ಚಳಿಗಾಲದಲ್ಲಿ ಬರುವ ತಲೆಬುರುಡೆಯ ತುರಿಕೆಗೆ ಎಣ್ಣೆಗಳು..!

Video Description

ಚಳಿಗಾಲದಲ್ಲಿ ಬರುವ ತಲೆಬುರುಡೆಯ ತುರಿಕೆಗೆ ಎಣ್ಣೆಗಳು..! ಚಳಿಗಾಲದಲ್ಲಿ ತಲೆಬುರುಡೆಯ ತುರಿಕೆ ತುಂಬಾನೇ ಸಹಜ, ಇಂತಹ ಸಂದರ್ಭದಲ್ಲಿ ನಾನಾ ರೀತಿಯಾದ ಶ್ಯಾಂಪೂ, ಕಂಡೀಷನರ್ ಗಳ ಮೊರೆ ಹೋದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತೆ. ಯಾರ ಮುಂದೆ ಹೋಗೋದಕ್ಕೆ ಕೂಡ ಹೆದರುವ ಪರಿಸ್ಥಿತಿ ಸೃಷ್ಟಿಯಾಗುತ್ತೆ. ಇನ್ನು ತುರಿಕೆಯಿಂದ ಕೂದಲು ಉದುರುತ್ತದೆ. ಇಂತಹ ಸಮಸ್ಯೆಗಳಿಗೆ ಮನೆಮದ್ದುಗಳು ಅಂದರೆ ಮನೆಯಲ್ಲಿರುವ ಎಣ್ಣೆಗಳನ್ನು ಬಳಸಿ ಚಳಿಗಾಲದ ತಲೆಬುರುಡೆಯ ತುರಿಕೆ ಹೋಗಲಾಡಿಸುವುದು ಹೇಗೆ ಅಂತ ನೋಡೋಣ. ಮೂರು ಚಮಚದಷ್ಟು ತೆಂಗಿನ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ, ಇದಕ್ಕೆ ಕರಿಬೇವಿನ ಸೊಪ್ಪು, ಎರಡರಿಂದ ಮೂರು ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿ ಬೇಯಿಸಿ, ತಣ್ಣಗಾದನಂತರ ತುರಿಕೆ ಇರುವ ಜಾಗಕ್ಕೆ ಹಚ್ಚಿದರೆ ಚಳಿಗಾಲದ ತುರಿಕೆಯಿಂದ ಮುಕ್ತಿ ಪಡೆಯಬಹುದು. ಎರಡನೇ ವಿಧಾನ ಏನು ಅಂತ ತಿಳಿಯೋಣ ಒಂದು ಬಟ್ಟಲಲ್ಲಿ ಎರಡು ಸ್ಪೂನ್ ಕೊಬ್ಬರಿ ಎಣ್ಣೆ, 2 ಸ್ಪೂನ್ ಆಲಿವ್ ಆಯಿಲ್, ಎರಡು ಸ್ಪೂನ್ ಹರಳೆಣ್ಣೆ, 2 ಸ್ಪೂನ್ ಬಾದಾಮ್ ಆಯಿಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ತುರಿಕೆ ಇರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿಕೊಳ್ಳಿ 3ಗಂಟೆ ಬಿಟ್ಟ ಬಳಿಕ ತಲೆಯನ್ನು ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಚಳಿಗಾಲದಲ್ಲಿ ಉಂಟಾಗುವ ತುರಿಕೆಯಿಂದ ಮುಕ್ತಿ ಪಡೆಯಬಹುದು. ಹಾಗೂ ತಲೆಬುರುಡೆಯ ಆರೋಗ್ಯ ಕೂಡ ಹೆಚ್ಚಾಗುತ್ತದೆ.. ಇನ್ನು ತಲೆಬುರುಡೆಯಲ್ಲಿ ಉಂಟಾಗುವ ತುರಿಕೆ ಕಡಿಮೆ ಮಾಡಿಕೊಂಡು ಮತ್ತು ಪೋಷಣೆ ನೀಡುವಂತಹ ಮತ್ತೊಂದು ಎಣ್ಣೆ ಟ್ರೀ ಟ್ರೀ ಆಯಿಲ್ ಐದರಿಂದ ಏಳು ಹನಿ ಟ್ರೀ ಟ್ರೀ ಎಣ್ಣೆ ತೆಗೆದುಕೊಳ್ಳಿ ಮತ್ತು ಅದನ್ನು ನೇರವಾಗಿ ತಲೆಬುರುಡೆಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ತಲೆಗೆ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ತಲೆಬುರುಡೆಯಲ್ಲಿ ಮಾಯಿಶ್ಚರೈಸಿಂಗ್ ಇರುತ್ತೆ, ತುರಿಕೆ ಕಡಿಮೆಯಾಗುತ್ತೆ, ಬ್ಯಾಕ್ಟೀರಿಯಾ ಹಾಗೂ ಶಿಲೀಂದ್ರ ವಿರೋಧಿಯಾಗಿರುವ ಕಾರಣದಿಂದ ಎಣ್ಣೆ ಸೋಂಕನ್ನು ತಡೆಗಟ್ಟುತ್ತದೆ..

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.