ಹೇರ್ ಕಲರಿಂಗ್ ನ ಅಡ್ಡ ಪರಿಣಾಮಗಳೇನು..?

Video Description

ಹೇರ್ ಕಲರಿಂಗ್‌ನ ಅಡ್ಡ ಪರಿಣಾಮಗಳು ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳೇನು? ಹೇರ್ ಕಲರಿಂಗ್ ನ ಅಡ್ಡ ಪರಿಣಾಮಗಳೇನು..? ಇಂದಿನ ದಿನಗಳಲ್ಲಿ ಎಲ್ಲಾ ಯುವತಿಯರು ಮತ್ತು ಯುವಕರು ಹೇರ್ ಕಲರಿಂಗ್‌ಗೆ ಮರುಳಾಗಿದ್ದಾರೆ. ಇದೊಂದು ಹೊಸ ಫ್ಯಾಶನ್ ಟ್ರೆಂಡ್ ಎಂದೆನಿಸಿಬಿಟ್ಟಿದೆ. ಆದರೆ ಕೂದಲಿನ ನೈಸರ್ಗಿಕ ಬಣ್ಣವನ್ನು ಮರೆ ಮಾಡಿ ಕಲರಿಂಗ್ ಅನ್ನು ನೀವು ಆರಿಸಿದಲ್ಲಿ ಕೆಲವೊಂದು ಆರೋಗ್ಯ ವೈಪರೀತ್ಯಗಳು ನಿಮ್ಮ ದೇಹದಲ್ಲಿ ಉಂಟಾಗಬಹುದು. ಕಲರಿಂಗ್ ಮಾಡಲು ಬಳಸುವ ರಾಸಾಯನಿಕದಿಂದ ನೀವು ದುಷ್ಪರಿಣಾಮಗಳನ್ನು ಹೊಂದಬಹುದು. ನೀವು ಕಲರಿಂಗ್ ಮಾಡಲು ಇಚ್ಛಿಸುತ್ತಿದ್ದೀರಿ ಎಂದಾದಲ್ಲಿ ಕೆಲವೊಂದು ಮುಂಜಾಗ್ರತೆಗಳನ್ನು ಮಾಡಿಕೊಂಡು ನಂತರ ಕೂದಲಿಗೆ ಹೊಸ ಲುಕ್ ನೀಡಿ. ನೀವು ಹೇರ್ ಕಲರಿಂಗ್ ಮಾಡಿಸಿಕೊಳ್ಳುವಾಗ ಯಾವೆಲ್ಲಾ ಅಂಶಗಳಿಗೆ ಆದ್ಯತೆ ನೀಡಬೇಕು ಮತ್ತು ಯಾವುದನ್ನು ಅನುಸರಿಸಬಾರದು ಎಂಬುದನ್ನು ನಾವಿಲ್ಲಿ ಹೈಲೈಟ್ ಮಾಡುತ್ತಿದ್ದೇವೆ. ಕೂದಲನ್ನು ಬ್ಲೀಚ್‌ ಮಾಡುವಾಗ ಆ ಬ್ಲೀಚ್‌ನಿಂದ ನಿಮ್ಮ ಕೂದಲು ಹಾಗೂ ತ್ವಚೆಗೆ ಯಾವುದೇ ಹಾನಿ ಉಂಟಾಗುವುದಿಲ್ಲ ಎಂಬುವುದನ್ನು ಖಚಿತಪಡಿಸಿಕೊಳ್ಳಿ. ಕಲರ್‌ ತೆಗೆಯಲು ಅಧಿಕ ಬ್ಲೀಚ್‌ ಮಾಡುವುದರಿಂದ ಕೂದಲು ತನ್ನ ಶೈನಿ ಕಳೆದುಕೊಳ್ಳುವುದು. ಆದ್ದರಿಂದ ಕೂದಲು ಜೋಪಾನ. ಕೂದಲನ್ನು ತುಂಬಾ ಡ್ರೈಯಾಗಿಸುವ ಶ್ಯಾಂಪೂ ಬಳಸಿದರೆ ಕೂದಲು ಕಲರ್‌ ಅನ್ನು ಸರಿಯಾಗಿ ಹೀರಿಕೊಳ್ಳದೆ ಕೂದಲ ಲುಕ್‌ ಹಾಳಾಗುವುದು. ಆಲ್ಕೋಹಾಲ್‌ ಅಂಶವಿರುವ ಹೇರ್‌ಸ್ಪ್ರೇ ಕೂದಲನ್ನು ಮತ್ತಷ್ಟು ಡ್ರೈಯಾಗಿಸುತ್ತದೆ. ಅಲ್ಲದೆ ಕಲರಿಂಗ್‌ ಬೇಗನೆ ಫೇಡ್‌ ಆಗುವುದು. ಓಂಬ್ರೆ, ಬಲಾಜ್‌ ಹಾಗೂ ಸಿಂಗಲ್‌ ಕಲರ್‌ ಹೇರ್ ಕಲರಿಂಗ್‌ನಲ್ಲಿ ನಿಮಗೆ ಯಾವುದು ಆಕರ್ಷಕವಾಗಿ ಕಾಣುವುದು ಎಂದು ಬ್ಯೂಟಿ ಎಕ್ಸ್‌ಪರ್ಟ್‌ ಸಲಹೆ ಪಡೆಯಿರಿ. ಹೇರ್ ಕಲರಿಂಗ್ ಮಾಡಿಸಿಕೊಳ್ಳುವ ಮುನ್ನ ಅನುಭವಸ್ಥರಿಂದ ಕಲರಿಂಗ್ ಮಾಡಿಸಿಕೊಳ್ಳಿ. ಗುಣಮಟ್ಟದ ಹೇರ್ ಕಲರಿಂಗ್ ಉತ್ಪನ್ನಗಳನ್ನು ನೀವು ಕೂದಲಿಗೆ ಬಳಸಿಕೊಳ್ಳುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನಿಮ್ಮ ಮುಖದ ಆಕಾರ, ಬಣ್ಣ, ಕೂದಲಿನ ಮೂಲಕ್ಕೆ ನೀವು ಆಯ್ಕೆಮಾಡುವ ಬಣ್ಣ ಹೊಂದಿಕೆಯಾಗುತ್ತದೆಯೇ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಒಟ್ಟಾರೆಯಾಗಿ ನೀವು ಹೇರ್ ಕಲರಿಂಗ್ ಮಾಡಿಸಲು ತೆರಳುತ್ತಿದ್ದೀರಿ ಎಂದಾದಲ್ಲಿ ಉತ್ತಮ ಬ್ಯೂಟಿಪಾರ್ಲರ್ ಆಯ್ಕೆಮಾಡಿಕೊಳ್ಳಿ. ಸ್ವಲ್ಪ ಹಣ ಹೆಚ್ಚು ಖರ್ಚಾದರೂ ತೊಂದರೆ ಇಲ್ಲ ನೀವು ಗುಣಮಟ್ಟಕ್ಕೆ ಪ್ರಾಧಾನ್ಯತೆಯನ್ನು ನೀಡಿ. ಉತ್ತಮ ಗುಣಮಟ್ಟದ ಹೇರ್ ಕಲರಿಂಗ್ ಪ್ರಾಡಕ್ಟ್ ಆಯ್ದುಕೊಳ್ಳಿ ಕೂದಲು ತೊಳೆದುಕೊಳ್ಳುವ ವಿಧಾನ ಕೂದಲಿನ ಸಂರಕ್ಷಣೆ ಮೊದಲಾದವನ್ನು ಕುರಿತು ಪರಿಣಿತರ ಸಲಹೆ ಪಡೆದುಕೊಳ್ಳಿ. ಅದೇ ರೀತಿ ಹೇರ್ ಕಲರಿಂಗ್ ನಂತರ ಕೂದಲಿನ ಸಂರಕ್ಷಣೆಯನ್ನು ಮಾಡುವುದು ಹೇಗೆ ಎಂಬುದ ಕಡೆ ಆದ್ಯತೆ ನೀಡಿ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.