ಹೆರಿಗೆ ನೋವಿನ ಬಗ್ಗೆ ಅರಿವಿರಲಿ..!

Video Description

ಹೆರಿಗೆ ನೋವು ಅರಿಯುವುದು ಹೇಗೆ? ಹೆರಿಗೆ ನೋವಿನ ಬಗ್ಗೆ ಅರಿವಿರಲಿ..! ನಿಮ್ಮ ಗರ್ಭಾವಸ್ಥೆಯಲ್ಲಿ, ನಿಮ್ಮ ಮಗುವು ಆಮ್ನಿಯೋಟಿಕ್ ಚೀಲ ಎಂದು ಕರೆಯಲ್ಪಡುವ ದ್ರವ ತುಂಬಿದ ಚೀಲದಿಂದ ಅವರಿಸಲ್ಪಟ್ಟಿರುತ್ತದೆ. ನಿಮ್ಮ ಪ್ರಸವದ ಪ್ರಾರಂಭದಲ್ಲಿ, ಕುಗ್ಗುವಿಕೆಗಳ ಜೊತೆಗೆ, ನಿಮ್ಮ ಆಮ್ನಿಯೋಟಿಕ್ ಚೀಲದ ಪೊರೆಯು ಮುರಿಯಲ್ಪಡುತ್ತದೆ. ಇದರಿಂದ ನಿಮ್ಮ ದೇಹದಿಂದ ಬಣ್ಣವಿಲ್ಲದ ದ್ರವವು ಹೊರಬರುತ್ತದೆ, ಇದನ್ನು ನೀರಿನ ಒಡೆತ ಎಂದು ಸಹ ಕರೆಯಲಾಗುತ್ತದೆ. ಹೆರಿಗೆ ಪ್ರತಿಯೊಬ್ಬರಲ್ಲಿಯೂ ಆತಂಕ ಮತ್ತು ದುಗುಡವನ್ನು ಹೆಚ್ಚಿಸುತ್ತದೆ. ಇಂದು ಪ್ರಸೂತಿತಜ್ಞರು ಎಲ್ಲೆಡೆ ಲಭ್ಯರಿದ್ದು ಅನುಭವಿ ದಾದಿಯರು ನಿಮ್ಮ ನೆರವಿಗೆ ಬರುವುದರಿಂದ ಹೆರಿಗೆಯ ಕುರಿತಾದ ಆತಂಕಕ್ಕೆ ಕಾರಣವಿಲ್ಲ. ಆದರೂ ಮೊದಲ ಹೆರಿಗೆಯಲ್ಲಿ ಆಗುವ ನೋವನ್ನು ಕಲ್ಪಿಸಿಕೊಂಡೇ ಹೆಚ್ಚಿನ ಯುವತಿಯರು ಹೆದರಿ ನಡುಗುತ್ತಾರೆ. ಈ ನೋವು ಯಾವಾಗ ಪ್ರಾರಂಭವಾಗುತ್ತದೆ? ಎಷ್ಟು ಹೊತ್ತು ಇರುತ್ತದೆ? ನೋವು ಎಷ್ಟು ಹೆಚ್ಚಿರುತ್ತದೆ ಎಂಬ ಪ್ರಶ್ನೆಗಳು ಪ್ರತಿ ಗರ್ಭಿಣಿಯನ್ನೂ ಕಾಡುತ್ತವೆ. ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವುದು ಪ್ರಸೂತಿತಜ್ಞರಿಗೂ ಕಷ್ಟ. ಏಕೆಂದರೆ ಪ್ರತಿಯೊಬ್ಬರ ದೇಹರಚನೆ ಕೊಂಚವಾಗಿ ಭಿನ್ನವಾಗಿದ್ದು ಹಲವು ಪರೀಕ್ಷೆಗಳ ಬಳಿಕವೇ ಒಂದು ಸ್ಥೂಲವಾದ ತೀರ್ಮಾನಕ್ಕೆ ಅವರು ಬರಲು ಸಾಧ್ಯ. ಸಾಮಾನ್ಯವಾಗಿ ಏಳನೆಯ ತಿಂಗಳಿನಿಂದಲೇ ನಿಧಾನವಾಗಿ ಹೊಟ್ಟೆ ಕಿವುಚಿದಂತಾಗುತ್ತಿದ್ದರೂ ಅದಕ್ಕೆ ಹೆಚ್ಚಿನ ತಲೆಬಿಸಿ ಮಾಡಬೇಕಾಗಿಲ್ಲ. ಏನಾದರೂ ಕೊಂಚ ಆಹಾರ ಸೇವಿಸಿದರೆ ಇದು ಕಡಿಮೆಯಾಗುತ್ತದೆ. ಆದರೆ ಎಂಟೂವರೆ ತಿಂಗಳ ಬಳಿಕ ಈ ಕಿವುಚುವಿಕೆ ಹೆಚ್ಚುತ್ತಾ ಹೋಗುತ್ತದೆ. ಒಂದು ವೇಳೆ ಇಪ್ಪತ್ತು ನಿಮಿಷಕ್ಕೂ ಹೆಚ್ಚು ಕಾಲ ಕಿವುಚುವಿಕೆ ಮುಂದುವರೆದರೆ ನಿರ್ಲಕ್ಷ್ಯ ಸಲ್ಲದು. ಕೂಡಲೇ ನಿಮ್ಮ ಆರೈಕೆಯ ಹೊಣೆ ಹೊತ್ತಿರುವವರಿಗೆ ಅಥವಾ ನಿಮ್ಮ ವೈದ್ಯರಿಗೆ ಕೂಡಲೇ ಸುದ್ದಿ ಮುಟ್ಟಿಸುವುದು ಅಗತ್ಯ. ಒಂದು ವೇಳೆ ಹೆರಿಗೆಯ ಪ್ರಾರಂಭದ ಲಕ್ಷಣವಾಗಿದ್ದರೆ ನೀರು ಕುಡಿಯುವುದರಿಂದ ಮತ್ತು ಏನನ್ನೂ ತಿನ್ನುವುದರಿಂದ ಈ ಕಿವುಚುವಿಕೆ ನಿಲ್ಲದು. ಮಗುವಿನ ಮೂತ್ರ ಮತ್ತು ವಿಷಕಾರಿ ವಸ್ತುಗಳನ್ನೂ ಗರ್ಭಾವಸ್ಥೆಯಲ್ಲಿ ತಾಯಿಯ ಮೂತ್ರದ ಮೂಲಕವೇ ಹೊರಹಾಕಲಾಗುತ್ತದೆ. ಮಗುವಿನ ಮೂತ್ರವನ್ನು ಸಂಗ್ರಹಿಸಲು omniotic sac ಎಂಬ ಚೀಲವಿದೆ. ಹನ್ನೊಂದನೇ ವಾರದಲ್ಲಿ ಈ ಚೀಲ ನಿಧಾನವಾಗಿ ತುಂಬಿಕೊಳ್ಳಲು ಪ್ರಾರಂಭವಾಗುತ್ತದೆ. ಮೊದಮೊದಲು ಈ ಪ್ರಮಾಣ ತೀರಾ ಅಲ್ಪವಾಗಿರುವುದರಿಂದ ಹೆಚ್ಚಿನ ವ್ಯತ್ಯಾಸ ಗೊತ್ತಾಗುವುದಿಲ್ಲ. ಆದರೆ ಇಪ್ಪತ್ತನೆಯ ವಾರದ ಬಳಿಕ ಮಗುವಿನ ಮೂತ್ರವೂ ಹೆಚ್ಚುವುದರಿಂದ ಪದೇ ಪದೇ ತಾಯಿಗೆ ಮೂತ್ರಕ್ಕೆ ಅವಸರವಾಗುತ್ತದೆ. ಹೆರಿಗೆ ಹತ್ತರವಾದಂತೆ ಈ ಚೀಲವನ್ನು ಬರಿದು ಮಾಡಿ ಹೆರಿಗೆ ಸುಲಭವಾಗಲು ದೇಹ ಅವಸರಿಸುತ್ತದೆ. ಹೆರಿಗೆಗೂ ಮುನ್ನ ಅನೈಚ್ಛಿಕವಾಗಿ ಮತ್ತು ಅತಿ ನಿಧಾನವಾಗಿ ಮೂತ್ರ ತೊಟ್ಟುತೊಟ್ಟಾಗಿ ಹೊರಬರಲು ಪ್ರಾರಂಭಿಸುತ್ತದೆ. ಹೆರಿಗೆ ಸಮೀಪಿಸುತ್ತಿದ್ದಂತೆ ಇದು ತಾರಕಕ್ಕೇರುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದಕ್ಕೆ "water breaking" ಎಂದು ಕರೆಯುತ್ತಾರೆ. ಈ ಸೂಚನೆ ಸಿಕ್ಕ ಕೂಡಲೇ ಮನೆಯವರು ಪ್ರಸೂತಿಗೃಹಕ್ಕೆ ಕಳುಹಿಸಲು ಏರ್ಪಾಡು ಮಾಡುವುದು ಉತ್ತಮ. ಹೆರಿಗೆಯ ದಿನ ಸಮೀಪಿಸುತ್ತಿದ್ದಂತೆಯೇ ಗರ್ಭಿಣಿಯಲ್ಲಿ ಅತಿಸಾರ ತೊಂದರೆಯೂ ಹೆಚ್ಚಾಗುತ್ತಾ ಹೋಗುತ್ತದೆ. ವಾಸ್ತವವಾಗಿ ಇದು ನಿಸರ್ಗ ನೀಡಿದ ಒಂದು ವರದಾನವಾಗಿದೆ. ಏಕೆಂದರೆ ಒಂದು ವೇಳೆ ಇತರ ಸಮಯದಲ್ಲಿ ಆಗುವಂತೆ ಮಲವಿಸರ್ಜನೆಯ ಸಮಯದಲ್ಲಿ ಹೆಚ್ಚಿನ ಒತ್ತಡ ನೀಡಬೇಕಾದರೆ ಇದು ಪ್ರತ್ಯಕ್ಷವಾಗಿ ಅವಧಿಗೂ ಮುನ್ನವೇ ಹೆರಿಗೆಗೆ ಪ್ರಚೋದಿಸಬಹುದು. ಆದ್ದರಿಂದ ಹೆರಿಗೆಯ ಸಮಯ ಹತ್ತಿರಾದಂತೆ ಪ್ರಸೂತಿತಜ್ಞರು ಹೆಚ್ಚಿನ ದ್ರವಾಹಾರಗಳನ್ನು ಸೇವಿಸಲು ಸಲಹೆ ಮಾಡುತ್ತಾರೆ. ಹೆರಿಗೆಗೂ ಮುನ್ನ ಜೀರ್ಣಾಂಗಗಳನ್ನು ಬರಿದುಗೊಳಿಸಿ ಸುಸೂತ್ರ ಹೆರಿಗೆಗೆ ಹೆಚ್ಚಿನ ಸ್ಥಳಾವಕಾಶ ಮಾಡಿಕೊಡಲು ದೇಹ ಬಲವಂತವಾಗಿ ಅತಿಸಾರಕ್ಕೆ ಸೂಚನೆ ನೀಡುತ್ತದೆ. ಹೆರಿಗೆಗೂ ಮುನ್ನ ನಾಲ್ಕಾರು ಬಾರಿ ಅತಿಸಾರವಾದರೆ ಇದು ಸಹಾ ಹೆರಿಗೆಯ ಸಮಯ ಹತ್ತಿರವಾಗಿದೆ ಎಂಬ ಸೂಚನೆಯಾಗಿದೆ. ವೈದ್ಯಕೀಯ ಭಾಷೆಯಲ್ಲಿ ಇದಕ್ಕೆ prostaglandins release ಎಂದು ಕರೆಯುತ್ತಾರೆ. ಜೊತೆಗೇ ಮೂಳೆಗಳ ಸಂದುಗಳೂ ಸೂಜಿ ಚುಚ್ಚಿದಂತೆ ನೋವು ನೀಡುತ್ತವೆ. ಈ ನೋವನ್ನು ತಡೆಯಲು ನಿಧಾನವಾಗಿ ನಡೆಯುತ್ತಿರುವುದು ಮತ್ತು ನಿಂತ ಭಂಗಿಯಲ್ಲಿ ಮುಂದೆ ಬಾಗುವುದು ಉತ್ತಮ. ಯಾವುದೇ ಕಾರಣಕ್ಕೂ ಹೊಟ್ಟೆ ಕೆಳಗಿರುವಂತೆ ಮಲಗಕೂಡದು. ಕೆಳಬರುತ್ತಿರುವ ಮಗುವಿನ ತಲೆ ಬೆನ್ನುಹುರಿಗೆ ಕೊಂಚ ಒತ್ತಡ ನೀಡುವುದು ಈ ನೋವನ್ನು ಹೆಚ್ಚಿಸುತ್ತದೆ. ಈ ಸೂಚನೆಯನ್ನು ಅಲಕ್ಷಿಸದೇ ಕೂಡಲೇ ವೈದ್ಯರ ಬಳಿ ಕೊಂಡೊಯ್ಯಬೇಕು.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.