ಯಾಕೆ ವಿನಾಯಕನಿಗೆ ಇಲಿ ವಾಹನವಾಯ್ತು..?

Video Description

ಮೂಷಿಕ ವಾಹನ ಮೋದಕ ಹಸ್ತಾ,ಚಾಮರಕರ್ಣ ವಿಲಂಬಿತ….ಎಂಬ ಹಾಡಿನ ಮೂಲಕ, ವಿನಾಯಕ ಇಲಿಯನ್ನು ತನ್ನ ವಾಹನವನ್ನಾಗಿ ಹೊಂದಿದ್ದ ಎಂದು ತಿಳಿದುಬರುತ್ತದೆ. ಆದರೆ,ಆನೆ ತೂಕದ ಏಕದಂತನಿಗೆ ಇಲಿ ಹೇಗೆ ವಾಹನವಾಯ್ತು , ಇಲಿ ಅಷ್ಟು ಭಾರವನ್ನು ಹೊರುವುದಾದರೂ ಹೇಗೆ? ಇದರ ಹಿಂದಿರುವ ರಹಸ್ಯವೇನು ಎಂದು ಹುಡುಕಿದಾಗ ಒಂದು ಕತೆ ಕೇಳಿಬಂತು. ಅದು ಸತ್ಯವೋ?ಅಸತ್ಯವೋ ? ತಿಳಿಯದು. ಆದರೂ ಅದರ ಹಿಂದೆ ಒಂದು ಲಾಜಿಕ್ ಇದೆ. ಆ ಕತೆಯಲ್ಲಿ… ಹಿಂದಿನ ಕಾಲದಲ್ಲಿ ಎಲ್ಲರೂ ಬೇಸಾಯಮಾಡಿ ಜೀವನ ನಡೆಸುತ್ತಿದ್ದರು. ಬೆಳೆದ ದವಸ,ಧಾನ್ಯಗಳನ್ನು ಗೋದಾಮುಗಳಲ್ಲಿ ಸಂಗ್ರಹಿಸಿಟ್ಟು ಉಪಯೋಗಿಸುತ್ತಿದ್ದರು. ಮುಂದೆ ಬರುವ ಬೆಳೆಗಾಗಿ ಕಾದು ನೋಡುತ್ತಿದ್ದರು. ಹೀಗೆ ಸಾಗುತ್ತಿತ್ತು ನಮ್ಮ ರೈತರ ಜೀವನ. ತಾವು ಬೆಳೆದ ಬೆಳೆ ಕೈಗೆ ಬರುವ ಸಮಯದಲ್ಲಿ, ಗುಂಪಾಗಿ ಬರುವ ಇಲಿಗಳು ದವಸ ಧಾನ್ಯಗಳ ಮೇಲೆ ದಾಳಿ ನಡೆಸಿ, ತಿಂದು ತೇಗುತ್ತಿದ್ದವಂತೆ. ಕೊನೆಗೆ ಬೀಜಕ್ಕಾಗಿ ತೆಗೆದಿರಿಸಿದ್ದ ಧಾನ್ಯಗಳೂ ರೈತರಿಗೆ ದೊರೆಯದೆ, ಬರಗಾಲ ಬಂದಿತು.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.