ಪ್ಲಾಸ್ಟಿಕ್ ಲಂಚ್ ಬಾಕ್ಸ್ ನಿಂದ ಮಕ್ಕಳನ್ನು ಕಾಪಾಡಿ..!

Video Description

ಪ್ಲಾಸ್ಟಿಕ್ ಲಂಚ್ ಬಾಕ್ಸ್‌ನಿಂದ ಕ್ಯಾನ್ಸರ್ ಅಪಾಯ ಪ್ಲಾಸ್ಟಿಕ್ ಲಂಚ್ ಬಾಕ್ಸ್ ನಿಂದ ಮಕ್ಕಳನ್ನು ಕಾಪಾಡಿ..! ನೀವು ಮಕ್ಕಳಿಗೆ ಆಹಾರ ಪ್ಯಾಕ್ ಮಾಡಿಕೊಡುವ ಲಂಚ್ ಬಾಕ್ಸ್ ಪ್ಲಾಸ್ಟಿಕ್‌ನಿದ್ದಾಗಿದ್ದರೆ ಈಗಲೇ ಅದನ್ನು ನಿಲ್ಲಿಸಿ. ನಿಮ್ಮ ಮಗುವಿಗೆ ನೀವು ಪರೋಕ್ಷವಾಗಿ ವಿಷವನ್ನು ಉಣಿಸುತ್ತಿದ್ದೀರಿ ಎಂಬುದು ನಿಮಗೆ ಗೊತ್ತೇ? ಹೌದು ಪ್ಲಾಸ್ಟಿಕ್ ಪಾತ್ರೆಯಲ್ಲಿ ನೀವು ಬಿಸಿ ಆಹಾರವನ್ನು ಹಾಕಿದಾಗ ಅದು ರಾಸಾಯನಿಕವಾಗಿ ಮಾರ್ಪಡುತ್ತದೆ ಇದರಲ್ಲಿರುವ ಕೆಮಿಕಲ್ ದೇಹವನ್ನು ಸೇರಿ ಕ್ಯಾನ್ಸರ್ ಅನ್ನು ಉಂಟುಮಾಡುತ್ತದೆ. ಟಿಫಿನ್ ಬಾಕ್ಸ್‌ನಲ್ಲಿ ಬೇರೆ ಬೇರೆ ರೀತಿಯ ಕೆಮಿಕಲ್ಸ್ ಇರುತ್ತದೆ. ಎಂಡೊಕ್ರೀನ್ ಡಿಸ್ಟ್ರಿಕ್ಟಿಂಗ್ ಟಿಫಿನ್ ಬಾಕ್ಸ್‌ನಲ್ಲಿ ಇರಬಹುದಾದ ಕೆಮಿಕಲ್ಸ್ ಆಗಿದ್ದು ಇದು ನಮ್ಮ ಶರೀರಕ್ಕೆ ಬಹಳ ಹಾನಿಕಾರಕವಾಗಿದೆ. ಪ್ಲಾಸ್ಟಿಕ್ ಟಿಫಿನ್ ಬಾಕ್ಸ್ ಬಿಸಿ ಆಹಾರ ಹಾಕಿದರೆ ಈ ಕೆಮಿಕಲ್ಸ್ ಆಹಾರದೊಂದಿಗೆ ಸೇರುವ ಸಾಧ್ಯತೆ ಇದೆ. ಇದು ಬಿಸಿ ಆಹಾರ ಹಾಕುವ ಮೊದಲು ಅದರಲ್ಲಿರುವುದಿಲ್ಲ. ಬಿಸಿ ತಾಗಿದೊಡನೆ ಅದು ಅದರಲ್ಲಿ ಉದ್ಭವವಾಗುತ್ತದೆ. ಪ್ಲಾಸ್ಟಿಕ್ ಲಂಚ್ ಬಾಕ್ಸ್ ನೋಡುವುದಕ್ಕೆ ಸುಂದರವಾಗಿರುತ್ತದೆ. ಆದರೆ ಅದನ್ನು ಶುಚಿಗೊಳಿಸುವುದು ಅಷ್ಟು ಸುಲಭದ ಕೆಲಸವೂ ಅಲ್ಲ. ನಾವು ಅದನ್ನು ಮೇಲಿಂದ ಶುಚಿಮಾಡಿಬಿಡಬಹುದು. ಅದರ ಮೂಲೆಯಲ್ಲಿ ಆಹಾರ ಕಣ ಹೋಗಿ ಕೂತರೆ ಶುಚಿಮಾಡುವುದು ಕಷ್ಟ. ಹಾಗೆಯೇ ಮತ್ತೆ ಆಹಾರ ಹಾಕಿದರೆ ಅದರಲ್ಲಿ ಕೀಟಸೃಷ್ಟಿಯಾಗುತ್ತದೆ. ಇದು ಮಕ್ಕಳ ದೇಹ ಸೇರುವ ಸಾಧ್ಯತೆಯಿದ್ದು ಅಪಾಯಕಾರಿಯಾಗಿದೆ. ಪ್ಲಾಸ್ಟಿಕ್ ಬಾಕ್ಸ್‌ನಲ್ಲಿ ಆಹಾರ ಕೊಂಡೊಯ್ದರೆ ಅದು ಮಕ್ಕಳ ಆರೋಗ್ಯದ ಮೇಲೆ ಹಾನಿಯನ್ನುಂಟು ಮಾಡುತ್ತದೆ. ಮಕ್ಕಳಲ್ಲಿ ಹಸಿವು ಕಡಿಮೆಯಾಗಿ ಅವರು ಆಹಾರ ಸೇವಿಸಲು ನಿರಾಕರಿಸುತ್ತಾರೆ. ಆಹಾರ ಅಶುಚಿಯಾಗಿ ಹಾಳಾಗಿಬಿಡುತ್ತದೆ. ಕ್ಯಾನ್ಸರ್‌ನಂತಹ ರೋಗ ಬರುತ್ತದೆ. ಮಕ್ಕಳಲ್ಲಿ ಬೊಜ್ಜು ಬೇಗನೇ ಉದ್ಭವಿಸುತ್ತದೆ. ಇಂದು ಮಕ್ಕಳಲ್ಲಿ ಹೆಚ್ಚು ಕಂಡುಬರುತ್ತಿರುವ ಕಾಯಿಲೆ ಡಯಾಬಿಟೀಸ್ ಆಗಿದೆ. ಇದಕ್ಕೆ ಕಾರಣ ಪ್ಲಾಸ್ಟಿಕ್ ಪಾತ್ರೆಗಳ ಹೆಚ್ಚಿನ ಬಳಕೆ. ಪ್ಲಾಸ್ಟಿಕ್ ಮಕ್ಕಳ ದೇಹವನ್ನು ಸೇರಿದರೆ ಅವರಲ್ಲಿನ ರೋಗ ಪ್ರತಿರೋಧಕ ಶಕ್ತಿಯ ಮೇಲೆ ಇದು ಪರಿಣಾಮ ಬೀರುತ್ತದೆ ಅವರ ದೇಹದಲ್ಲಿ ಶಕ್ತಿ ಕುಂಠಿತವಾಗಲು ಕಾರಣವಾಗುತ್ತದೆ. ಆದ್ದರಿಂದ ಮಕ್ಕಳಿಗೆ ಲಂಚ್ ಬಾಕ್ಸ್ ನೀಡುವಾಗ ಆದಷ್ಟು ಪ್ಲಾಸ್ಟಿಕ್ ರಹಿತ ಪಾತ್ರೆಗಳ ಮೇಲೆ ಗಮನ ನೀಡಿ. ಅವರ ಆರೋಗ್ಯದ ಮೇಲೆ ಸಾಕಷ್ಟು ಕಾಳಜಿ ವಹಿಸುವ ಅಮ್ಮಂದಿರು ಕೊಂಚ ಲಂಚ್ ಬಾಕ್ಸ್ ಕಡೆಗೂ ಗಮನ ನೀಡುವುದು ಅತ್ಯವಶ್ಯಕವಾಗಿದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.