ಬ್ಲಾಕ್ ಕಾಫಿ ಕುಡಿದು ತೂಕ ಇಳಿಸಕೊಳ್ಳಿ

Video Description

ಬೊಜ್ಜಿನ ಸಮಸ್ಯೆಯೇ ಹಾಗಿದ್ದರೆ ಬ್ಲಾಕ್ ಕಾಫಿ ಕುಡಿಯಿರಿ ಬ್ಲಾಕ್ ಕಾಫಿ ಕುಡಿದು ತೂಕ ಇಳಿಸಿಕೊಳ್ಳಿ ಕಾಫಿ ಎಂದರೆ ನೆನಪಾಗುವುದು ಬೆಳಗ್ಗಿನ ಬೆಡ್ ಕಾಫಿ ಮತ್ತು ಸಂಜೆಯ ಇಡಿದಿನದ ಸುಖ ಸಂತೋಷಗಳನ್ನು ಮೆಲುಕು ಹಾಕುತ್ತಾ ಕುಡಿಯುವ ಕಾಫಿ ಅದೊಂದು ಸೊಗಸನ್ನು ನೀಡುತ್ತದೆ ಅದೂ ಅಲ್ಲದೆ ಬೆಳಗ್ಗಿನ ಕಾಫಿ ಎಂದರೆ ಅದೊಂದು ರೀತಿಯ ಸ್ವರ್ಗ ಸುಖವನ್ನು ನೀಡುತ್ತದೆ. ಒಮ್ಮೆ ಕಾಫಿ ಕುಡಿದರೆ ಮತ್ತೊಮ್ಮೆ ಕುಡಿಯುವ ಆಸೆ ಬಯಕೆ ನಮ್ಮನ್ನು ಕಾಡುತ್ತದೆ. ಕಾಫಿ ಗೆ ಅನೇಕ ಔಷಧೀಯ ಗುಣಗಳಿದ್ದು ಎಲ್ಲವೂ ಆರೋಗ್ಯಕ್ಕೆ ಅನುಕೂಲಕರವೇ ಆಗಿದೆ . ನಾವು ಇಂದು ಕಾಫಿ ಯಲ್ಲೇ ಇನ್ನೊಂದು ವಿಧವಾದ ಬ್ಲಾಕ್ ಕಾಫಿ ಬಗ್ಗೆ ಮಾತನಾಡುತ್ತಿದ್ದೇವೆ. ಬ್ಲಾಕ್ ಕಾಫಿ ಸರಿಯಾದ ಪ್ರಮಾಣದಲ್ಲಿ ಸೇವಿಸಿದ್ದೇ ಆದರೆ ನಮ್ಮ ದೇಹದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಏಕೆಂದರೆ ಬ್ಲಾಕ್ ಕಾಫಿ ಯಲ್ಲಿ ಅನೇಕ ರೀತಿಯ ಆಂಟಿ ಒಕ್ಸಿಡಾಂಟ್ ಗಳು ಮತ್ತು ಕೆಲವು ಉಪಯುಕ್ತ ಪೋಷಕಾಂಶಗಳು ಅಡಗಿವೆ. ಇವುಗಳಿಂದ ಆಗುವ ಉಪಯೋಗಗಳು ಏನೇನು ಎಂಬುದನ್ನು ಈಗ ಗಮನ ಹರಿಸೋಣ... ಬ್ಲಾಕ್ ಕಾಫಿ ದೇಹದಲ್ಲಿನ ಕೊಬ್ಬಿನ ಅಂಶವನ್ನು ಕರಗಿಸಿ ದೇಹಕ್ಕೆ ಉಪಯೋಗವಾಗುವ ಫ್ಯಾಟ್ ಸೆಲ್‌ಗಳನ್ನು ಫ್ಯಾಟಿ ಆ್ಯಸಿಡ್ ರೂಪದಲ್ಲಿ ಬಿಡುಗಡೆ ಮಾಡುತ್ತದೆ. ನೀವು ಜಿಮ್‌ಗೆ ಹೋಗುವ ಅರ್ಧಗಂಟೆ ಮೊದಲು ಬ್ಲಾಕ್ ಕಾಫಿ ಕುಡಿದರೆ ಇದು ತಕ್ಷಣ ಕಾರ್ಯಪ್ರವೃತ್ತಗೊಂಡು ಮೆಟಬೋಲಿಸಂ ಅನ್ನು ಶೇಕಡಾ 50 ರಷ್ಟು ಹೆಚ್ಚು ಮಾಡುತ್ತದೆ. ಇದು ದೇಹದ ಕೊಬ್ಬನ್ನು ಕರಗಿಸುವ ಪಾನೀಯ ಕೂಡ ಆಗಿರುವುದರಿಂದ ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ನರಮಂಡಲಕ್ಕೆ ಸೂಚನೆಯನ್ನು ನೀಡಿ ಅಧಿಕವಾಗಿರುವ ಕೊಬ್ಬನ್ನು ಫ್ಯಾಟ್ ಸೆಲ್‌ಗಳಾಗಿ ಪರಿವರ್ತಿಸಿ ಗ್ಲೈಕೋಜೆನ್‌ಗೆ ವಿರುದ್ಧವಾಗಿ ದೇಹದ ಕಾರ್ಯಚಟುವಟಿಕೆಗೆ ಶಕ್ತಿಯ ಮೂಲಗಳಾಗಿ ಬದಲಾಯಿಸುತ್ತದೆ. ಜೊತೆಗೆ ಇದು ಹೃದಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ಪ್ಯಾರಲಿಸಿಸ್‌ನಂತಹ ಸಮಸ್ಯೆಗಳನ್ನು ದೂರವಾಗಿಸುತ್ತದೆ. ಉರಿಯೂತದಂತಹ ಸಮಸ್ಯೆಗಳಿಗೆ ಕೂಡ ಬ್ಲ್ಯಾಕ್ ಕಾಫಿ ರಾಮಬಾಣವಾಗಿದೆ. ಇದರಲ್ಲಿ ವಿಟಮಿನ್ ಬಿ2, ವಿಟಮಿನ್ ಬಿ3, ವಿಟಮಿನ್ ಬಿ5, ಸೇರಿದಂತೆ ಮ್ಯಾಂಗನೀಸ್, ಪೊಟ್ಯಾಸಿಯಂ ಮತ್ತು ಮೆಗ್ನೇಷಿಯಂ ಕೂಡ ಇದೆ. ಎಷ್ಟೇ ವಯಸ್ಸಾಗಿದ್ದರೂ ನಮಗಿನ್ನೂ ಕಡಿಮೆ ವಯಸ್ಸು ಎಂದು ಹೇಳಲು ಪ್ರತಿಯೊಬ್ಬರೂ ಬಯಸುತ್ತಾರೆ. ಬ್ಲಾಕ್ ಕಾಫಿ ಕುಡಿಯಲು ನೀವು ಒಮ್ಮೆ ರೂಢಿ ಮಾಡಿಕೊಂಡರೆ ಸಾಕು ನಿಮ್ಮ ವಯಸ್ಸು ಹೆಚ್ಚಾಗಿದೆ ಎಂದು ಯಾರು ಹೇಳಲು ಸಾಧ್ಯವೇ ಇಲ್ಲ. ಸಣ್ಣ ವಯಸ್ಸಿನವಂತೆ ನೀವು ಕಾಣುತ್ತೀರಿ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.