ಇದು ಸ್ಕೇಟ್ ಬೋರ್ಡರ್ ಒಬ್ಬರ ಯಶೋಗಾಥೆ..!

Video Description

ಕೈತುಂಬಾ ಸಂಬಳ ಬರುತ್ತಿದ್ದ ಉದ್ಯೋಗ ತ್ಯಜಿಸಿದ ಸ್ಕೇಟರ್ ಕಥೆ ಇದು ಸ್ಕೇಟ್ ಬೋರ್ಡರ್ ಒಬ್ಬರ ಯಶೋಗಾಥೆ..! ಗೌತಮ್ ಡಿ ಕಾಮತ್ ಸ್ಕೇಟ್‌ಬೋರ್ಡಿಂಗ್ ಎಂಬ ಸಂಸ್ಥೆಯನ್ನು ತಮ್ಮ ಸ್ನೇಹಿತರ ಜತೆ ಸೇರಿ 2012 ರಲ್ಲಿ ಪ್ರಾರಂಭಿಸಿದರು. ಮೊದಲಿಗೆ ಇವರು ಮೊಬೈಲ್ ರಿಟೇಲ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಸ್ಕೇಟ್‌ಬೋರ್ಡಿಂಗ್ ವಾರಾಂತ್ಯದ ಹವ್ಯಾಸವಾಗಿತ್ತು. ಆದರೆ ಕೂಡಲೇ ಇದು ಅವರ ಖಯಾಲಿಯಾಯಿತು. ಅವರು ಬ್ರೆಜಿಲ್ನ ಸ್ಕೇಟ್ಬೋರ್ಡರ್ ಸ್ಯಾಂಡ್ರೊ ಡಯಾಜ್ನಿಂದ ಸ್ಫೂರ್ತಿ ಪಡೆದು ಸಂಸ್ಥೆಯನ್ನು ಆರಂಭಿಸಿದರು. "ಅವರ ಸ್ಕೇಟಿಂಗ್ ನನ್ನ ಮನಸ್ಸನ್ನು ಆಕರ್ಷಿಸಿತು, ನಾನು ಅವರಂತೆ ಸ್ಕೇಟ್ ಮಾಡಲು ಬಯಸಿದ್ದೆ ಮತ್ತು ನಾನು ಮಾಡಲು ಬಯಸಿದ್ದೆ ಅಷ್ಟೆ." ಅವರು ತಮ್ಮ ಉತ್ಸಾಹವನ್ನು ಕಂಡುಕೊಂಡರು ಮತ್ತು ತನ್ನ ಕೆಲಸವನ್ನು ತ್ಯಜಿಸಲು ನಿರ್ಧರಿಸಿದರು. ಆದರೆ ಇದರ ಬಗ್ಗೆ ಅವರು ತನ್ನ ಹೆತ್ತವರಿಗೆ ತಿಳಿಸಬೇಕಾಗಿತ್ತು. ನಿನಗೇನು ಹುಚ್ಚೆ ನಿನ್ನ ಭವಿಷ್ಯದ ದಾರಿಯೇನು ಮೊದಲಾದ ಪ್ರಶ್ನೆಯನ್ನು ಅವರ ಕುಟುಂಬದವರು ಗೌತಮ್‌ನಲ್ಲಿ ಕೇಳಿದರು. ಆದರೆ ಸವಾಲುಗಳು ಅವರನ್ನು ನಿಲ್ಲಿಸಲಿಲ್ಲ. ಇದೀಗ ಗೌತಮ್ ಜುಗ್ಗಾಡ್ ಸ್ಕೇಟ್ ಕಂಪನಿಯ ಮುಖ್ಯಸ್ಥರಾಗಿದ್ದಾರೆ. ಇದು ಭಾರತದಲ್ಲಿಯೇ ಅತಿ ದೊಡ್ಡದಾಗಿದೆ.ಅವರು 2016 ರಲ್ಲಿ ಭಾರತವನ್ನು ಪ್ರತಿನಿಧಿಸಿದರು. ಭಾರತದಲ್ಲಿ ಮಾತ್ರವಲ್ಲದೆ ನೇಪಾಳ, ಸೌತ್ ಕೊರಿಯಾ ಮತ್ತು ಮಾಲ್ಡೀವ್ಸ್‌ನಲ್ಲಿ ಕೂಡ ಸ್ಕೇಟ್‌ಬೋರ್ಡಿಂಗ್ ಸಮುದಾಯ ಪ್ರೀತಿಯನ್ನು ಗಳಿಸುವುದು ಅವರ ಅತಿದೊಡ್ಡ ಸಾಧನೆಯಾಗಿದೆ. ನಿಮಗೇ ಏನಾದರೂ ಸಾಧಿಸಬೇಕು ಎಂಬುದು ಗುರಿಯಾಗಿದ್ದರೆ ಅದನ್ನು ಸಾಧಿಸಿ. ನೀವು ನೆನೆದಂತೆ ಎಲ್ಲವೂ ನಡೆಯುತ್ತದೆ ಎಂಬುದು ಅವರ ಮಾತಾಗಿದೆ. ಇಂದು ಗೌತಮ್ ಜುಗ್ಗಾಡ್ ಸ್ಕೇಟ್ ಕಂಪನಿಯ ಮುಖ್ಯಸ್ಥರಾಗಿದ್ದಾರೆ ಇದು ಭಾರತದಲ್ಲಿಯೇ ಅತಿ ದೊಡ್ಡ ಕಂಪನಿ ಎಂದೆನಿಸಿದೆ. ಕೈ ತುಂಬಾ ಸಂಬಳ ಬರುತ್ತಿದ್ದ ಕೆಲಸಕ್ಕೆ ತಿಲಾಂಜಲಿ ಇಟ್ಟು ಗೌತಮ್ ಇಂದು ತಮ್ಮ ಕನಸಿನ ಬೆನ್ನು ಹತ್ತಿಸವಾರಿ ಮಾಡಿದ್ದಾರೆ. ನಿಜಕ್ಕೂ ಇವರ ಸಾಧನೆಗೆ ಹ್ಯಾಟ್ಸಾಫ್ ಎನ್ನಲೇಬೇಕು. ಗೌತಮ್ ರಸ್ತೆ ಬದಿಯಲ್ಲಿರುವ ಮಕ್ಕಳಿಗೆ ಕೂಡ ಸ್ಕೇಟಿಂಗ್ ಅನ್ನು ಕಲಿಸಿಕೊಡುತ್ತಿದ್ದು ದೇಶಕ್ಕೆ ಅತ್ಯುತ್ತಮ ಕೊಡುಗೆಯೊಂದನ್ನು ನೀಡಬೇಕು ಎಂಬುದು ಇವರ ಬಯಕೆಯಾಗಿದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.