ಸ್ಟ್ರಾಬೆರಿ - ಮಧುಮೇಹಿಗಳ ಸ್ನೇಹಿ..!

Video Description

ಸ್ಟ್ರಾಬೆರಿ - ಮಧುಮೇಹಿಗಳ ಸ್ನೇಹಿ..! ಸ್ಟ್ರಾಬೆರಿ ಎಲ್ಲಾ ಸಮಯದಲ್ಲಿ ಸಿಗತ್ತೆ, ಆದರೆ ಫೆಬ್ರವರಿ ಮತ್ತು ಮಾರ್ಚ್ ಸ್ಟ್ರಾಬೆರಿ ಸೀಸನ್. ಸ್ಟ್ರಾಬೆರಿ ಹಣ್ಣು ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ ಆದ್ದರಿಂದ ನಿಮಗೆ ಸ್ಟ್ರಾಬೆರಿ ಇಷ್ಟ ಇರಲಿ ಅಥವಾ ಇಲ್ಲದಿರಲಿ ನಿಮ್ಮ ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು. ಇದನ್ನು ತಿಂದರೆ ನೀವು ಪಡೆಯುವ ಲಾಭ ಮಾತ್ರ ದುಪ್ಪಟ್ಟು. ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ ಹೇರಳವಾಗಿದೆ. ಮಧುಮೇಹಿಗಳ ಸ್ನೇಹಿ ಸ್ಟ್ರಾಬೆರಿ ಹಣ್ಣು. ಯಾಕಂದ್ರೆ ಮಧುಮೇಹಿಗಳಿಗೆ ಕೆಲವೊಂದು ಹಣ್ಣುಗಳನ್ನು ತಿನ್ನುವ ಅವಕಾಶವಿರಲ್ಲ, ಆದರೆ ಸ್ಟ್ರಾಬೆರಿಯನ್ನು ಯಾವುದೇ ಭಯವಿಲ್ಲದೆ ತಿನ್ನಬಹುದು. ಇದರಲ್ಲಿರುವ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ ಮಧುಮೇಹಿಗಳ ಸಕ್ಕರೆ ಮಟ್ಟವನ್ನು ಸುಧಾರಿಸುತ್ತ, ಶಕ್ತಿಯನ್ನು ಕೂಡ ನೀಡುತ್ತೆ. ಇನ್ನು ಮನುಷ್ಯನ ದೇಹಕ್ಕೆ ಬೇಕಿರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಸಿ ಇರುವ ಸ್ಟ್ರಾಬೆರಿ ಹಣ್ಣು ಕಣ್ಣಿಗೆ ತುಂಬಾ ಒಳ್ಳೆಯದು. ಇದರಲ್ಲಿರುವ ಎಲ್ಲಜಿಕಾಸಿಲ್ ಅಂಶ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ. ಇನ್ನು ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ದೇಹಕ್ಕೆ ಒದಗಿಸುತ್ತದೆ. ಸೌಂದರ್ಯ ರಕ್ಷಣೆ ಮಾಡುವುದಕ್ಕೂ ಕೂಡ ಸ್ಟ್ರಾಬೆರಿ ಮಹತ್ವದ ಪಾತ್ರವಹಿಸುತ್ತದೆ. ಸ್ಟ್ರಾಬೆರಿ ತಿನ್ನೋದ್ರಿಂದ ಬಿಸಿಲಿಗೆ ಹೋದಾಗ ತ್ವಚೆಯ ರಕ್ಷಣೆಯನ್ನು ಮಾಡುತ್ತೆ ಪ್ರತಿನಿತ್ಯ ಸ್ಟ್ರಾಬೆರಿ ತಿನ್ನೋರಿಗೆ ಯಾವ ಅಂಟಿ ಏಜ್ನಿಂಗ್ ಕ್ರೀಮ್ನ ಅವಶ್ಯಕತೆ ಇರಲ್ಲ. ಕೆಟ್ಟ ಕೊಲೆಸ್ಟ್ರಾಲ್ ಅಧಿಕವಾಗುತ್ತಾ ಹೋದರೆ ಹೃದಯದ ಆರೋಗ್ಯ ಕಡಿಮೆಯಾಗಿ ಹೃದಯಾಘಾತ ಉಂಟಾಗುತ್ತೆ. ಸ್ಟ್ರಾಬೆರಿಯು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಶೇಖರ ವಾಗುವುದಕ್ಕೆ ಬಿಡುವುದಿಲ್ಲ. ಇದರಲ್ಲಿ ಆಂಟಿಆಕ್ಸಿಡೆಂಟ್ ಅಧಿಕವಿರೋಧಿ ಹೊಟ್ಟೆಹುರಿ, ಸಂದುಗಳಲ್ಲಿ ಉರಿಯೂತ, ಕಡಿಮೆ ಮಾಡುವುದಕ್ಕೆ ಸಹಕರಿಸುತ್ತದೆ. ನಾರಿನಂಶವಿರುವ ಆಹಾರಗಳನ್ನು ತಿಂದರೆ 2 ಡಯಾಬಿಟಿಸ್ ಬರದಂತೆ ತಡೆಯಬಹುದು. ಅದಕ್ಕಾಗಿಯೇ ಮಧುಮೇಹಿಗಳ ಸ್ನೇಹಿ ಸ್ಟ್ರಾಬೆರಿ. ಗರ್ಭಿಣಿಯರಿಗೆ ಅವಶ್ಯಕವಾದ ಫೋಲೆಟ್, ಫಾಲಿಕ್ ಆಸಿಡ್ ಮತ್ತು ವಿಟಮಿನ್ ಬಿ ಸ್ಟ್ರಾಬೆರಿಯಲ್ಲಿದೆ. ಮೈಕೈ ನೋವು ಕಾಣಿಸಿಕೊಂಡರೆ ಸ್ಟ್ರಾಬೆರಿ ತಿಂದರೆ ನೋವು ಕಡಿಮೆಯಾಗುತ್ತೆ. ಮಧ್ಯ ವಯಸ್ಸು ದಾಟಿದವರು ಸ್ಟ್ರಾಬೆರಿಯನ್ನು ತಮ್ಮ ಆಹಾರಕ್ರಮದಲ್ಲಿ ಸೇರಿಸಿದರೆ ಮೈಕೈನೋವು ಕಂಡುಬರುವುದಿಲ್ಲ..

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.