ನಿಮ್ಮ ಮಗುವಿಗೆ ಉಳಿತಾಯ ಕಲಿಸಿ..!

Video Description

ಮಗುವಿಗೆ ಉಳಿತಾಯದ ಪಾಠ ಮನೆಯಲ್ಲಿಯೇ ಕಲಿಸಿ ನಿಮ್ಮ ಮಗುವಿಗೆ ಉಳಿತಾಯ ಕಲಿಸಿ..! ಎಲ್ಲವನ್ನೂ ಕೇಳಿದ ತಕ್ಷಣ ಕೊಡಿಸುವ, ಮಕ್ಕಳ ಪ್ರತಿ ಬೇಡಿಕೆಗೂ 'ಯಸ್' ಎನ್ನುವುದು ತಪ್ಪಿನ ಲಿಸ್ಟಿನಲ್ಲಿದೆ. ಮಕ್ಕಳಿಗೆ ತಾವು ಬೇಡಿಕೆ ಇಟ್ಟ ವಸ್ತುವಿನ ಮೌಲ್ಯದ ಬಗ್ಗೆ ತಿಳಿ ಹೇಳಬೇಕು. ಅದು ಬೇಕೇ? ಅದರ ಅವಶ್ಯಕತೆ ಇದೆಯೇ? ಎನ್ನುವುದರ ಬಗ್ಗೆ ಒಂದು ಸಣ್ಣ ಚರ್ಚೆಯಾಗಬೇಕು. ಸಾಧ್ಯವಾದರೆ ಅದರ ಕೊಳ್ಳುವಿಕೆಯನ್ನ ಮುಂದೂಡಬೇಕು. ಕೇಳಿದ್ದೆಲ್ಲ ಅನಾಯಾಸವಾಗಿ ಸಿಕ್ಕರೆ ಮುಂಬರುವ ದಿನಗಳಲ್ಲಿ ಮಕ್ಕಳಲ್ಲಿ ಯಾವುದರ ಬಗ್ಗೆಯೂ ಆಸಕ್ತಿ ಉಳಿಯುವುದಿಲ್ಲ. ಕಾಯುವಿಕೆಯನ್ನು ಕಲಿಸಬೇಕು. ಮುಂದೆ ಅವರು ಬೆಳೆದು ದೊಡ್ಡವರಾದಾಗ ಅವರು ಬಯಸಿದ್ದೆಲ್ಲ ತಕ್ಷಣ ಸಿಗದೇ ಹೋದರೆ ಅವರು ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. ಮಕ್ಕಳಿಗೆ ಪಾಕೆಟ್ ಮನಿ ಕೂಡುವುದು ಕೂಡ ಬಹಳ ಮನೆಯಲ್ಲಿ ಸಾಮಾನ್ಯ. ಇನ್ನು ಅಸಂಖ್ಯಾತ ಮನೆಯಲ್ಲಿ ಪಾಕೆಟ್ ಮನಿ ಎನ್ನುವ ಕಾನ್ಸೆಪ್ಟ್ ಇಲ್ಲದೆ ಇರಬಹದು. ಆದರೆ ಮಕ್ಕಳು ಕೇಳಿದಾಗ ಹಣ ಕೊಡುವ ಪರಿಪಾಠವಂತೂ ಇದ್ದೇ ಇದೆ. ಹೀಗೆ ಹಣ ಕೊಡುವಾಗ ಏಕೆ? ಎಷ್ಟು? ಎಂದು ಕೇಳುವುದು ಸಾಮಾನ್ಯ. ಆದರೆ ನಂತರ ಕೊಟ್ಟ ದುಡ್ಡಿನಲ್ಲಿ ಎಷ್ಟು ಉಳಿಯಿತು ಎಂದು ಕೇಳುವ ಪರಿಪಾಠ ಮಾತ್ರ ನಮ್ಮಲ್ಲಿಲ್ಲ. ಅರ್ಥ ಬಹಳ ಸರಳ. ಕೊಟ್ಟ ದುಡ್ಡಿಗೆ ಮಕ್ಕಳ ಬಳಿ ಲೆಕ್ಕ ಕೇಳಿ. ಇದು ಸಾಮಾನ್ಯವಾಗಿ ಯಾರೂ ಮಾಡುವುದಿಲ್ಲ. ಮಕ್ಕಳಿಗೆ ತಾವು ಪಡೆದ ದುಡ್ಡಿಗೆ ಅಕೌಂಟೇಬಲ್ ಮಾಡಿ. ಖರ್ಚು ಮಾಡಿದ ಹಣಕ್ಕೆ ಲೆಕ್ಕ ಒಪ್ಪಿಸುವ ಅಭ್ಯಾಸ ಬೆಳಸಿ. ಇದು ಮುಂದೆ ಅವರ ಜೀವನದಲ್ಲಿ ಹಣಕಾಸು ಶಿಸ್ತಿಗೆ ದಾರಿಯಾಗುತ್ತದೆ. ಜೊತೆಗೆ ಸುಮ್ಮನೆ ಕೇಳಿದಾಗ ಹಣ ಕೊಡುವುದಕ್ಕಿಂತ ಯಾವುದಾದರೂ ಮನೆ ಕೆಲಸವನ್ನ ಹೇಳಿ ಇದನ್ನ ಮಾಡಿ ಮುಗಿಸಿದರೆ ಇಷ್ಟು ಹಣ ಕೊಡುವುದಾಗಿ ಹೇಳಬೇಕು. ಹತ್ತು ಶರ್ಟ್ ಮತ್ತು ಪ್ಯಾಂಟು ಇಸ್ತ್ರಿ ಮಾಡಿದರೆ ನೂರು ರೂಪಾಯಿ ಎನ್ನಿ. ಸುಮ್ಮನೆ ಪಿಜ್ಜಾ ತಿನ್ನಲು ಐನೂರು ಖರ್ಚು ಮಾಡಿದ ಮಕ್ಕಳಿಗೆ ನೂರು ರೂಪಾಯಿ ಬೆಲೆ ತಿಳಿಯುತ್ತದೆ. ಮಕ್ಕಳಿದ್ದಾಗ ಇದನ್ನ ಹೇಳಿ ಕೊಡಲು ಶುರು ಮಾಡಬೇಕು. ಹಣ ಗಳಿಸುವುದು ಎಷ್ಟು ಕಷ್ಟ ಆದರೆ ಅದನ್ನ ಖರ್ಚು ಮಾಡುವುದು ಎಷ್ಟು ಸುಲಭ ಎನ್ನುವುದನ್ನ ತಿಳಿಸಿ ಹೇಳಬೇಕು. ಮುಂದುವರೆದ ದೇಶಗಳಲ್ಲಿ ಆಗಲೇ ಸರ್ಟಿಫೈಡ್ ಸೈಕಾಲಜಿಸ್ಟ್ ಅಂಡ್ ಫೈನಾನ್ಸಿಯಲ್ ಥೆರಪಿಸ್ಟ್ ಎನ್ನುವ ಹೊಸ ಆರ್ಥಿಕ ತಜ್ಞರ ಪಡೆ ಮುಂದಿನ ಪೀಳಿಗೆಗೆ ಇದರ ಬಗ್ಗೆ ಜ್ಞಾನ ನೀಡಲು ಸಜ್ಜಾಗಿದೆ. ಎಲ್ಲಕ್ಕೂ ತಜ್ಞರನ್ನೇ ಅವಲಂಬಿಸಬೇಕಂದಲ್ಲ. ಸರಳವಾಗಿ ನಮ್ಮ ಆದಾಯ ಇಷ್ಟು ವ್ಯಯ ಇಷ್ಟು, ಇಷ್ಟು ಉಳಿಕೆ ಮುಂದಿನ ಜೀವನಕ್ಕೆ ಉಳಿತಾಯ ಮಾಡಲೇಬೇಕು ಎನ್ನುವ ಪಾಠವನ್ನ ಮಕ್ಕಳಿಗೆ ತಿಂಗಳಿಗೊಮ್ಮೆ ಮಾಡಿದರೂ ಸಾಕು. ಅವರಿಗೆ ಮುಂದಿನ ದಿನಗಳಲ್ಲಿ ಯಾವ ಸರ್ಟಿಫೈಡ್ ಸೈಕಾಲಜಿಸ್ಟ್ ಅಂಡ್ ಫೈನಾನ್ಸಿಯಲ್ ಥೆರಪಿಸ್ಟ್ ಅವಶ್ಯಕತೆ ಬರುವುದಿಲ್ಲ. ಎಲ್ಲವನ್ನೂ ಪ್ರೀತಿ -ಭಾವನೆಯಲ್ಲಿ ನೋಡುವ ಭಾರತೀಯ ಪೋಷಕರು ಹೊಸ ದಾರಿಗೆ, ಹೊಸ ಸವಾಲಿಗೆ ಸಜ್ಜಾಗಬೇಕಿದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.