ಉಡುಪಿ ರಸಂ ಮಾಡಲು ಗೊತ್ತಾ..?

Video Description

ಥಟ್ ಅಂತ ಮಾಡಿ ರುಚಿಕರ ಉಡುಪಿ ರಸಂ ಉಡುಪಿ ರಸಂ ಮಾಡಲು ಗೊತ್ತಾ..? ಇಂದಿನ ತರಾತುರಿಯ ಜೀವನದಲ್ಲಿ ಶೀಘ್ರದಲ್ಲೇ ಆಗುವ ಅಡಿಗೆಗಳನ್ನೇ ಜನರು ಹೆಚ್ಚು ಇಷ್ಟಪಡುತ್ತಾರೆ. ಅದರಲ್ಲೂ ಉದ್ಯೋಗಕ್ಕೆ ಹೋಗುವ ಮಹಿಳೆಯರಿಗೆ ತರಾತುರಿಯಿಂದ ರುಚಿಕಟ್ಟಾಗಿರುವ ಅಡುಗೆಗಳನ್ನು ಮಾಡಲು ಉತ್ಸುಕರಾಗಿರುತ್ತಾರೆ. ಇದರಿಂದ ಅವರಿಗೆ ಕೊಂಚ ವಿಶ್ರಾಂತಿ ಕೂಡ ದೊರಕಬೇಕು ಮತ್ತು ಬೇಗನೇ ಸಿದ್ಧವಾಗಬೇಕು. ಅದಕ್ಕಾಗಿಯೇ ಇಂದಿನ ಲೇಖನದಲ್ಲಿ ಥಟ್ ಅಂತ ಮಾಡಬಹುದಾದ ಉಡುಪಿ ರಸಂ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಇನ್ನು ರಸಂ ಮಾಡುವಾಗ ಅದರಲ್ಲಿ ನಾವು ಹುಳಸೆ ಹಣ್ಣು, ಇಂಗು, ಶುಂಠಿ, ಹಸಿಮೆಣಸು, ಟೊಮೇಟೊ ಆಮೇಲೆ ಸುವಾಸಿತ ಮಸಾಲೆಗಳನ್ನು ಬೆರೆಸಿ ತಯಾರಿಸುವ ರಸಂ ಪುಡಿಯನ್ನು ತಯಾರಿಸುವುದರಿಂದ ಇದು ನಿಮ್ಮ ದೇಹಕ್ಕೂ ಆರೋಗ್ಯಕರ ಮತ್ತು ಹಿತಕಾರಿ ಎಂದೆನಿಸಿದೆ. ಬಿಸಿ ಬಿಸಿ ಅನ್ನದೊಂದಿಗೆ ತುಪ್ಪವನ್ನು ಸೇರಿಸಿ ಅದರೊಂದಿಗೆ ಉಡುಪಿ ರಸಂ ಅನ್ನು ಮಿಶ್ರ ಮಾಡಿ ಊಟ ಸವಿದಲ್ಲಿ ಸ್ವರ್ಗಕ್ಕೆ ಮೂರೇ ಗೇಣು ಎಂಬುದಂತೂ ನಿಜ. ಹಾಗಿದ್ದರೆ ಬನ್ನಿ ಉಡುಪಿ ರಸಂ ತಯಾರಿಸುವ ವಿಧಾನಗಳೇನು ಎಂಬುದನ್ನು ತಿಳಿದುಕೊಳ್ಳೋಣ. ಬೇಯಿಸಿದ ತೊಗರಿ ಬೇಳೆ - ಅರ್ಧಕಪ್ ಟೊಮೇಟೊ - ಎರಡು ಕತ್ತರಿಸಿದ್ದು ಹುಣಸೆ ಹುಳಿ - ಮಧ್ಯಮ ಗಾತ್ರದ್ದು ಲಿಂಬೆಯಷ್ಟು ದೊಡ್ಡದಾಗಿರುವ ಹುಣಸೆ ಹಣ್ಣು ಇದನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿ ಕರಗಿಸಿ ಅದರ ಸಾರವನ್ನು ತೆಗೆದಿರಿಸಿ. ನೀರು - 4 ಕಪ್ *ಸಾರು/ರಸಂ ಪುಡಿ ಎರಡೂವರೆ ಟೇಬಲ್ ಚಮಚ *ಹಸಿಮೆಣಸು - ಎರಡು ಉದ್ದಕ್ಕೆ ಸೀಳಿದ್ದು *ಅರಶಿನ ಪುಡಿ - ಕಾಲು ಚಮಚ *ಉದ್ದಿನಬೇಳೆ - ಅರ್ಧ ಚಮಚ *ಕೆಂಪು ಮೆಣಸು - ಒಂದು *ಕರಿಬೇವು - ಒಂದು ದಳದಷ್ಟು *ಕೊತ್ತಂಬರಿ ಸೊಪ್ಪು - ಎರಡು ಟೇಬಲ್ ಚಮಚ *ಎಣ್ಣೆ/ತುಪ್ಪ - ಸಾರು/ರಸ೦ ಪುಡಿಯ ತಯಾರಿಕೆಗಾಗಿ *ಕೆ೦ಪು ಮೆಣಸು - ಏಳರಿ೦ದ ಎ೦ಟರಷ್ಟು *ಕೊತ್ತ೦ಬರಿ ಬೀಜ - ಎರಡು ಟೇಬಲ್ ಚಮಚಗಳಷ್ಟು *ಜೀರಿಗೆ - ಅರ್ಧ ಟೇಬಲ್ ಚಮಚದಷ್ಟು *ಸಾಸಿವೆ ಕಾಳು - ಅರ್ಧ ಟೇಬಲ್ ಚಮಚದಷ್ಟು *ಮೆ೦ತೆ ಕಾಳು - ಕಾಲು ಚಮಚದಷ್ಟು *ಕರಿಬೇವು - ಒ೦ದು ದಳದಷ್ಟು *ತುರಿದ ತೆ೦ಗಿನಕಾಯಿ - ಒ೦ದೂವರೆ ಚಮಚದಷ್ಟು (ಅಗತ್ಯವಿದ್ದಲ್ಲಿ) *ಹಿ೦ಗು - ಕಾಲು ಟೇಬಲ್ ಚಮಚದಷ್ಟು ರಸಂ ಪುಡಿ ತಯಾರಿಸಲು ಎಲ್ಲಾ ಸಾಮಾಗ್ರಿಗಳನ್ನು ತವೆ/ಬಾಣಲೆಯಲ್ಲಿ ಶುಷ್ಕವಾಗಿ ಹುರಿದುಕೊಳ್ಳಿ ಆನಂತರ ಮಿಕ್ಸಿಯಲ್ಲಿ ನುಣ್ಣಗೆ ಹುಡಿ ಮಾಡಿಕೊಳ್ಳಿ ಬಾಣಲೆಯಲ್ಲಿ ಹುಣಸೆ ಹಣ್ಣಿನ ರಸ ಇದರೊಂದಿಗೆ ಉಪ್ಪು, ನೀರು, ಟೊಮೇಟೊ ಹೋಳುಗಳು, ಕಾಯಿಮೆಣಸು ಬೆಲ್ಲ ಕರಿಬೇವಿನ ಸೊಪ್ಪುಗಳನ್ನು ಹಾಕಿ. ಇವುಗಳ ಮಿಶ್ರಣವನ್ನು ಕುದಿಯುವವರಿಗೆ ಬಿಸಿ ಮಾಡಿಕೊಳ್ಳಿ ಏಳರಿಂದ ಎಂಟು ನಿಮಿಷ ಕುದಿಸಿ ಬೇಯಿಸಿದ ತೊಗರಿ ಬೇಳೆ, ರಸಂ ಪುಡಿ, ಹುರಿದ ತೆಂಗಿನ ಕಾಯಿಯನ್ನು ಇದಕ್ಕೆ ಸೇರಿಸಿರಿ ಹಾಗೂ ಇವುಗಳ ಮಿಶ್ರಣವನ್ನು ಮಧ್ಯಮದಿಂದ ಹೆಚ್ಚಿನ ಉರಿಯಲ್ಲಿ ಏಳು ನಿಮಿಷಗಳವರೆಗೆ ಬೇಯಿಸುವುದನ್ನು ಮುಂದುವರಿಸಿ. ಉರಿ ಮಂದಗೊಳಿಸಿ ಕೊತ್ತಂಬರಿ ಸೊಪ್ಪು ಹಾಕಿ. ರಸ೦ ಬೇಯುತ್ತಿರುವ ಅಥವಾ ಕುದಿಯುತ್ತಿರುವ ಹ೦ತದಲ್ಲಿರುವಾಗ, ಒಗ್ಗರಣೆಯನ್ನು ತಯಾರು ಮಾಡಿರಿ. ಸಣ್ಣ ತವೆಯಲ್ಲಿ ಎಣ್ಣೆ ಅಥವಾ ತುಪ್ಪವನ್ನು ಬಿಸಿ ಮಾಡಿರಿ. ಇದಕ್ಕೆ ಸಾಸಿವೆಯನ್ನು ಹಾಕಿರಿ. ಈ ಸಾಸಿವೆಯು ಚಿಟಿಚಿಟಿ ಸಿಡಿಯತೊಡಗಿದಾಗ, ತವೆಗೆ ಉದ್ದಿನ ಬೇಳೆ, ಕೆ೦ಪು ಮೆಣಸು, ಕರಿಬೇವಿನ ಸೊಪ್ಪು, ಹಾಗೂ ಹಿ೦ಗನ್ನು ಸೇರಿಸಿರಿ. ಇತ್ತ ರಸ೦ ನ ಬೇಳೆಯು ಕೆ೦ಪು ಬಣ್ಣಕ್ಕೆ ತಿರುಗಿದಾಗ, ಒಗ್ಗರಣೆಯನ್ನು ಬೇಯುತ್ತಿರುವ ರಸ೦ಗೆ ಸೇರಿಸಿರಿ. ಈಗ ಇದಕ್ಕೆ ತಾಜಾ ಕೊತ್ತ೦ಬರಿ ಸೊಪ್ಪನ್ನು ಸೇರಿಸಿ ಅನ೦ತರ ಉರಿಯನ್ನು ನ೦ದಿಸಿರಿ. ರಸ೦ ನ ಪಾತ್ರೆಯನ್ನು ಮುಚ್ಚಳವೊ೦ದರಿ೦ದ ಮುಚ್ಚಿರಿ. ಬಿಸಿಬಿಸಿಯಾದ ಅನ್ನದೊ೦ದಿಗೆ ಬಡಿಸುವುದಕ್ಕೆ ಮೊದಲು ರಸ೦ ಅನ್ನು ಕೆಲನಿಮಿಷಗಳ ಕಾಲ ಹಾಗೆಯೇ ಪಾತ್ರೆಯಲ್ಲಿ ಇರಗೊಡಿರಿ. ಈ ರಸ೦ ಅನ್ನು ಸೂಪ್ ನ ರೂಪದಲ್ಲಿಯೂ ಸೇವಿಸಬಹುದು ಇಲ್ಲವೇ ಅನ್ನದೊ೦ದಿಗೆ ಬೆರೆಸಿ ಊಟ ಮಾಡಬಹುದು.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.