ಭಾರತದ ಪ್ರಮುಖ ಹತ್ತು ನಗರಗಳು..!

Video Description

ಭಾರತದ ಅತ್ಯಂತ ಸುಂದರವಾದ ಹತ್ತು ನಗರಗಳು ಭಾರತದ ಪ್ರಮುಖ ಹತ್ತು ನಗರಗಳು..! ಅಲ್ಪಾವಧಿಯಲ್ಲಿ ಅತಿ ಹೆಚ್ಚು ಬೆಳವಣಿಗೆ ಕಂಡ ಜಗತ್ತಿನ 30 ನಗರಗಳ ಪಟ್ಟಿಯಲ್ಲಿ ಹೈದರಾಬಾದ್‌ ಮತ್ತು ಬೆಂಗಳೂರು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿವೆ ಎಂದು ಜಾಗತಿಕ ರಿಯಲ್‌ ಎಸ್ಟೇಟ್‌ ಹೂಡಿಕೆ ಸಲಹಾ ಸಂಸ್ಥೆ ಜೋನ್ಸ್‌ ಲ್ಯಾಂಗ್‌ ಲಾಸಲ್ಲೆ (ಜೆಎಲ್‌ಎಲ್‌) ವರದಿಯಲ್ಲಿ ಹೇಳಿದೆ. ಜೆಎಲ್‌ಎಲ್‌ನ ‘ನಗರ ಬೆಳವಣಿಗೆ ಸೂಚ್ಯಂಕ (ಸಿಎಂಐ) 2018’ ಆಧರಿತ ಅಲ್ಪಾವಧಿ ಬೆಳವಣಿಗೆ ರ‍್ಯಾಂಕಿಂಗ್‌ ವಾರ್ಷಿಕ ಪಟ್ಟಿಯಲ್ಲಿ ದೇಶದ ಪ್ರಮುಖ ನಗರಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಗಮನಾರ್ಹ ಸಂಗತಿ. ಹೈದರಾಬಾದ್‌ ಮತ್ತು ಬೆಂಗಳೂರು ಜತೆಗೆ ಪುಣೆ, ಕೋಲ್ಕತ್ತ, ದೆಹಲಿ ಮೊದಲ ಹತ್ತು ನಗರಗಳಲ್ಲಿ ಸ್ಥಾನ ಪಡೆದಿವೆ. ಚೆನ್ನೈ ಮತ್ತು ಮುಂಬೈ 20 ನಗರಗಳಲ್ಲಿ ಸ್ಥಾನ ಪಡೆದಿವೆ. ಆರ್ಥಿಕತೆ, ರಿಯಲ್‌ ಎಸ್ಟೇಟ್‌ ಪ್ರಗತಿ ಮಾನದಂಡ: ಇತ್ತೀಚಿನ ದಿನಗಳಲ್ಲಿ ತೀವ್ರ ಬೆಳವಣಿಗೆ ಕಾಣುತ್ತಿರುವ ನಗರಗಳ ಆರ್ಥಿಕತೆ ಮತ್ತು ರಿಯಲ್‌ ಎಸ್ಟೇಟ್‌ ಮಾರುಕಟ್ಟೆ ಪ್ರಗತಿಯನ್ನು ಪ್ರಮುಖ ಮಾನದಂಡವನ್ನಾಗಿ ಪರಿಗಣಿಸಲಾಗಿದೆ ಎಂದು ಜೆಎಲ್‌ಎಲ್‌ ವರದಿ ಹೇಳಿದೆ. ಮಾನವ ಸಂಪನ್ಮೂಲ, ಸಂಪರ್ಕ, ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ, ಆಸ್ತಿಗಳ ಬೆಲೆ, ಕಾರ್ಪೊರೇಟ್‌ ಚಟುವಟಿಕೆ, ನಿರ್ಮಾಣ ಚಟುವಟಿಕೆ ಮತ್ತು ಚಿಲ್ಲರೆ ಮಾರಾಟ ಮಾರುಕಟ್ಟೆ ಮುಂತಾದ ಮಾನದಂಡಗಳಲ್ಲಿ ಭಾರತದ ನಗರಗಳು ಉತ್ತಮ ಸಾಧನೆ ತೋರಿವೆ. ಇಂದಿನ ನಮ್ಮ ಲೇಖನದಲ್ಲಿ ಹತ್ತು ಸುಂದರ ನಗರಗಳ ಪರಿಚಯ ಮಾಡಿಕೊಳ್ಳೋಣ. ಶ್ರೀನಗರ ಭೂಮಿಯ ಮೇಲಿನ ಸ್ವರ್ಗ ಮತ್ತು ಪೂರ್ವದ ವೆನೀಸ್ ಎಂದು ಹೆಮ್ಮೆಯಿಂದ ಕರೆಯಿಸಿಕೊಳ್ಳುವ ಶ್ರೀನಗರವು ಸುಂದರವಾದ ಕಾಶ್ಮೀರ ಕಣಿವೆಯಲ್ಲಿದೆ. ಝೀಲಮ್ ನದಿಯ ದಡದಲ್ಲಿ ಇರುವ ಈ ನಗರ ಅಲ್ಲಿನ ಸುಂದರವಾದ ಸರೋವರಗಳು, ಹೌಸ್ ಬೋಟ್ ಗಳು ಮತ್ತು ಹಲವಾರು ಮೊಘಲ್ ಉದ್ಯಾನವನಗಳಿಗೆ ಪ್ರಸಿದ್ಧವಾಗಿದೆ. ಶ್ರೀನಗರ ಎಂಬ ಶಬ್ದ ಶ್ರೀ ಮತ್ತು ನಗರ ಎಂಬ ಎರಡು ಪದಗಳಿಂದ ವ್ಯುತ್ಪತ್ತಿಯಾಗಿದೆ. ಇವುಗಳ ಅರ್ಥ ಕ್ರಮವಾಗಿ ಸಿರಿವಂತಿಕೆ ಮತ್ತು ಸ್ಥಳ ಎಂಬುದಾಗಿದೆ. ಹಾಗಾಗಿ ಈ ಶಬ್ದದ ಪದಶಹಃ ಅರ್ಥ ಸಿರಿವಂತಿಕೆಯ ನಗರ ಎಂಬುದಾಗಿದೆ. ಜೈಪುರ ಜೈಪುರ ಅಥವಾ ಜಯಪುರ ರಾಜಸ್ಥಾನ ರಾಜ್ಯದ ರಾಜಧಾನಿ.ಜೈಪುರವು ಭಾರತದ ಪಿಂಕ್ ಸಿಟಿ ಎಂದೇ ಪ್ರಸಿದ್ಧವಾಗಿದೆ[೨]. ರಾಜಸ್ಥಾನದ ರಾಜಧಾನಿಯಾಗಿರುವ ಜೈಪುರವು ಒಂದು ಪುಟ್ಟ ಮರುಭೂಮಿಯಾಗಿದೆ. ಅಂಬರ್ ಕೋಟೆ, ನಹಾರಗಢ ಕೋಟೆ ಹವಾ ಮಹಲ್‌, ಶೀಶ ಮಹಲ್‌, ಗಣೇಶ್ ಪೋಲ್‌ ಮತ್ತು ಜಲ ಮಹಲ್‌ ಇಲ್ಲಿನ ಕೆಲವು ಪ್ರಮುಖ ಆಕರ್ಷಕ ಪ್ರವಾಸಿ ತಾಣಗಳು. ಆಗ್ರಾ ಆಗ್ರಾ ನಗರ ಭಾರತ ದೇಶದ ಉತ್ತರ ಪ್ರದೇಶ ರಾಜ್ಯದಲ್ಲಿರುವ ಒಂದು ಪ್ರಸಿದ್ಧ ಪ್ರವಾಸಿ ಸ್ಥಳ. ವಿಶ್ವ ವಿಖ್ಯಾತ ತಾಜ್ ಮಹಲ್ ಇರುವ ಈ ಊರು ಜಗತ್ತಿನಾದ್ಯಂತ ಹೆಸರುವಾಸಿ. ಆಗ್ರಾವು ಆಗ್ರಾ , ಜೈಪುರ್ ಮತ್ತು ದೆಹಲಿಗಳನ್ನು ಒಳಗೊಂಡಿರುವ ಸುವರ್ಣ ತ್ರಿಕೋನದ ಒಂದು ಭಾಗವಾಗಿದೆ. ದೆಹಲಿಗೆ ಇದು ಹತ್ತಿರವಿರುವುದರಿಂದಾಗಿ ಹಲವಾರು ಪ್ರವಾಸಿಗರು ಒಂದು ದಿನದ ಪ್ರವಾಸದ ಸಲುವಾಗಿ ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಆಗ್ರಾದಲ್ಲಿರುವ ಐತಿಹಾಸಿಕ ಕಟ್ಟಡಗಳು ನಿಸ್ಸಂಶಯವಾಗಿ ಇಲ್ಲಿನ ಪ್ರಮುಖ ಆಕರ್ಷಣೆಯಾಗಿವೆ. ಪ್ರವಾಸಿಗರು ತಾಜ್ ಮಹಲ್ ಜೊತೆಗೆ ಯಮುನಾ ನದಿಯ ದಂಡೆಯ ಮೇಲೆ ನೆಲೆಗೊಂಡಿರುವ ಆಗ್ರಾ ಕೋಟೆ ಮತ್ತು ಅಕ್ಬರನ ಸಮಾಧಿಗೆ ಭೇಟಿ ನೀಡಬಹುದು. ಪಾಂಡಿಚೇರಿ ಪುದುಚೇರಿ (ಮುಂಚೆ ಪಾಂಡಿಚೆರಿ) ಭಾರತದ ಒಂದು ಕೇಂದ್ರಾಡಳಿತ ಪ್ರದೇಶಗಳು. ಮುಂಚೆ ಫ್ರಾನ್ಸ್ ದೇಶದ ವಸಾಹತು ಆಗಿದ್ದ ವಿವಿದೆಡೆ 4 ಕಡೆ ಹರಡಿರುವ ಜಿಲ್ಲೆಗಳು ಇದಕ್ಕೆ ಸೇರಿವೆ. ಎಲ್ಲಕಿಂತ ದೊಡ್ಡದಾಗಿರುವ ಪುದುಚೇರಿ ನಗರ ಇದರ ರಾಜಧಾನಿ. ಕಡಲಿನ ದಂಡೆಯ ಮೇಲಿರುವ ಪುದುಚ್ಚೇರಿಯ ನೆಲ ಸಮತಟ್ಟಾಗಿದ್ದು ಹೆಚ್ಚು ಮರಳಿನಿಂದ ಕೂಡಿದೆ. ಸಮುದ್ರ ಪಟ್ಟಣಕ್ಕೆ ಕೆಲವೇ ಅಡಿಗಳ ಎತ್ತರದಲ್ಲಿದೆ. ಪ್ರಮುಖ ರಸ್ತೆಗಳು ಸಮಾಂತರದಲ್ಲಿವೆ. ಪುದುಚ್ಚೇರಿ ಬಂದರಿನಲ್ಲಿ ಹಡಗುಗಳು ನಿಲ್ಲಲು ಅವಕಾಶವಿಲ್ಲ. ಬಂದರಿಗೆ ಎರಡು-ಮೂರು ಕಿ.ಮೀ. ದೂರದಲ್ಲಿ ಹಡಗುಗಳು ನಿಲ್ಲುತ್ತವೆ. ಬಂದರಿನಿಂದ ಸಮುದ್ರದ ಕಡೆಗೆ ಚಾಚಿರುವ ಹಡಗುಕಟ್ಟೆ ಜನಸಂಚಾರಕ್ಕೂ ಹಡಗಿನಿಂದ ಸರಕುಗಳನ್ನು ಇಳಿಸಿಕೊಳ್ಳುವುದಕ್ಕೂ ಅನುಕೂಲವಾಗಿದೆ. ಉದಯಪುರ ಉದಯಪುರ ಭಾರತದ ರಾಜಾಸ್ತಾನ ರಾಜ್ಯದ ಒಂದು ನಗರ. ಜಿಲ್ಲೆಯ ಮುಖ್ಯ ಸ್ಥಳ. ಜನಸಂಖ್ಯೆ 389317 (2001) ಉ. ಅ. 23º 46'-25 `56' ಹಾಗೂ ಪೊ. ರೇ. 72º 50'-75º 38' ನಡುವೆ, ಜಯಪುರದ ನೈರುತ್ಯಕ್ಕೆ 340 ಕಿಮೀ. ದೂರದಲ್ಲಿ, ಆರಾವಳಿ ಶ್ರೇಣಿಯ ಬೆಟ್ಟವೊಂದರ ಕೋಡುಗಲ್ಲಿನ ಮೇಲೆ, ಸಮುದ್ರ ಮಟ್ಟದಿಂದ 750 ಮೀ. (2,469') ಎತ್ತರದಲ್ಲಿದೆ. ಉದಯಪುರದ ಪೂರ್ವಕ್ಕೆ ಎರಡು ಮೈಲಿ ದೂರದಲ್ಲಿ ಪುರಾತನ ನಗರವೊಂದರ ಪಳೆಯುಳಿಕೆಗಳಿವೆ. ನಗರದ ಸ್ಥಾಪಕನೇ ನಿರ್ಮಿಸಿದನೆಂದು ಹೇಳಲಾದ ಉದಯ ಸರೋವರ ಇರುವುದು 10 ಕಿಮೀ. ದೂರದಲ್ಲಿ. ನಗರದ ಉತ್ತರಕ್ಕೆ 64 ಕಿಮೀ. ದೂರದಲ್ಲಿರುವ ರಾಜ್ಸಮಂದ್ ಸರೋವರ ಇನ್ನೊಂದು ಸುಂದರ ತಾಣ. ಇದರ ಗಾರೆಯ ಏರಿಗೆ ಅಮೃತಶಿಲೆಯ ನೆಲಗಟ್ಟು; ನೀರಿನ ಸಮಾಗಮ ಬಯಸಿ ಸಾಗರದಂತಿರುವ ಹಾಲ್ಗಲ್ಲಿನ ಮೆಟ್ಟಿಲು; ಹೊಳೆಯುವ ಬಿಳಿಶಿಲೆಯಲ್ಲಿ ಕೆತ್ತಿ ನಿಲ್ಲಿಸಿದ ಚಿತ್ತಾರದ ಮೂರು ಮಂಟಪಗಳು. ಈ ಸರೋವರದ ಪಕ್ಕಕ್ಕೆ ಹೊದಿಸಿರುವ ಕಲ್ಲಿನ ಮೇಲೆ ಸಂಸ್ಕೃತ ಶಾಸನವೊಂದಿದೆ (1675). ಇದು ಭಾರತದಲ್ಲೇ ಅತ್ಯಂತ ದೊಡ್ಡದೆಂದು ಹೇಳಲಾಗಿದೆ. ಇಪ್ಪತೈದು ಚಪ್ಪಡಿಗಳ ಮೇಲೆ ಹರಿದಿರುವ ಈ ಶಾಸನಕ್ಕೆ ಮೇವಾಡದ ಇತಿಹಾಸವೇ ವಸ್ತು. ಗ್ಯಾಂಗ್‌ಟೋಕ್ ಸಿಕ್ಕಿಂನಲ್ಲಿರುವ ಈ ಸ್ಥಳ ಅತ್ಯಂತ ನಮಯನ ಮನೋಹರವಾಗಿದ್ದು ಯಾತ್ರಾ ಸ್ಥಳಗಳಲ್ಲಿ ಒಂದೆನಿಸಿದೆ. ಮೈಸೂರು ಮೈಸೂರು ಕರ್ನಾಟಕ ರಾಜ್ಯದಲ್ಲಿರುವ ಒಂದು ಪ್ರಸಿದ್ಧ ನಗರ. ಮೈಸೂರು ಅದೇ ಹೆಸರಿನ ಜಿಲ್ಲೆಯ ಆಡಳಿತ ಕೇಂದ್ರ ಮತ್ತು ಹಿಂದಿನ ಮೈಸೂರು ಸಂಸ್ಥಾನದ ಹಳೆಯ ರಾಜಧಾನಿ. ಮೈಸೂರನ್ನು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲಾಗುತ್ತದೆ. ಇಲ್ಲಿ ಅನೇಕ ಅರಮನೆಗಳಿರುವುದರಿಂದ ಮೈಸೂರನ್ನು ಕೆಲವೊಮ್ಮೆ ಅರಮನೆಗಳ ನಗರ ಎಂದೂ ಕರೆಯಲಾಗುತ್ತದೆ. ಕರ್ನಾಟಕ ರಾಜ್ಯದ ಎರಡನೇ ಅತಿ ದೊಡ್ಡ ನಗರವೆಂಬ ಪ್ರಖ್ಯಾತಿಯನ್ನೂ ಪಡೆದಿದೆ. ನೈನಿತಾಲ್ ಉತ್ತರಾಖ೦ಡ್ ನ ಅತೀ ಹೆಚ್ಚು ಸ೦ದರ್ಶಿತ ಗಿರಿಧಾಮಗಳ ಪೈಕಿ ನೈನಿತಾಲ್ ಕೂಡಾ ಒ೦ದೆನಿಸಿಕೊ೦ಡಿದೆ. ವರ್ಷವಿಡೀ ಸ೦ದರ್ಶಿಸಬಹುದಾದ ತಾಣಗಳ ಪೈಕಿ ನೈನಿತಾಲ್ ಸಹ ಒ೦ದೆನಿಸಿಕೊ೦ಡಿರುವುದರಿ೦ದ, ಕಣ್ಣುಗಳ ಪಾಲಿನ ಹಬ್ಬದ೦ತಿರುವ ಈ ಸು೦ದರವಾದ ಗಿರಿಧಾಮವನ್ನು ಭಾರತೀಯರು ಹಾಗೂ ವಿದೇಶಿಯರೀರ್ವರೂ ಸಮಾನ ಆಸಕ್ತಿಯಿ೦ದಲೇ ಸ೦ದರ್ಶಿಸುತ್ತಿದ್ದಾರೆ. ಕಲ್ಕತ್ತಾ ಕಲ್ಕತ್ತದ ಪ್ರಾಮುಖ್ಯಕ್ಕೆ ಅದರ ಸನ್ನಿವೇಶವೇ ಪ್ರಧಾನ ಕಾರಣ. ಪಕ್ಕದಲ್ಲಿ ಹರಿಯುವ ಹೂಗ್ಲಿ ನದಿ ತಕ್ಕಮಟ್ಟಿಗೆ ಆಳವಾಗಿದೆ. ಸಾಗರಗಾಮಿ ಹಡಗುಗಳು ನದಿಯ ಮೇಲೆ ನಗರದ ಮುಖದ ವರೆಗೂ ಸುಲಭವಾಗಿ ಬರಬಹುದು. ಕಲ್ಕತ್ತಕ್ಕೆ ಉತ್ತರದಲ್ಲಿ ಚಿತ್ಪುರ ಕೊರಕಲೂ ಪೂರ್ವದಲ್ಲಿ ವಿಶಾಲವಾದ ಚೌಳುಮಣ್ಣಿನ ಜವುಗು ನೆಲವೂ ದಕ್ಷಿಣದಲ್ಲಿ ಆದಿಗಂಗಾ ನದಿಯೂ ಇರುವುದರಿಂದ ಪ್ರಕೃತಿಯೇ ಇದಕ್ಕೆ ರಕ್ಷಣೆಯ ಸೌಲಭ್ಯಗಳನ್ನು ಒದಗಿಸಿಕೊಟ್ಟಿತ್ತು. ಕಲ್ಕತ್ತದ ಬೆಳವಣಿಗೆಗೆ ಇದಕ್ಕಿಂತ ಹೆಚ್ಚು ಮುಖ್ಯವಾದ ಕಾರಣವೆಂದರೆ ವಿಶಾಲವೂ ಸಂಪದ್ಭರಿತವೂ ಜನನಿಬಿಡವೂ ಆದ ಹಿನ್ನಾಡು. ಗಂಗಾನದಿಯ ಬಯಲು, ಅಸ್ಸಾಂ ಕಣಿವೆಯ ಪ್ರದೇಶ, ಖನಿಜ ತುಂಬಿರುವ ಬಿಹಾರ ಒರಿಸ್ಸ ಮಧ್ಯಪ್ರದೇಶಗಳು-ಇವೆಲ್ಲ ಕಲ್ಕತ್ತದ ಹಿನ್ನಾಡಿನಲ್ಲಿವೆ. ಇದು ಭಾರತದ ಪ್ರಧಾನ ವಾಣಿಜ್ಯ ಕ್ಷೇತ್ರವಾಗಿ ಬೆಳೆಯಲು ಇದರ ಸನ್ನಿವೇಶ ಮುಖ್ಯ ಕಾರಣ. ಮುಂಬೈ ಮುಂಬಯಿನಗರ, ಮಹಾರಾಷ್ಟ್ರದ ರಾಜಧಾನಿ. ಸುಮಾರು ಒಂದು ಕೋಟಿ ಮೂವತ್ತು ಲಕ್ಷ ಜನ (೨೦೦೬ ರ ಅಂದಾಜು) ವಾಸಿಸುವ ಇದು ಭಾರತದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯಿರುವ ನಗರವಾಗಿದೆ. ಮುಂಬಯಿಯ ಉಪನಗರಗಳೂ ಸೇರಿದರೆ , ಒಟ್ಟು ಜನಸಂಖ್ಯೆ ಎರಡು ಕೋಟಿ ಮೀರಿ, ಪ್ರಪಂಚದಲ್ಲಿಯೇ ಐದನೆಯ ಅತಿ ದೊಡ್ಡ ನಗರವೆನಿಸುತ್ತದೆ. ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಮುಂಬಯಿ, ಸ್ವಾಭಾವಿಕ ಬಂದರೂ ಆಗಿದ್ದು , ಭಾರತದ ಸಮುದ್ರಮಾರ್ಗದ ಐವತ್ತು ಶೇಕಡಾ ಪ್ರವಾಸಿಗಳು, ಹಾಗೂ ಸರಕು ಇಲ್ಲಿಂದಲೇ ಸಾಗಿಸಲ್ಪಡುತ್ತದೆ. ಮುಂಬಯಿಯನ್ನು ಭಾರತದ ಆರ್ಥಿಕ ಹಾಗೂ ಮನರಂಜನಾಲೋಕದ ರಾಜಧಾನಿ ಎಂದೂ ಪರಿಗಣಿಸಲಾಗಿದೆ. ಸಂಜಯಗಾಂಧಿ ರಾಷ್ಟ್ರೀಯ ಉದ್ಯಾನವನ ನಗರದ ಸರಹದ್ದಿನಲ್ಲಿಯೇ ಇರುವುದು ಬಹುತೇಕ ಮತ್ತಾವುದೇ ನಗರಗಳಲ್ಲಿ ಕಂಡುಬರದ ವೈಶಿಷ್ಟ್ಯ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.