ಈಜಲು ಕಲಿಯಿರಿ..!

Video Description

ಈಜುವುದು ದೈಹಿಕ ಆರೋಗ್ಯವೂ ಹೌದು ರಕ್ಷಣಾ ಕಲೆಯೂ ಹೌದು ಈಜಲು ಕಲಿಯಿರಿ..! ಈಜು (ಸ್ವಿಮ್ಮಿಂಗ್) ಒಂದು ನಮ್ಮ ಶರೀರಕ್ಕೆ ಅಧಿಕ ಪ್ರಮಾಣದಲ್ಲಿ ವ್ಯಾಯಮನ್ನು ಒದಗಿಸುವ ಕ್ರೀಡೆಯಾಗಿದೆ. ಪ್ರಣಾಯಾಮದಂತೆ ಉಸಿರಾಟದ ಕ್ರಿಯೆಯುಲ್ಲು ನಮ್ಮ ಶರೀರಕ್ಕೆ ಪ್ರಾಣಾಯಾಮವನ್ನು ಒದಗಿಸುವ ಒಂದು ಆರೋಗ್ಯದಾಯಕ ಕ್ರೀಡೆಯಾಗಿದೆ. ಈಜುವಾಗ ಉಸಿರಾಟವು ಲಯ ಬದ್ಧವಾಗಿರುತ್ತದೆ.ಮತ್ತು ದೇಹದ ಎಲ್ಲಾ ಸ್ನಾಯುಗಳಿಗೂ ಕೆಲಸ ದೊರಕುತ್ತದೆ. ತಲೆಯಿಂದ ಹಿಡಿದು ಪಾದದ ತುದಿಯವರೆಗೂ ನಮ್ಮ ದೇಹದ ಪ್ರತಿಯೊಂದು ಅಂಗಾಂಗಳಿಗೂ ಕೆಲಸ,ಶ್ರಮ ಸಿಗುವಂತಹ ಏಕೈಕ ವ್ಯಾಯಾಮ ಈಜುವಿಕೆ ಎಂದರೆ ತಪ್ಪಾಗಲಾರದು. ಲಯಬದ್ಧವಾದ ಉಸಿರಾಟವನ್ನು ನಮಗೆ ಒದಗಿಸುವ ಈ ಕ್ರೀಡೆಯಿಂದ ಸಣ್ಣ ಮಕ್ಕಳ ಮಿದುಳಿನ ಬೆಳವಣಿಗೆಗೂ ಈ ಈಜು ಎಂಬ ಅತ್ಯಮೂಲ್ಯ ವಿದ್ಯೆ ಬಹಳ ಸಹಕಾರಿಯಾಗಿದೆ. ಕೇವಲ ಆರೋಗ್ಯ, ವ್ಯಾಯಮ ಎಂದಲ್ಲ ಇದೋಂದು ಪ್ರತಿಯೊಬ್ಬರು ಕಲಿತಿರಬೇಕಾದ ಜೀವರಕ್ಷಕ ವಿದ್ಯೆ. ಕೆರೆ, ಭಾವಿ, ಹೊಳೆ ಎಂಬ ನೀರಿನಿಂದ ಸಂಭವಿಸಬಹುದಾದ ಅಪಾಯಗಳ ಬಗ್ಗೆ ಕೆಲವು ಮಕ್ಕಳಿಗೆ ಅರಿವು ಇರುವುದಿಲ್ಲ ಮನೆಯಲ್ಲಿ ಮಕ್ಕಳು ಎಲ್ಲೊಗುತ್ತಾರೆ ಏನುಮಾಡುತ್ತಾರೆ ಎಂಬುದನ್ನು ವಿಚಾರಿಸುವುದಿಲ್ಲ. ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ತಲ್ಲೀನರಾಗಿರುತ್ತಾರೆ ಹಾಗೆ ಮುಂದಾಲೋಚನೆ ಮಾಡದೆ ಕೆರೆ ,ಹೊಳೆಗಳಿಗೆ ಇಳಿದ ಮಕ್ಕಳು ನೀರಲ್ಲಿ ಮುಳುಗಿ ಸಾವನ್ನಪ್ಪುತ್ತಿರುವುದನ್ನು ನಾವು ಪತ್ರಿಕೆಗಳಲ್ಲಿ ಓದಿತ್ತಿರುತ್ತೇವೆ. ಆದ್ದರಿಂದ ಈಜು ಕಲಿಯುವುದು ಸುರಕ್ಷತೆಯ ನಿಟ್ಟಿನಲ್ಲಿ ಕೂಡ ಮಹತ್ವಪೂರ್ಣವಾದುದಾಗಿದೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸುವಲ್ಲಿ ಈಜು ಸಹಕಾರಿಯಾಗಿದೆ. ತಾಜಾತನ ಹುರುಪನ್ನು ತುಂಬುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ದೇಹದ ದುರ್ಗಂಧವನ್ನು ಕಡಿಮೆ ಮಾಡುತ್ತದೆ ಅಂತೆಯೇ ಸ್ನಾಯುಗಳನ್ನು ಗಟ್ಟಿಗೊಳಿಸಿ ಮೂಳೆಗಳ ಸಾಂದ್ರತೆ ಹೆಚ್ಚಿಸುತ್ತದೆ. ಮಹಿಳೆಯರಲ್ಲಿ ಬರುವ ಟೈಪ್ 2 ಡಯಾಬಿಟೀಸ್ ಅನ್ನು ಈಜು ತಗ್ಗಿಸುತ್ತದೆ. ದೇಹದಲ್ಲಿ ರಕ್ತಸಂಚಲನವನ್ನು ಚುರುಕುಗೊಳಿಸುತ್ತದೆ. ಈಜುವುದು ದೈಹಿಕಮಾನಸಿಕ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ರೋಗಿಗಳಿಗೆ ಉತ್ತಮ ವ್ಯಾಯಾಮ ಕೂಡ ಹೌದು. ಈಜುವುದು ಶ್ವಾಸಕೋಶಕ್ಕೆ ವ್ಯಾಯಾಮವನ್ನು ನೀಡುವುದರಿಂದ ಸಂಗೀತಗಾರರಿಗೂ ಸಹಾಯ ಮಾಡುತ್ತದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.