟಿಪ್ಸ್ ಟೈಮ್..! ( ಸುಖಮಯ ಬದುಕಿಗೆ ಸುಲಭದ ಟಿಪ್ಸ್..) ಸುಂದರವಾಗಿ ಕಾಣಬೇಕೆಂದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದೂ ಕೂಡ ನೈಸರ್ಗಿಕ ವಿಧಾನವನ್ನು ಬಳಸಿಕೊಂಡು ಸೌಂದರ್ಯವನ್ನು ವೃದ್ಧಿಪಡಿಸಬೇಕೆಂದೇ ಪ್ರತಿಯೊಬ್ಬ ಹೆಂಗಸರೂ ಬಯಸುತ್ತಾರೆ. ಆದರೆ ಮನೆಯಲ್ಲೇ ಸೌಂದರ್ಯ ವಿಧಾನಗಳನ್ನು ಅನುಸರಿಸಲು ಸಮವಿಲ್ಲವೆಂದು ಪ್ರತಿಯೊಬ್ಬರೂ ಪಾರ್ಲರ್‌ನ ಮೊರೆ ಹೋಗುತ್ತಾರೆ. ಆದರೆ ನಿಮಗಿರುವ ಸ್ವಲ್ಪ ಸಮಯವನ್ನು ಬಳಸಿಕೊಂಡೇ ನೀವು ಬೇರೆ ಬೇರೆ ಸೌಂದರ್ಯ ವಿಧಾನಗಳನ್ನು ಮನೆಯಲ್ಲೇ ಮಾಡಿಕೊಳ್ಳಬಹುದು. ಇದರಿಂದ ದುಡ್ಡು ಉಳಿಯುತ್ತದೆ ಜೊತೆಗೆ ನೈಸರ್ಗಿಕವಾಗಿ ನಿಮ್ಮ ತ್ವಚೆಯ ಕಾಂತಿಯನ್ನು ನೀವು ಕಾಪಾಡಿಕೊಳ್ಳಬಹುದು. ಡೆಡ್ ಸ್ಕಿನ್ ನಿವಾರಣೆಗೆ ¼ ಬೆಣ್ಣೆ ಹಣ್ಣಿನ ತಿರುಳು ಅರ್ಧ ಲಿಂಬೆ ಹಣ್ಣಿನ ರಸ ½ ಆಲಿವ್ ಎಣ್ಣೆ 1 ಚಮಚ ಜೇನುತುಪ್ಪ ಇವೆಲ್ಲವನ್ನು ಒಟ್ಟಿಗೆ ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಿ. ಮುಖಕ್ಕೆ ಹಚ್ಚುವ ಮೊದಲು ಎರಡು ಮೂರು ಬಾರಿ ನಿಮ್ಮ ಮುಖವನ್ನು ಬಿಸಿ ನೀರಿನಿಂದ ಒದ್ದೆಯಾದ ಬಟ್ಟೆಯಿಂದ ಮುಖ ಒರೆಸಿಕೊಳ್ಳ್ಲಿ. ನಂತರ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಹಾಗೆ ಬಿಡಿ. ಆಮೇಲೆ ತಣ್ಣಗಿನ ನೀರಿನಿಂದ ಮುಖ ತೊಳೆದು, ನಿಮ್ಮಿಷ್ಟದ ಯಾವುದಾದರೂ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ. ಬ್ಲ್ಯಾಕ್ ಹೆಡ್ ನಿವಾರಣೆಗೆ ಚಿಕ್ಕಚಮಚ ಜೇನು ಮತ್ತು ಒಂದು ಚಿಟಿಕೆ ದಾಲ್ಚಿನ್ನಿ ಪುಡಿಯನ್ನು ಚೆನ್ನಾಗಿ ಬೆರೆಸಿ ಈ ಲೇಪನವನ್ನು ಕಪ್ಪು ತಲೆಗಳಿರುವ ಭಾಗಕ್ಕೆ ತೆಳುವಾಗಿ ಹಚ್ಚಿ. ಕೊಂಚ ಒಣಗಿದ ಬಳಿಕ ಹತ್ತಿಯ ಬಟ್ಟೆಯ ಪಟ್ಟಿಯೊಂದನ್ನು ಹಚ್ಚಿದ ಭಾಗದ ಮೇಲೆ ಆವರಿಸುವಂತೆ ಕೊಂಚವೇ ಒತ್ತಡ ಹಾಕಿ ಅಂಟಿಸಿ. ಇನ್ನೂ ಕೊಂಚಕಾಲ ಹಾಗೇ ಬಿಡಿ. ಲೇಪನ ಪೂರ್ಣವಾಗಿ ಒಣಗಿದೆ ಎಂದು ಅನ್ನಿಸಿದ ಬಳಿಕ ಒಂದು ಕಡೆಯಿಂದ ಸಿಪ್ಪೆ ಸುಲಿದಂತೆ ಈ ಪಟ್ಟಿಯನ್ನು ಎತ್ತುತ್ತಾ ಬನ್ನಿ. ಕಪ್ಪು ತಲೆಗಳು ಬುಡಸಹಿತ ಈ ಪಟ್ಟಿಗೆ ಅಂಟಿಕೊಂಡಿರುವುದನ್ನು ನೋಡಬಹುದು. ತ್ವಚೆಯ ಕಾಂತಿ ಹೆಚ್ಚಿಸಲು ಆಪಲ್ ಸೈಡರ್ ವಿನಿಗರ್ ಆರೋಗ್ಯಕ್ಕೆ ಮತ್ತು ತ್ವಚೆಗೆ ತುಂಬಾ ಒಳ್ಳೆಯದು. ಅರ್ಧ ಕಪ್ ಆಪಲ್ ಸೈಡರ್ ವಿನಗರ್ ಅನ್ನು ಒಂದು ಬಕೆಟ್ ನೀರಿನಲ್ಲಿ ಮಿಶ್ರ ಸ್ನಾನದ ಬಳಿಕ ನೀರನ್ನು ಮೈಗೆ ಸುರಿದು ನಂತರ ಟವಲ್ ನಿಂದ ಮೈ ಒರೆಸಬೇಕು. ಈ ರೀತಿ ವಾರದಲ್ಲಿ 3 ಬಾರಿ ಮಾಡಿದರೆ ತ್ವಚೆಯಲ್ಲಿ ಆಗುವ ಬದಲಾವಣೆಯನ್ನು ನೀವೇ ಕಾಣಬಹುದು. ದೇಹವನ್ನು ವಾರಕ್ಕೊಮ್ಮೆ ಸ್ಕ್ರಬ್ ಮಾಡಬೇಕು. ಓಟ್ಸ್ ಮೀಲ್ಸ್, ಹೆಸರು ಕಾಳಿನ ಪುಡಿ ಇವುಗಳಿಂದ ಸ್ಕ್ರಬ್ ಮಾಡಬಹುದು. ಮುಲ್ತಾನಿ ಮಿಟಿಯನ್ನು ಸ್ವಲ್ಪ ಗ್ಲಿಸೆರಿನ್ ಜೊತೆ ಮಿಶ್ರ ಮಾಡಿ ನಿಮ್ಮ ಪೂರ್ತಿ ದೇಹಕ್ಕೆ ಅಥವಾ ಕೈ, ಕಾಲು, ಕುತ್ತಿಗೆ, ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿದರೆ ಮುಖದ ಹೊಳಪು ಹೆಚ್ಚುವುದು. ಡ್ರೈ ಸ್ಕಿನ್ ಹೋಗಲಾಡಿಸಲು ಜೇನುತುಪ್ಪ ಆರೋಗ್ಯಕ್ಕೊಂದೇ ಅಲ್ಲ ತ್ವಚೆಗೆ ಉತ್ತಮ. ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಇರುವ ಪದಾರ್ಥ ಇದು. ಜೇನುತುಪ್ಪವನ್ನು ಮುಖದ ಮೇಲೆ ಹಚ್ಚಿ ನಿಧಾನವಾಗಿ ಸ್ಕ್ರಬ್ ಮಾಡಬೇಕು. ಹತ್ತು ನಿಮಿಷದ ನಂತರ ಮುಖವನ್ನು ನೀರಿನಲ್ಲಿ ತೊಳೆಯಬೇಕು. ಇದು ಮುಖದ ಕಾಂತಿ ಹೆಚ್ಚಿಸುವ ಜೊತೆಗೆ ಒಣ ಚರ್ಮ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ಹಾಲು ಮತ್ತು ಆಲಿವ್ ಆಯಿಲ್ ಕೂಡ ಚರ್ಮದ ಕಾಂತಿ ಹೆಚ್ಚಿಸುತ್ತವೆ. ತಂಪಾದ ಹಾಲಿನಲ್ಲಿ ಆಲಿವ್ ಆಯಿಲ್ ನ 2 ಹನಿ ಹಾಕಿ ಅದನ್ನು ಮುಖಕ್ಕೆ ಮಸಾಜ್ ಮಾಡುವ ಮೂಲಕ ಒಣ ಚರ್ಮದಿಂದ ಪರಿಹಾರ ಹೊಂದಬಹುದಾಗಿದೆ. ಕೂದಲಿನ ಆರೈಕೆ ಬಾಳೆಹಣ್ಣು ಹಾಗೂ ಮೊಟ್ಟೆಯ ಮಿಶ್ರಣವನ್ನು ಹಚ್ಚಿಕೊಳ್ಳುವುದು ಕೂದಲಿಗೆ ಹೊಳಪನ್ನು ನೀಡುತ್ತದೆ. 2 ಬಾಳೆಹಣ್ಣನ್ನು 2 ಮೊಟ್ಟೆಯಲ್ಲಿ ಮಿಕ್ಸ್‌ ಮಾಡಿ. ಇದಕ್ಕೆ ಲಿಂಬೆಹುಳಿ ರಸವನ್ನು ಹಿಂಡಿಬಿಇ. 2 ವಿಟಮಿನ್‌ ಇ ಕ್ಯಾಪ್ಸುಲ್‌ಗಳನ್ನು ಸೇರಿಸಿ. ಈ ಪೇಸ್ಟ್‌ನನ್ನು ತಲೆ ಕೂದಲಿಗೆ ಹಚ್ಚಿ, ಅರ್ಧ ಗಂಟೆ ಬಿಟ್ಟುಬಿಡಿ. ಕೂದಲಿಗೆ ಕವರ್‌ ಮಾಡಿಕೊಳ್ಳಿ, ಬಳಿಕ ತೊಳೆದುಕೊಳ್ಳಿ! ಮೆಂತೆ ಕಾಳುಗಳನ್ನು ಒಂದು ರಾತ್ರಿ ನೀರಿನಲ್ಲಿ ನೆನೆಸಿ. ಅದನ್ನು ಅದುಮಿ ಪೇಸ್ಟ್‌ನಂತೆ ಮಾಡಿ. ದಾಸವಾಳದ ಎಲೆ ಹಾಗೂ ಹೂವನ್ನೂ ಪೇಸ್ಟ್‌ನಂತೆ ಮಾಡಿ, 2 ಚಮಚದಷ್ಟು ಈ ಪೇಸ್ಟ್‌ನ್ನು ಮೆಂತೆ ಪೇಸ್ಟ್‌ಗೆ ಸೇರಿಸಿಕೊಳ್ಳಿ. ಈ ಮಿಶ್ರಣಕ್ಕೆ ಓಲಿವ್‌ ಆಯಿಲ್‌ ಸೇರಿಸಿಕೊಳ್ಳಿ. ಕೂದಲಿಗೆ ಹಚ್ಚಿ 20-30ನಿಮಿಷ ಬಿಟ್ಟುಬಿಡಿ, ಬಳಿಕ ಚೆನ್ನಾಗಿ ಕೂದಲನ್ನು ತೊಳೆಯಿರಿ. ಒಂದು ಕಪ್‌ ತೆಂಗಿನ ಕಾಯಿಯ ಹಾಲಿಗೆ 2 ಚಮಚ ಕರಿಬೇವನ್ನು ಹುಡಿ ಮಾಡಿ. ಸೇರಿಸಿ. ಈ ಮಿಶ್ರಣವನ್ನು ಕೂದಲಿಗೆ ಹಾಕಿ ಒಂದು ಗಂಟೆಗಳ ಕಾಲ ಬಿಟ್ಟುಬಿಡಿ. ಬಳಿಕ ಚೆನ್ನಾಗಿ ತೊಳೆಯಿರಿ. ಚರ್ಮದ ಕಾಂತಿ ಹೆಚ್ಚಿಸಲು ಬಾದಾಮಿಯನ್ನು ಮುಖದ ಚರ್ಮದ ಆರೈಕೆಗೆ ಬಳಸುವ ಮೂಲಕ ವೃದ್ಧಾಪ್ಯದ ಚಿಹ್ನೆಯನ್ನು ನಿಧಾನಗೊಳಿಸಲು ಹಾಗೂ ಮೃದುವಾದ ಮತ್ತು ಕಲೆರಹಿತವಾದ ತ್ವಚೆಯನ್ನು ಹೊಂದಲು ಸಾಧ್ಯವಾಗುತ್ತದೆ. ಇಷ್ಟೆಲ್ಲಾ ಗುಣಗಳಿರುವ ಬಾದಾಮಿಯನ್ನು ಮುಖಲೇಪದ ರೂಪದಲ್ಲಿ ಕೂಡ ಬಳಸಿ ಮೈ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಬಾದಾಮಿಯಲ್ಲಿ ಹೇರಳವಾಗಿರುವ ಕೊಬ್ಬಿನ ಆಮ್ಲಗಳು ಚರ್ಮದ ಆಳಕ್ಕೆ ಇಳಿದು ಅಗತ್ಯವಿರುವ ಆರ್ದ್ರತೆಯನ್ನು ನೀಡಲು ಸಕ್ಷಮವಾಗಿವೆ. ಬಾದಾಮಿಯನ್ನು ಚರ್ಮದ ಮೇಲೆ ಬಳಸುವುದರಿಂದ ಇದೊಂದು ನೈಸರ್ಗಿಕ ತೇವಕಾರಕದಂತೆ ಕಾರ್ಯ ನಿರ್ವಹಿಸುತ್ತದೆ. ಈ ಮೂಲಕ ಚರ್ಮ ಆರೋಗ್ಯಕರ ಹಾಗೂ ಮೃದುವಾಗಿರುತ್ತದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.