ಸದ್ಗುರುಗೆ ಹೈಕೋರ್ಟ್ ನೋಟೀಸ್..!?

Video Description

ಕಾವೇರಿ ಜಲಾನಯನ ಪ್ರದೇಶದಲ್ಲಿ ಗಿಡ ನೆಡುವ ಅಭಿಯಾನದ ಮೂಲಕ ಕಾವೇರಿ ನದಿ ನೀರಿನ ಮಟ್ಟ ಹೆಚ್ಚಿಸಲು ಇಶಾ ಫೌಂಡೇಷನ್‌ ಕಾವೇರಿ ಕೂಗು ಸದ್ಗುರುಗೆ ಹೈಕೋರ್ಟ್ ನೋಟೀಸ್ ಜಾರಿ ಸದ್ಗುರುಗೆ ಹೈಕೋರ್ಟ್ ನೋಟೀಸ್..!? “ಕಾವೇರಿ ಕೂಗು’ ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ಸದ್ಗುರು (ಜಗ್ಗಿ ವಾಸುದೇವ್‌) ಅವರು ಹೇಳಿದರು. ಮಹಾರಾಷ್ಟ್ರದ ಯವತ್ಮಾಲ್‌ ಜಿಲ್ಲೆಯ ವಘಾರಿ ನದಿಯ ಪುನಶ್ಚೇತನದ ನಂತರ ನದಿಗಳನ್ನು ರಕ್ಷಿಸಿ(ರ್ಯಾಲಿ ಫಾರ್‌ ರಿವರ್‌) ಇದರ ಎರಡನೇ ಯೋಜನೆಯಾಗಿ ಕಾವೇರಿ ನದಿಯ ಪುನಶ್ಚೇತನ ಯೋಜನೆಯನ್ನು ನಡೆಸಲಾಗುತ್ತಿದೆ ಕರ್ನಾಟಕ ಹಾಗೂ ತಮಿಳುನಾಡು ಜನರ ಜೀವದ ಮೂಲವಾಗಿರುವ ಕಾವೇರಿ ನದಿಯ ಹರಿವು ಈಗ ಶೇ.46ರಷ್ಟು ಕಡಿಮೆಯಾಗಿದೆ. ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ನಲ್ಲಿ ಕಾವೇರಿ ನದಿ ನೋಡಿದರೆ ಶೇ.25 ಅಥವಾ ಶೇ.30ರಷ್ಟು ಮಾತ್ರ ಹರಿವು ಕಾಣ ಸಿಗುತ್ತದೆ. ತಮಿಳುನಾಡಿನಲ್ಲಿ ಪ್ರತಿ ವರ್ಷ 5ರಿಂದ 8 ಕಿ.ಮೀ.ಯಷ್ಟು ಕಾವೇರಿ ನದಿ ಒಣಗಿ ಹೋಗುತ್ತಿದೆ. 6ರಿಂದ 7 ತಿಂಗಳು ನೀರು ಕಡಲಿಗೆ ಹೋಗಿ ಸೇರಿಲ್ಲ. ಚೆನ್ನೈನಲ್ಲಿ ಜಲಕ್ಷಾಮ ಉದ್ಭವಿಸಿದೆ. ರ್ಯಾಲಿ ಫಾರ್‌ ರಿವರ್‌ ರೀತಿಯ ಅಭಿಯಾನವೇ ಇದಾಗಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಸಮಾನ್ಯ ಕೃಷಿಯ ಜತೆಗೆ ವಾಣಿಜ್ಯ ಕೃಷಿ(ಹಣ್ಣಿನ ಮರಗಳು) ತಮ್ಮ ಸ್ವಲ್ಪ ಭೂಮಿಯನ್ನು ಪರಿವರ್ತಿಸಿಕೊಳ್ಳಲು ಮನವಿ ಮಾಡುವುದಾಗಿದೆ. ಸುಮಾರು 69 ಸಾವಿರ ರೈತರು ಈಗಾಗಲೇ ಇದಕ್ಕೆ ಸೇರಿಕೊಂಡಿದ್ದಾರೆ. ರೈತರು ತಮ್ಮ ಜಮೀನಿನಲ್ಲಿ ಹಣ್ಣಿನ ಮರದ ಸಸಿಗಳನ್ನು ನೆಡಲಾಗುತ್ತದೆ. ಇದೊಂದು ಅಭಿಯಾನದ ರೀತಿಯಲ್ಲಿ ನಡೆಯಲಿದೆ. ಕೆರೆ, ನದಿ, ಬಾವಿ ಇತ್ಯಾದಿ ನೀರಿನ ಮೂಲಗಳಲ್ಲ. ಮಳೆಯೇ ನೀರಿನ ಮೂಲ. ಮರ ಮತ್ತು ಮಣ್ಣಿನ ಫ‌ಲವತ್ತತೆ ಹೆಚ್ಚಿಸುವ ಮೂಲಕ ನದಿಯನ್ನು ಸಂರಕ್ಷಿಸಲು ಸಾಧ್ಯ. ಹೀಗಾಗಿ ಕಾವೇರಿ ಕೂಗು ಯೋಜನೆ ಆರಂಭಿಸಲಾಗಿದೆ. ಇದೀಗ 'ಕಾವೇರಿ ಕೂಗು' ಅಭಿಯಾನದಡಿ ಸಾರ್ವಜನಿಕರಿಂದ ಹಣ ಸಂಗ್ರಹಕ್ಕೆ ಮುಂದಾಗಿರುವ ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದ ಇಶಾ ಫೌಂಡೇಷನ್ ಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. 'ಕಾವೇರಿ ಕೂಗು ' ಅಭಿಯಾನದ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಮುಂದಾಗಿರುವ ಇಶಾ ಫೌಂಡೇಷನ್ ವಿರುದ್ಧ ವಕೀಲ ಎ.ವಿ.ಅಮರನಾಥ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ಪೀಠ , ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.