ದೀಪಾವಳಿ ಸ್ಪೆಷಲ್ -ಪಪ್ಪಾಯ ಜೆಲ್ಲಿ ಕೇಕ್..!

Video Description

ದೀಪಾವಳಿಗಾಗಿ ಬಾಯಲ್ಲಿ ನೀರೂರಿಸುವ ಜೆಲ್ಲಿ ಕೇಕ್ ದೀಪಾವಳಿ ಸ್ಪೆಷಲ್ -ಪಪ್ಪಾಯ ಜೆಲ್ಲಿ ಕೇಕ್..! ದೀಪಗಳ ಹಬ್ಬ ದೀಪಾವಳಿಯಂದು ದೀಪ ಹಚ್ಚಿ ಪಟಾಕಿ ಹಚ್ಚಿ ಸಂಭ್ರಮಿಸಿ ಸಿಹಿ ತಿಂಡಿ ತಯಾರಿಸಿ ಬೆಳಕಿನ ಹಬ್ಬವನ್ನುಆಚರಿಸುವುದು ವಾಡಿಕೆ. ದೀಪಾವಳಿಯಂದು ಹೆಚ್ಚಿನ ಪ್ರಾಮುಖ್ಯತೆ ಇರುವುದು ಎಣ್ಣೆ ಹಚ್ಚಿ ಬಿಸಿ ನೀರಿನ ಸ್ನಾನ ಮಾಡುವುದಕ್ಕೆ. ದೂರದೂರಿನಲ್ಲಿ ಇರುವವರು ವಿಶೇಷವಾಗಿ ಈ ಹಬ್ಬದಂದು ಮನೆಗೆ ಆಗಮಿಸಿ ಮನೆಯವರೊಂದಿಗೆ ಕಲೆತು ಬೆರೆತು ಈ ಹಬ್ಬವನ್ನು ಆಚರಿಸುತ್ತಾರೆ. ರಾತ್ರಿಯೇ ಸ್ನಾನದ ಹಂಡೆಯನ್ನು ತೊಳೆದು ಅದಕ್ಕೆ ಪೂಜೆ ಮಾಡಿ ನೀರು ತುಂಬಿಸಿಡುತ್ತಾರೆ. ನಂತರ ಬಿಸಿ ನೀರಿನ ವ್ಯವಸ್ಥೆ ಮಾಡುತ್ತಾರೆ. ಮುಂಜಾನೆ ನಾಲ್ಕರ ಸುಮಾರಿಗೆ ಎದ್ದು ಅಮ್ಮನಿಂದ ಎಣ್ಣೆ ಹಚ್ಚಿಸಿಕೊಂಡು ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದಲೇ ಹಬ್ಬದ ತಯಾರಿ ಆರಂಭ. ಹೊಸ ಬಟ್ಟೆ ಹಾಕುವುದು ಮನೆಯಲ್ಲಿ ಎಲ್ಲರೊಂದಿಗೆ ಕಲೆತು ಮಾತನಾಡಿಕೊಂಡು ಹಬ್ಬದಡುಗೆ ಸವಿಯನ್ನು ಸವಿಯುವುದು ಎಂದರೆ ಅದೇನೋ ಹೊಸ ಆಹ್ಲಾದ ಮನಸ್ಸಿಗೆ. ದೀಪಾವಳಿ ಹಬ್ಬದಂದು ವಿಶೇಷ ಸಿಹಿ ತಿನಿಸುಗಳನ್ನು ಮಾಡುವುದು ವಾಡಿಕೆ. ನಮ್ಮ ಇಂದಿನ ಲೇಖನದಲ್ಲಿ ಪಪ್ಪಾಯದಿಂದ ಮಾಡಿದ ಜೆಲ್ಲಿ ಕೇಕ್ ರೆಸಿಪಿ ವಿಧಾನವನ್ನು ತಿಳಿಸಿಕೊಡುತ್ತಿದ್ದೇವೆ. ಇದನ್ನು ಕಡಿಮೆ ಸಮಯದಲ್ಲಿ ಮಾಡಬಹುದಾಗಿದ್ದು ನಿಮ್ಮ ಈ ಬಾರಿಯ ಹಬ್ಬದ ಕಳೆಯನ್ನು ಈ ಕೇಕ್ ರೆಸಿಪಿ ಹೆಚ್ಚಿಸುವುದು ಖಂಡಿತ. ಬೇಕಾಗುವ ಸಾಮಾಗ್ರಿಗಳು ಪಪ್ಪಾಯ ಜೂಸ್ 450 ಎಮ್‌ಎಲ್ ಹಾಲು 350 ಎಮ್ಎಲ್ ಕ್ಯಾಸ್ಟರ್ ಸಕ್ಕರೆ 60 ಗ್ರಾಮ್ ಅಗರ್ ಪೌಡರ್ 2+1/2 ಚಮಚ ಜೆಲ್ಲಿ ಪೌಡರ್ 1/4 ಚಮಚ ಮೊದಲಿಗೆ ಪಪ್ಪಾಯವನ್ನು ಚೆನ್ನಾಗಿ ಬೀಟ್ ಮಾಡಿ. 450 ಎಮ್‌ಎಲ್ ಅಳತೆ ಈ ಜ್ಯೂಸ್‌ನದ್ದಾಗಿರಲಿ. ಇದನ್ನು ಬೇಯಿಸಿಕೊಳ್ಳಿ. ಇದಕ್ಕೆ350 ಎಮ್‌ಎಲ್ ಹಾಲು ಸೇರಿಸಿಕೊಳ್ಳಿ. ಕ್ಯಾಸ್ಟರ್ ಸಕ್ಕರೆ ಮಿಶ್ರ ಮಾಡಿ ಮಂದ ಉರಿಯಲ್ಲಿ ಕಾಯಿಸಿಕೊಳ್ಳಿ. ಈಗ ಜೆಲ್ಲಿ ಪೌಡರ್ ಅನ್ನು ಅಳತೆ ತಕ್ಕಂತೆ ಮಿಶ್ರ ಮಾಡಿ. ಚೆನ್ನಾಗಿ 10 ನಿಮಿಷ ಮಿಶ್ರ ಮಾಡಿಕೊಳ್ಳಿ. ನಿಮ್ಮ ದೇಹಕ್ಕೆ ಮತ್ತು ತ್ವಚೆಗೆ ಪಪ್ಪಾಯ ಅತ್ಯಂತ ಒಳ್ಳೆಯದು. ಇದರೊಂದಿಗೆ ಹಾಲು ಇನ್ನಿತರ ಪದಾರ್ಥಗಳನ್ನು ಮಿಶ್ರ ಮಾಡುವುದರಿಂದ ಅವುಗಳ ಪ್ರಯೋಜನ ಕೂಡ ನಿಮ್ಮ ದೇಹಕ್ಕೆ ದೊರೆಯುತ್ತದೆ. ಈಗ ಈ ಮಿಶ್ರಣವನ್ನು ಇನ್ನೊಂದು ಪಾತ್ರೆಗೆ ಫಿಲ್ಟರ್ ಮಾಡಿಕೊಳ್ಳಬಹುದು. ಇದಕ್ಕೆ 1 ಚಮಚ ವೆನಿಲ್ಲಾ ಎಸೆನ್ಸ್ ಸೇರಿಸಿ ಮಿಶ್ರ ಮಾಡಿ. ಗ್ಯಾಸ್‌ನಲ್ಲಿ ಒಂದು ಪಾತ್ರೆ ಇಟ್ಟು 80 ಎಮ್‌ಎಲ್ ನೀರು ಹಾಕಿ ಕುದಿಯಲು ಬಿಡಿ ಈಗ ಜೆಲೆಟಿನ್ ಸೇರಿಸಿ. ಗ್ಯಾಸ್ ಆಫ್ ಮಾಡಿದ ನಂತರ ಜೆಲೆಟಿನ್ ನೀರಿಗೆ ಸೇರಿಸಿಕೊಂಡು ಅದನ್ನು ಮಿಶ್ರ ಮಾಡಿಕೊಳ್ಳಿ. ಈಗ ಜೆಲೆಟಿನ್ ಅನ್ನು ಪಪ್ಪಾಯ ಮಿಶ್ರಣಕ್ಕೆ ಸೇರಿಸಿ. ಈಗ ಇದನ್ನು ಫೈಬರ್ ಬೌಲ್‌ಗೆ ವರ್ಗಾಯಿಸಿ. ಒಂದು ಗಂಟೆ ಫ್ರೀಜ್ ಮಾಡಿ ಎರಡನೇ ಲೇಯರ್ ವೆನಿಲ್ಲಾ ಎಸೆನ್ಸ್ 1 ಚಮಚ ಕ್ಯಾಸ್ಟರ್ ಶುಗರ್ ಜೆಲ್ಲಿ ಪೌಡರ್ 1/4ಚಮಚ ಹಾಲು ಅರ್ಧ ಲೀಟರ್ ಮೊದಲಿಗೆ ಜೆಲಿಟನ್ ಅನ್ನು ತಯಾರಿಸಿ. ಹಾಲು ಬಿಸಿ ಮಾಡಿದ ನಂತರ ಇದಕ್ಕೆ ಕ್ಯಾಸ್ಟರ್ ಶುಗರ್ ಮತ್ತು ಜೆಲ್ಲಿ ಪೌಡರ್ ಸೇರಿಸಿ. ಹಾಲು ಚೆನ್ನಾಗಿ ಕುದಿದ ನಂತರ ಜೆಲಿಟನ್ ಅನ್ನು ಸೇರಿಸಿ. ಫ್ರೀಜರ್‌ನಲ್ಲಿಟ್ಟ ಪಪ್ಪಾಯ ಮಿಶ್ರಣಕ್ಕೆ ಇದನ್ನು ಸೇರಿಸಿ ಪುನಃ 1 ಗಂಟೆ ಫ್ರೀಜರ್‌ನಲ್ಲಿರಿಸಿ. 1 ಗಂಟೆಯ ನಂತರ ಪಪ್ಪಾಯ ಜೆಲ್ಲಿ ಕೇಕ್ ಸಿದ್ಧವಾಗಿರುತ್ತದೆ. ಅಲಂಕರಿಸಿ ಸರ್ವ್ ಮಾಡಿ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.