ಮುಲ್ತಾನಿ ಮಿಟ್ಟಿ, ನಿಮ್ಮ ಸೌಂದರ್ಯದ ಸಾಥಿ..!

Video Description

ಮುಲ್ತಾನಿ ಮಿಟ್ಟಿ ನಿಮ್ಮ ಸೌಂದರ್ಯವನ್ನು ಹೇಗೆ ಕಾಪಾಡುತ್ತದೆ? ಮುಲ್ತಾನಿ ಮಿಟ್ಟಿ, ನಿಮ್ಮ ಸೌಂದರ್ಯದ ಸಾಥಿ..! ಅಂದ ಕಾಪಾಡುವ ನೈಸರ್ಗಿಕ ಔಷಧಿಗಳಲ್ಲಿ ಒಂದಾಗಿರುವ ಮುಲ್ತಾನ ಮಿಟ್ಟಿ ಬಳಸಿ ಅಂದವನ್ನು ಕಾಪಾಡಬಹುದು. ಫುಲ್ಲರ್ಸ್ ಅರ್ಥ್ ಎಂದು ಕರೆಯುವ ಈ ಮುಲ್ತಾನಿ ಮಿಟ್ಟಿಯಲ್ಲಿ ಮೆಗ್ನಿಸಿಯಂ ಕ್ಲೋರೇಡ್ ಎಂಬ ಅಂಶವಿದ್ದು ಇದು ಚರ್ಮದ ಕಲೆ. ಮೊಡವೆ. ಚರ್ಮದ ತುರಿಕೆಗಳೆಲ್ಲವನ್ನು ಗುಣಪಡಿಸುವ ಅಂಶವಿದ್ದು ಇದನ್ನು ವಿವಿಧ ರೀತಿಯ ಆಯುರ್ವೇದದ ಚರ್ಮದ ಕ್ರೀಮ್ ಗಳಲ್ಲಿ ಬಳಸುತ್ತಾರೆ. ಮುಲ್ತಾನಿ ಮಿಟ್ಟಿ ಅಗ್ಗದ ವಸ್ತುವಾಗಿದೆ ಆದರೆ ಇದು ಯಾವುದೇ ರೀತಿಯ ಅಡ್ಡ ಪರಿಣಾಮಗಳು ಬೀರುವುದಿಲ್ಲ. ಜೊತೆಗೆ ಇದನ್ನು ನೇರವಾಗಿ ಬಳಸಬಹುದು. ಮುಲ್ತಾನಿ ಮಿಟ್ಟಿ ಚರ್ಮವನ್ನು ಶುದ್ದೀಕರಣ ಮತ್ತು ಸ್ವಚ್ಛಗೊಳಿಸುತ್ತದೆ. ಮುಲ್ತಾನಿ ಮಿಟ್ಟಿಯಲ್ಲಿರುವ ಮೆಗ್ನಿಶಿಯಂ ಕ್ಲೋರೈಡ್ ಚರ್ಮದಲ್ಲಿರುವ ಮೊಡವೆ ಮತ್ತು ಕಲೆಗಳನ್ನು ನಿವಾರಿಸುತ್ತದೆ. ಕೆಲವೊಂದು ಫೇಸ್ ಪ್ಯಾಕ್ ಮತ್ತು ಫೇಸ್ ಮಾಸ್ಕ್‌ಗಳು ಮುಲ್ತಾನಿ ಮಿಟ್ಟಿಯನ್ನು ಪ್ರಮುಖವಾಗಿ ಬಳಸುತ್ತಾರೆ. ಇದರಲ್ಲಿರುವ ಖನಿಜಾಂಶಗಳು ತ್ವಚೆಯಲ್ಲಿರುವ ಗಾಯಗಳನ್ನು ಮತ್ತು ಕಲೆಗಳನ್ನು ಸಹ ಹೋಗಲಾಡಿಸುತ್ತವೆ. ತ್ವಚೆಯಲ್ಲಿರುವ ರಂಧ್ರಗಳ ಗಾತ್ರವನ್ನು ಸಹ ಇವು ಕಡಿಮೆ ಮಾಡುತ್ತವೆ. ಇದು ನಿಮ್ಮ ಮುಖದಲ್ಲಿರುವ ಸುಕ್ಕು ಮತ್ತು ಗೆರೆಗಳನ್ನು ನಿವಾರಿಸಿ, ಆಂಟಿ ಏಜಿಂಗ್ ಪರಿಣಾಮಗಳನ್ನು ಸಹ ಒದಗಿಸುತ್ತದೆ. ವಿವಿಧ ಬಗೆಯ ಫೇಸ್ ಪ್ಯಾಕ್‍ಗಳು ನಿಮ್ಮ ತ್ವಚೆಗೆ ವಿವಿಧ ಚಿಕಿತ್ಸೆಗಳನ್ನು ನೀಡುತ್ತವೆ. ಹಣ್ಣಾದ ಟೊಮೇಟೊವನ್ನು ಎರಡು ಟೀ.ಚಮಚ ಮುಲ್ತಾನಿ ಮಿಟ್ಟಿ ಹಾಗು ಒಂದು ಟೀ.ಚಮಚ ಕಡಲೆ ಹಿಟ್ಟಿನ ಜೊತೆಗೆ ಬೆರೆಸಿ ಗಟ್ಟಿಯಾದ ಪೇಸ್ ಪ್ಯಾಕ್ ಮಾಡಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಲೇಪಿಸಿ, 20 ನಿಮಿಷಗಳ ಕಾಲ ಬಿಡಿ. ನಂತರ ಇದನ್ನು ತಣ್ಣೀರಿನಲ್ಲಿ ತೊಳೆಯಿರಿ. ಈ ಪ್ಯಾಕ್ ನಿಮ್ಮ ತ್ವಚೆಯಲ್ಲಿರುವ ಎಣ್ಣೆ ಅಂಶವನ್ನು ನಿವಾರಿಸುತ್ತದೆ. ಮುಖದ ಮೇಲಿನ ರಂಧ್ರಗಳನ್ನು ಹೋಗಿಸಿ ರಂಧ್ರದಲ್ಲಿ ಅಡಗಿರುವ ಸೂಕ್ಷ್ಮ ಕಣಗಳನ್ನು ಹೊರ ಹಾಕುತ್ತದೆ. ಮುಲ್ತಾನಿ ಮಿಟ್ಟಿಯಲ್ಲಿರುವ ಮೆಗ್ನಿಸಿಯಂ ಕ್ಲೋರೇಡ್ ಅಂಶ ಮುಖದ ಮೊಡವೆ. ಕಲೆಗಳನ್ನು ದೂರ ಮಾಡುತ್ತದೆ.ಎಣ್ಣೆಯುಕ್ತ ಚರ್ಮವನ್ನು ಹೊಂದಿರುವವರಿಗೆ ಮುಲ್ತಾನಿ ಮಿಟ್ಟಿ ಒಂದು ಒಳ್ಳೆಯ ಔಷಧಿ ಇದು ಚರ್ಮದಲ್ಲಿ ಅಡಗಿರುವ ಎಣ್ಣೆಯನ್ನು ಹೊರಹಾಕಿ ಮೃದುವಾದ ಚರ್ಮವನ್ನು ಮಾಡುತ್ತದೆ. ಜೊತೆಗೆ ಯಾವುದೇ ರೀತಿಯ ಮೊಡವೆಗಳು ಬರದ ಹಾಗೆ ಕಾಪಾಡುತ್ತದೆ.ಮುಖದ ಮೇಲೆ ಹೆಚ್ಚಾಗಿ ಕಾಣುವ ವಾಯ್ಟ್ ಹೆಡ್. ಮತ್ತು ಬ್ಲಾಕ್ ಹೆಡ್ ಗಳನ್ನು ಹೊರ ಹಾಕಲು ತುಂಬಾ ಸಹಾಯ ಮಾಡುತ್ತದೆ. ಮುಲ್ತಾನಿ ಮಿಟ್ಟಿಯನ್ನು ಫೇಸ್ ಪ್ಯಾಕ್ ಆಗಿ ಬಳಸಿ ಉತ್ತಮ ಬದಲಾವಣೆ ಕಾಣಬಹುದು. ಮುಲ್ತಾನಿ ಮಿಟ್ಟಿಯನ್ನು ಫೇಸ್ ಪ್ಯಾಕ್. ಸೋಪು. ಫೇಸ್ ವಾಷ್ ರೀತಿಯಲ್ಲಿ ಬಳಸುತ್ತಾ ಬಂದರೆ ಮುಖದ ಕಂದು ಬಣ್ಣ ದೂರವಾಗಿ ಉತ್ತಮ ಬಣ್ಣ ಪಡೆಯಲು ಸಹಕಾರಿಯಾಗುತ್ತದೆ.ಮುಲ್ತಾನಿ ಮಿಟ್ಟಿ ಒಣ ಚರ್ಮವನ್ನು ಮೃದು ಮಾಡುತ್ತದೆ.ಎಲ್ಲರೂ ಬಯಸುವುದು ನಾವು ತುಂಬಾ ಚೆನ್ನಾಗಿ ಕಾಣಬೇಕು ಎಂದು. ಅದಕ್ಕಾಗಿಯೇ ತುಂಬಾ ರೀತಿಯ ಪ್ರಯೋಗಗಳನ್ನು ಮಾಡುತ್ತಾರೆ. ವಿಧವಿದ ಕ್ರೀಮ್ಗಳು. ಬ್ಯೂಟಿ ಪಾರ್ಲರ್ ಎಂದು ತುಂಬಾ ಹಣವನ್ನು ಖರ್ಚು ಮಾಡುತ್ತಾರೆ. ಆದರೆ ಇನ್ನೂ ಮೇಲೆ ಅದನ್ನೆಲ್ಲ ಬಿಟ್ಟು ಈ ಮುಲ್ತಾನಿ ಮಿಟ್ಟಿಯನ್ನು ಉಪಯೋಗಿಸಿ ನಿಮ್ಮ ಅಂದವನ್ನು ಕಾಪಾಡಿಕೊಳ್ಳಿ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.