ನಿದ್ರಾ ನಡಿಗೆ -ನಿಮಗೆ ಗೊತ್ತಾ?

Video Description

ನಿದ್ದೆಯಲ್ಲಿ ನಡೆಯುವ ಅಭ್ಯಾಸಕ್ಕೆ ಕಡಿವಾಣ ಹಾಕುವುದು ಹೇಗೆ ನಿದ್ರಾ ನಡಿಗೆ -ನಿಮಗೆ ಗೊತ್ತಾ? ನಿದ್ರೆಯಲ್ಲಿ ನಡಿಗೆ ಎಂಬುದು ಒಂದು ರೀತಿಯ ಕಾಯಿಲೆಯಾಗಿದ್ದು ಒತ್ತಡ ಟೆನ್ಶನ್ ಕಾರಣದಿಂದ ಇದು ಮನುಷ್ಯರನ್ನು ಕಾಡುತ್ತದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ. ಸ್ಲೀಪ್ ವಾಕ್ ಅಥವಾ ನಿದ್ರಾ ನಡಿಗೆಗೆ ಸೋಮ್ನಾಮ್ಬುಲಿಸಂ ಎಂದು ಕರೆಯುತ್ತಾರೆ ಇದು ಬರಿ ನಿದ್ರಾ ನಡಿಗೆ ಮಾತ್ರವಲ್ಲದೆ ಹಾಸಿಗೆಯ ಮೇಲೆ ಎದ್ದು ಕೂರುವುದು ನಿತ್ಯದ ಕೆಲಸಗಳಲ್ಲಿ ನಿದ್ರೆ ಮಾಡುವುದು ವಿಚಿತ್ರವಾಗಿ ವರ್ತಿಸುವುದು ಇದೆಲ್ಲಾ ಸೇರಿದೆ. ಆಳವಾದ ನಿದ್ರಾ ಆವರ್ತನದ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಅಸ್ವಸ್ಥತೆಯೇ ನಿದ್ರೆಯಲ್ಲಿ ನಡೆಯುವುದು. ಇದರಲ್ಲಿ ವ್ಯಕ್ತಿಗಳು ತಾವು ಎಚ್ಚರವಾಗಿದ್ದಾಗ ಕೈಗೊಳ್ಳುವ ಚಟುವಟಿಕೆಗಳನ್ನು ನಿದ್ರೆಯ ಸಂದರ್ಭದಲ್ಲಿ ನಡೆಸುತ್ತಾರೆ. ಈ ಅಸ್ವಸ್ಥತೆ ಕೆಲವು ಸೆಕೆಂಡುಗಳಿಂದ ಹಿಡಿದು ಅರ್ಧಗಂಟೆಯವರೆಗೆ ಕಾಣಿಸಿಕೊಳ್ಳಬಹುದು. ಇದು ವಯಸ್ಕರಿಗಿಂತಲೂ ಚಿಕ್ಕಮಕ್ಕಳಲ್ಲಿ ಸಾಮಾನ್ಯ. ನಿದ್ರೆಯ ಕೊರತೆ ಅಥವಾ ಒತ್ತಡದ ಪರಿಣಾಮದಿಂದ ಇದು ಉಂಟಾಗುತ್ತದೆ. ವ್ಯಕ್ತಿಗೆ ತಾನು ನಡೆಯುತ್ತಿರುವುದರ ಬಗ್ಗೆ ಅರಿವು ಇರುವುದಿಲ್ಲ. ನಿದ್ದೆಯಲ್ಲಿ ಓಡಾಡುವ ಅಭ್ಯಾಸವಿದ್ದವರು ನಿಯಮಿತವಾಗಿ ಮತ್ತು ಸರಿಯಾದ ಸಮಯಕ್ಕೆ ನಿದ್ದೆ ಮಾಡುವುದನ್ನು ರೂಢಿಸಿಕೊಳ್ಳುವುದರಿಂದ ಈ ರೀತಿಯ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಡಿ ಮಾಂಟ್ರಿಯಲ್ ವಿಶ್ವವಿದ್ಯಾಲಯದಲ್ಲಿ ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ. ಈ ರೀತಿಯ ಅಭ್ಯಾಸದಿಂದ ಮನೋಸ್ಥಿತಿಯಲ್ಲಿ ಗೊಂದಲ ಮಾಡುವುದಷ್ಟೇ ಅಲ್ಲ, ಇದರಿಂದ ತಮ್ಮ ವಾತಾವರಣವನ್ನು ತಕ್ಷಣವೇ ಗುರುತಿಸದಷ್ಟು ಮರೆವಿನ ಸಮಸ್ಯೆಯೂ ತಲೆದೋರಬಹುದು. ಈ ಕುರಿತು ಈ ಅಧ್ಯಯನವನ್ನು ನಡೆಸಿದ ಆಂಟೊನಿಯೊ ಝಾದ್ರಾ, ನಿದ್ದೆಯಲ್ಲಿ ನಡೆಯುವ ಸಮಸ್ಯೆಯಿರುವ 40 ಜನರನ್ನು ಆಗಸ್ಟ್ 2003 ರಿಂದ 2007 ರವರೆಗೆ ಡಿ ಮಾಂಟ್ರಿಯಲ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನಕ್ಕೆ ಒಳಪಡಿಸಿ ಪರಿಶೀಲನೆ ನಡೆಸಿದರು. ಅಧ್ಯಯನಕ್ಕೆ ಒಳಪಡಿಸಿದ ಈ ಜನರಲ್ಲಿ ನಿದ್ದೆ ಕೊರತೆ ಮತ್ತು ನಿದ್ದೆ ಸಮಸ್ಯೆಯೇ ನಿದ್ದೆಯಲ್ಲಿ ನಡೆಯುವ ಅಭ್ಯಾಸಕ್ಕೆ ಪ್ರಚೋದಕವಾಗಿರುವುದಾಗಿ ತಿಳಿದುಬಂದಿದೆ. ಈ ಅಭ್ಯಾಸದಿಂದ ತಪ್ಪಿಸಿಕೊಳ್ಳಬೇಕೆಂದರೆ ನಿಯಮಿತವಾಗಿ ಮಲಗುವ ಸಮಯವನ್ನು ಮತ್ತು ಸರಿಯಾದ ಸಮಯಕ್ಕೆ ನಿದ್ದೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಝಾದ್ರಾ ತಿಳಿಸಿದ್ದಾರೆ. ನಿಯಮಿತ ನಿದ್ದೆಯೊಂದಿಗೆ ಯೋಗಾಭ್ಯಾಸ, ಒಳ್ಳೆಯ ಆಹಾರ ಕ್ರಮ ಮತ್ತು ಮನೋಸ್ಥಿತಿಯ ಸದೃಢತೆ ಕೂಡ ಈ ಸಮಸ್ಯೆಯನ್ನು ಹೋಗಲಾಡಿಸುವುದರಲ್ಲಿ ಸಹಾಯ ಮಾಡುತ್ತದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.