ಹದಿ ಹರೆಯದ ಬಸಿರು ಪ್ರಾಣಾಂತಿಕವಾಗಬಹುದು..!

Video Description

ಹದಿಹರೆಯದಲ್ಲಿ ಬಸಿರಾಗುವುದು ಪ್ರಾಣಕ್ಕೆ ಮಾರಕ ಹದಿ ಹರೆಯದ ಬಸಿರು ಪ್ರಾಣಾಂತಿಕವಾಗಬಹುದು..! ಹುಚ್ಚು ಕೋಡಿ ಮನಸು ಹದಿನಾರರ ವಯಸು ಎಂಬ ಮಾತಿನಂತೆ ವಯಸ್ಸಿನ ಲಂಗು ಲಗಾಮಿಲ್ಲದೆ ಹೆಣ್ಣುಮಕ್ಕಳು ಮಾಡುವ ತಪ್ಪಿನಿಂದ ಬಸಿರಾಗುತ್ತಾರೆ. ಆಧುನೀಕತೆಗೆ ಇಂದಿನ ಹೆಚ್ಚಿನ ಹೆಣ್ಣು ಮಕ್ಕಳು ಒಳಗಾಗುತ್ತಿರುವುದರಿಂದ ಇದೂಕೂಡ ಒಂದು ಸ್ಟೈಲ್ ಎಂದೆನ್ನಿಸಿಬಿಟ್ಟಿದೆ. ಆದರೆ ಬಸಿರಾದ ನಂತರ ಅವರು ಪಡುವ ಪಾಡು ಅವರಿಗೆ ಜೀವನದಲ್ಲಿ ತಾವು ಮಾಡಿದ ತಪ್ಪಿನ ಅರಿವನ್ನು ಮೂಡಿಸುತ್ತದೆ. ಮನೆಯಲ್ಲಿ ನೀಡುವ ಸ್ವಾತಂತ್ರ್ಯವನ್ನು ಮಿತಿಮೀರಿ ಬಳಸುವುದರಿಂದ ಇಂದಿನ ದಿನಗಳಲ್ಲಿ ಹೆಣ್ಣುಮಕ್ಕಳು ಈ ರೀತಿಯ ಪರಿಣಾಮಗಳಿಗೆ ಒಳಗಾಗುತ್ತಿದ್ದಾರೆ. ಲಂಗುಲಗಾಮಿಲ್ಲದ ಬದುಕಿನಲ್ಲಿ ಸ್ವೇಚ್ಛೆಯೇ ಪ್ರಧಾನ ಪಾತ್ರ ವಹಿಸುವುದರಿಂದ ತಮ್ಮ ಭವಿಷ್ಯದ ಬಗೆಗೆ ಗಮನ ಕೊಡುವ ಅವರ ಬುದ್ಧಿ ಕ್ಷೀಣವಾಗಿರುತ್ತದೆ. ಕಾಮದ ಬಯಕೆ, ಮಾದಕ ದ್ರವ್ಯಗಳ ಬಳಕೆ, ತಿಳಿಹೇಳಲು ದೊಡ್ಡವರು ಜವಬ್ದಾರಿ ತೆಗೆದುಕೊಳ್ಳದೇ ಇರುವುದು ಇವೇ ಮೊದಲಾದ ಕಾರಣಗಳಿಂದ ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳು ಹದಿಯರೆಯದಲ್ಲೇ ಬಸಿರಾಗುತ್ತಿದ್ದಾರೆ. ಅಮೇರಿಕಾ, ಲಂಡನ್ ಮೊದಲಾದ ಪಾಶ್ಚಾತ್ಯ ದೇಶಗಳಲ್ಲಿದ್ದ ಲಿವಿಂಗ್ ಟುಗೇದರ್ ಇವೇ ಮೊದಲಾದ ಆಧುನಿಕ ಪದ್ಧತಿಗಳು ನಮ್ಮ ದೇಶಕ್ಕೂ ಕಾಲಿಡುತ್ತಿದ್ದು ಹೆಚ್ಚಿನ ಹೆಣ್ಣು ಮಕ್ಕಳು ಇಂತಹುದಕ್ಕೆ ಬಲಿಯಾಗುತ್ತಿದ್ದಾರೆ. ಹದಿಹರೆಯದಲ್ಲಿ ಮಗುವನ್ನು ಹೆರುವುದು ಎಂದರೆ ಅದಕ್ಕೆ ಬೇಕಾದ ತಯಾರಿಯನ್ನು ಹೆಣ್ಣು ಮಕ್ಕಳು ಮಾಡಿರುವುದಿಲ್ಲ. ತಾವೇ ಮಕ್ಕಳಂತಿರುವ ವಯಸ್ಸಿನಲ್ಲಿ ವಯಸ್ಸಿನಾಟಕ್ಕೆ ಬಿದ್ದು ಮಾಡಿಕೊಂಡ ತಪ್ಪಿನಿಂದ ಹೊರಬರುವ ವೇಳೆಗೆ ಸಮಯ ಸರಿದಿರುತ್ತದೆ. ತಮ್ಮ ಜೀವನವನ್ನು ನಾವೇ ಹಾಳು ಮಾಡಿಕೊಂಡೆವು ಎಂಬ ತಪ್ಪುಕಲ್ಪನೆ ನಮ್ಮನ್ನು ಚುಚ್ಚಿ ನೋಯಿಸುವಾಗ ಸಮಯ ಮಿಂಚಿಹೋಗಿರುತ್ತದೆ. ಈ ಸಮಯದಲ್ಲಿ ದೇಹವು ಮಗುವನ್ನು ಹೆರಲು ಕೂಡ ಪೂರಕವಾಗಿ ಅಭಿವೃದ್ಧಿಹೊಂದಿರುವುದಿಲ್ಲ. ಗರ್ಭಪಾತ ಇಲ್ಲದಿದ್ದರೆ ಜೀವಕ್ಕೆ ಅಪಾಯವುಂಟಾಗುವ ಸಂಭವವೇ ಹೆಚ್ಚಾಗಿರುತ್ತದೆ. ಆದ್ದರಿಂದ ಈ ನಿಟ್ಟಿನಲ್ಲಿ ಹೆಚ್ಚು ಕಡಿಮೆ ಹೆಣ್ಣುಮಕ್ಕಳೇ ಹೆಚ್ಚಿನ ಜವಬ್ದಾರಿಯನ್ನು ತೆಗೆದುಕೊಳ್ಳಬೇಕು. ನೀವು ಕಾಲೇಜಿಗೆ ಹೋಗುವವರು ಎಂದಾದಲ್ಲಿ ಮೊದಲಿಗೆ ನಿಮ್ಮ ಭವಿಷ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ. ನಿಮ್ಮ ಕಾಲ ಮೇಲೆ ನಿಂತುಕೊಳ್ಳಿ. ಶಿಕ್ಷಣವನ್ನು ಪೂರ್ತಿಗೊಳಿಸಿ ಮತ್ತು ಉತ್ತಮ ಉದ್ಯೋಗವನ್ನು ಹೊಂದಿ ಭವಿಷ್ಯದಲ್ಲಿ ಸೆಟಲ್ ಆಗಿ. ಈ ವಯಸ್ಸಿನಲ್ಲಿ ಕಾಡುವ ಪ್ರೀತಿ ಪ್ರೇಮ ನಿಜವಾಗಿರುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಿ ಇದು ಬರಿಯ ಆಕರ್ಷಣೆಯಾಗಿರುತ್ತದೆ. ನಿಮ್ಮ ಪ್ರೀತಿ ನಿಜವೇ ಆಗಿದ್ದರೆ ಅದು ಸದಾ ಕಾಲ ನಿಮಗೆ ಪ್ರೋತ್ಸಾಹವನ್ನು ನೀಡುತ್ತದೆ ಮತ್ತು ಕಾಮದ ವಾಂಚೆಯನ್ನು ಒಳಗೊಂಡಿರುವುದಿಲ್ಲ ಎಂಬುದನ್ನು ಮನಗಾಣಿ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.