ಹುಣಸೆ ಕಾಯಿ - ನೀವರಿಯದ ಸಂಗತಿ..!

Video Description

ಹುಣಸೆ ಕಾಯಿ - ನೀವರಿಯದ ಸಂಗತಿ..! ಹುಣಸೆಹಣ್ಣು ಅಥವಾ ಹುಣಸೆರಸ ತಿಂತಿದ್ದವರ ಪಕ್ಕ ಕುಳಿತರೆ ಸಾಕು ನಮ್ಮ ಬಾಯಲ್ಲಿ ನೀರ್ ಬರುತ್ತೆ. ಆದರೆ ಈ ಹುಣಸೆಹುಳಿ ದೇಹಕ್ಕೆ ಸಿಹಿ ಅಂತ ಹೇಳಬಹುದು. ಹುಣಸೆಕಾಯಿ ತಿಂದರೆ ನಮ್ಮ ದೇಹಕ್ಕೆ ಬೇಕಾಗಿರುವ ಆರೋಗ್ಯಕಾರಿ ಅಂಶಗಳೇನು ಅಂತ ನಿಮಗೊತ್ತಾ..? ಇಲ್ಲಿದೆ ಕೇಳಿ ಹುಣಸೆಹುಳಿ ಇದ್ರೆ ಅಡುಗೆ ರುಚಿ ಮತ್ತಷ್ಟು ಜಾಸ್ತಿ ಆಗುತ್ತೆ, ಇನ್ನು ಹುಣಸೇಕಾಯಿಯಲ್ಲಿ ಟಾರ್ಟಾರಿಕ್ ಆಮ್ಲ, ವಿಟಮಿನ್, ಆಂಟಿಆಕ್ಸಿಡೆಂಟ್ ಮತ್ತು ಖನಿಜಗಳು ಹುಣಸೆಯ ಹುಳಿಯನ್ನ ಹೆಚ್ಚಿಸುತ್ತೆ. ಮನುಷ್ಯನ ಚರ್ಮದ ಮೇಲಿರುವ ಜೀವಕೋಶಗಳನ್ನು ನಿವಾರಿಸಲು, ನೆರಿಗೆಗಳನ್ನು ತಡೆಯುತ್ತೆ. ಕೂದಲು ಉದುರುವ ಸಮಸ್ಯೆಯನ್ನು ಕೂಡ ನಿವಾರಿಸುತ್ತೆ. ಹುಣಸೆ ಕಾಯಿಯ ರಸವನ್ನು ಸೌಂದರ್ಯವರ್ಧಕವಾಗಿ ಯೂಸ್ ಮಾಡಬಹುದು. ಹೇಗೆ ಅಂತ ನೋಡೋಣ ತ್ವಚೆಯನ್ನು ಬೆಳ್ಳಗಾಗಿಸಬೇಕು ಅಂದ್ರೆ ಹುಣಸೆ ಕಾಯನ್ನು 15 ನಿಮಿಷ ಬಿಸಿನೀರಿನಲ್ಲಿ ನೆನೆಸಿಡಿ ನಂತರ ನೆನೆಸಿಟ್ಟ ಕಾಯಿಯ ರಸವನ್ನು ತೆಗೆದು ಚಿಟಿಕೆ ಅರಿಶಿನವನ್ನು ಸೇರಿಸಿ ಮಿಕ್ಸ್ ಮಾಡಿ ಇದನ್ನು ಫೇಸ್ ಪ್ಯಾಕ್ ಹದಕ್ಕೆ ಕಲಸಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ, ಇದರಿಂದ ನಿಮ್ಮ ಮುಖದ ಮೇಲಿರುವ ಕಪ್ಪು ಕಲೆಗಳು ದೂರವಾಗಿ ತ್ವಚೆ ಬೆಳ್ಳಗಾಗುತ್ತದೆ. ಹಾಗೆ ಸ್ಕ್ರಬರ್ ನಂತೆ ಹುಣಸೆಹುಳಿ ಯೂಸ್ ಮಾಡಬಹುದು. ಹುಣಸೆಕಾಯಿ ರಸಕ್ಕೆ ಸ್ವಲ್ಪ ಮೊಸರು, ಚಿಟಿಕಿ ಕಲ್ಲುಪ್ಪು, ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ನಿಮ್ಮ ಮುಖದ ಮೇಲೆ ವೃತ್ತಾಕಾರಕ್ಕೆ ಹತ್ತು ನಿಮಿಷ ಮಸಾಜ್ ಮಾಡಬೇಕು ನಂತರ ಬೆಚ್ಚಗಿನ ನೀರಿನಿಂದ ಮುಖ ತೊಳೆದರೆ ಮೊಡವೆ ಮಾಯವಾಗುತ್ತದೆ ಕೇವಲ ತ್ವಚೆ ಅಷ್ಟೇ ಅಲ್ಲ ಕೂದಲಿನ ಆರೋಗ್ಯಕ್ಕೆ ಹುಣಸೆ ಹುಳಿಯ ಪ್ಯಾಕ್ ಉತ್ತಮ. ಹುಣಸೆಹಣ್ಣು ಅಥವಾ ಹುಣಸೆ ಕಾಯಿ ರಸವನ್ನು ಕೂದಲಿನ ಬುಡಕ್ಕೆ ಹಚ್ಚಿ ನಯವಾಗಿ ಮಸಾಜ್ ಮಾಡಿದರೆ ಕೂದಲಿನ ಆರೋಗ್ಯ ಹೆಚ್ಚಾಗುತ್ತದೆ . ಇನ್ನು ಮೆಹಂದಿಯ ಬಣ್ಣವನ್ನ ಹೆಚ್ಚಿಸುವುದಕ್ಕೂ ಕೂಡ ಹುಣಸೆ ಹುಳಿಯನ್ನ ಬಳಸಿಕೊಳ್ಳಬಹುದು. ಒಟ್ಟಾರೆ ಹುಣಸೆಯನ್ನು ಅಡುಗೆಯ ರುಚಿಗಷ್ಟೇ ಅಲ್ಲ ಆರೋಗ್ಯ ಅಥವಾ ಸೌಂದರ್ಯವರ್ಧಕವಾಗಿ ಯೂಸ್ ಮಾಡಬಹುದು..

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.