ಕಬ್ಬಿನ ಫೇಸ್ ಪ್ಯಾಕ್ ನಿಂದ ಮೊಡವೆ ಓಡಿಸಿ..!

Video Description

ಮುಖದ ಅಂದ ಹೆಚ್ಚಿಸುವ ಕಬ್ಬಿನ ಫೇಸ್‌ ಪ್ಯಾಕ್ ಕಬ್ಬಿನ ಫೇಸ್ ಪ್ಯಾಕ್ ನಿಂದ ಮೊಡವೆ ಓಡಿಸಿ..! ಸುಡು ಬಿಸಿಲಿಗೆ ಒಂದು ಲೋಟ ಕಬ್ಬಿನ ಹಾಲು ಕುಡಿದರೆ ದೇಹ ತಂಪಾಗುವುದು ಮಾತ್ರವಲ್ಲದೆ, ಆಯಾಸವೆಲ್ಲವೂ ನೀಗಿದಂತೆ ಆಗುವುದು. ತಂಪು ಪಾನೀಯಗಳನ್ನು ಕುಡಿಯುವ ಬದಲಿಗೆ ಕಬ್ಬಿನ ಹಾಲನ್ನು ಕುಡಿದರೆ ಅದರಿಂದ ದೇಹಕ್ಕೆ ಹಲವಾರು ರೀತಿಯ ಲಾಭಗಳು ಇದೆ. ಕಬ್ಬಿನ ಹಾಲು ಅಥವಾ ಕಬ್ಬಿನ ಜ್ಯೂಸ್ ತುಂಬಾ ರುಚಿಕರವಾಗಿರುವ ಕಾರಣದಿಂದ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಕಬ್ಬಿನ ಹಾಲಿಗೆ ಸ್ವಲ್ಪ ಶುಂಠಿ ಹಾಲು ಲಿಂಬೆರಸವನ್ನು ಹಾಕಿ ಕುಡಿದರೆ ಅದರ ರುಚಿಯ ಬಗ್ಗೆ ಹೇಳುವುದೇ ಬೇಡ. ಕಬ್ಬಿನ ಹಾಲಿನಿಂದ ಆರೋಗ್ಯ ಲಾಭಗಳು ಇವೆ ಎಂದು ಪ್ರತಿಯೊಬ್ಬರಿಗೂ ತಿಳಿದಿದೆ. ಕಬ್ಬಿನ ಹಾಲು ದೇಹದ ಸೌಂದರ್ಯಕ್ಕೂ ಒಳ್ಳೆಯದು ಎಂದು ಎಷ್ಟು ಜನರಿಗೆ ಗೊತ್ತು? ತ್ವಚೆಗೆ ಕಬ್ಬಿನ ಹಾಲಿನ ಪ್ಯಾಕ್ ಮಾಡುವುದು ತುಂಬಾ ಸುಲಭ ಹಾಗೂ ಇದು ಹೆಚ್ಚು ವೆಚ್ಚದಾಯಕವೂ ಅಲ್ಲ. ಒಣ ಚರ್ಮಕ್ಕೆ ಇದು ಅತೀ ಉತ್ತಮವಾಗಿರುವಂತದ್ದಾಗಿದೆ. ಇದು ತ್ವಚೆಗೆ ತೇವಾಂಶವನ್ನು ನೀಡಿ ನಯವಾಗಿಡುತ್ತದೆ. ಒಣ ಚರ್ಮದ ಸಮಸ್ಯೆಯಿದ್ದರೆ ವಾರದಲ್ಲಿ ಒಂದು ಸಲ ಈ ಪ್ಯಾಕ್‌ನ್ನು ಬಳಸಿ. ಇದು ಚರ್ಮಕ್ಕೆ ಮಾಯಿಶ್ಚರೈಸ್ ನೀಡುವುದು. ಮುಖದಲ್ಲಿನ ಕಲೆಗಳನ್ನು ನಿವಾರಣೆ ಮಾಡಬೇಕೆಂದರೆ ಇದು ಅತೀ ಉತ್ತಮವಾದ ಪ್ಯಾಕ್ ಆಗಿದೆ. ಬಲಿತ ಪಪ್ಪಾಯಿಯ ತುಂಡುಗಳನ್ನು ತೆಗೆದು ಅದನ್ನು ಕಬ್ಬಿನ ಹಾಲಿನೊಂದಿಗೆ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ, ತದನಂತರ 15 ನಿಮಿಷ ಬಿಟ್ಟು ಮುಖ ತಣ್ಣೀರಿನಿಂದ ತೊಳೆದುಕೊಳ್ಳಿ ಇದು ಸತ್ತ ಚರ್ಮಗಳನ್ನು ತೆಗೆದು ಹಾಕಲು ಮಾಡಲ್ಪಡುವಂತಹ ಅತ್ಯುತ್ತಮ ಮನೆಯ ಸ್ಕ್ರಬ್ ಆಗಿದೆ. ಸಕ್ಕರೆಯು ಕೋಶಗಳು ಪುನರುಜ್ಜೀವನಗೊಳ್ಳಲು ನೆರವಾಗುವುದು. ಸ್ವಲ್ಪ ಮಟ್ಟಿನ ಬ್ಲೀಚಿಂಗ್ ಬೇಕಾದರೆ ಇದಕ್ಕೆ ಸ್ವಲ್ಪ ಕಿತ್ತಳೆ ರಸವನ್ನು ಹಾಕಬಹುದು. ಕಿತ್ತಳೆ ರಸದಲ್ಲಿ ವಿಟಮಿನ್ ಸಿ ಉನ್ನತ ಮಟ್ಟದಲ್ಲಿರುತ್ತದೆ. ಎಣ್ಣೆಯಂಶವನ್ನು ಹೊಂದಿರುವ ಚರ್ಮದವರಿಗೆ ಇದು ಹೇಳಿ ಮಾಡಿಸಿದ ಪ್ಯಾಕ್ ಆಗಿದೆ. ಮುಲ್ತಾನಿ ಮಿಟ್ಟಿ ಎಣ್ಣೆಯಂಶವನ್ನು ಹೀರಿಕೊಳ್ಳುತ್ತದೆ ಮತ್ತು ಕಬ್ಬಿನ ಹಾಲು ಚರ್ಮವು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುವುದು. ಸ್ವಲ್ಪ ಕಬ್ಬಿನ ಹಾಲು ತೆಗೆದುಕೊಂಡು ಅದಕ್ಕೆ ಕಡಲೆಹಿಟ್ಟು ಸೇರಿಸಿ ಇವೆರಡನ್ನು ಸರಿಯಾಗಿ ಮಿಕ್ಸ್ ಮಾಡಿ. * ಮಿಶ್ರಣವು ಹದವಾದ ಪೇಸ್ಟ್ ರೀತಿ ಇರಲಿ. * ಪೇಸ್ಟ್ ತೀರಾ ಗಟ್ಟಿ ಅಥವಾ ತೀರಾ ತೆಳುವಾಗಿರದಂತೆ ನೋಡಿಕೊಳ್ಳಿ. * ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಡಿ. ನಂತರ ಸಾದಾ ನೀರಿನಿಂದ ತೊಳೆದುಕೊಳ್ಳಿ. ಕೊನೆ ಮಾತು ಮೇಲೆ ತಿಳಿಸಲಾದ ಫೇಸ್ ಪ್ಯಾಕ್‌ಗಳು ಪುರುಷರ ಮುಖದ ಕಾಂತಿಯನ್ನು ಹೆಚ್ಚಿಸಲು ಸಹಕಾರಿಯಾಗಿವೆ. ವಾರಕ್ಕೆ ಎರಡರಿಂದ ಮೂರು ಬಾರಿ ಇವನ್ನು ಬಳಸಿ ಸುಂದರವಾದ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಬಹುದು. ಆದರೂ ಯಾವುದೇ ಫೇಸ್ ಪ್ಯಾಕ್ ಅನ್ನು ಮುಖದ ಮೇಲೆ ಬಳಸುವ ಮುಂಚೆ ಕೈ ಚರ್ಮದ ಮೇಲೆ ಬಳಸಿ ಅಲರ್ಜಿ ಉಂಟಾಗುವುದಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.