ಆರೋಗ್ಯಕರ ಮೂಗುತಿ..!

Video Description

ಅಂದದ ಮೂಗಿಗೆ ಚೆಂದದ ಮೂಗುತಿ ಆರೋಗ್ಯಕರ ಮೂಗುತಿ..! ದೈನಂದಿನ ಜೀವನದಲ್ಲಿ ಅನೇಕ ಬಗೆಯ ಆಭರಣಗಳನ್ನು ಪ್ರತಿಯೊಬ್ಬ ಮಹಿಳೆಯೂ ಬಳಸುತ್ತಲೇ ಇರುತ್ತಾಳೆ. ಆಭರಣಗಳು ಫ್ಯಾಷನೇಬಲ್ ಆಗಿರಬೇಕೆಂಬುದು ಪ್ರತಿಯೊಬ್ಬರ ಬಯಕೆಯಾಗಿರುತ್ತದೆ. ಅಂತಹ ಆಭರಣಗಳಲ್ಲಿ ಮುಖದ ಅಂದವನ್ನು ಹೆಚ್ಚಿಸುವ ಆಭರಣಗಳಲ್ಲೊಂದು ಮೂಗುತಿ. ಈ ಮೂಗುತಿಯು ಕೇವಲ ಒಂದು ಫ್ಯಾಷನ್‌ ಆಭರಣವಾಗಿರದೆ ತನ್ನದೇ ಆದ ವೈಜ್ಞಾನಿಕವಾದ ಕಾರಣದಿಂದ ಆರೋಗ್ಯಕ್ಕೆ ಸಂಬಂಧಿಸಿದ ಮಹತ್ವವನ್ನು ಹೊಂದದೆ ಆಯುರ್ವೇದದ ಪ್ರಕಾರ ಮಹಿಳೆಯ ಎಡಮೂಗಿನ ಮೂಗುತಿಯ ರಂಧ್ರದ ಭಾಗವು ಮಹಿಳೆಯ ಗರ್ಭಕೋಶಕ್ಕೆ ಸಂಬಂಧಿಸಿರುವುದರಿಂದ ರೆಪೊ›ಡಕ್ಟೀವ್‌ ಸಿಸ್ಟಮ್ಮನ್ನು ಸೂಕ್ತವಾಗಿ ಕಾರ್ಯನಿರ್ವಹಿಸುವಲ್ಲಿ ಸಹಾಯಕ ಈ ಮೂಗುತಿಗಳು. ಮೂಗುತಿಗಳು ಅಥವಾ ನತ್ತುಗಳು ಮಹಿಳೆಯ ಶೃಂಗಾರಗಳಲ್ಲೊಂದಾಗಿದೆ. ಇವುಗಳು ಮೂಗಿನ ಅಂದವನ್ನು ಮತ್ತು ಮುಖದ ಅಂದವನ್ನು ಕೂಡ ಹೆಚ್ಚಿಸುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಇಂದಿನ ಕಾಲದಲ್ಲಿ ಮೂಗನ್ನು ಚುಚ್ಚಿಸಿಕೊಳ್ಳುವವರು ಕಡಿಮೆಯಾದರೂ ಕೂಡ ನಾನಾ ಮಾದರಿಗಳಲ್ಲಿ ದೊರೆಯುವ ಮೂಗುತಿಗಳನ್ನು ಧರಿಸಲು ಇಚ್ಛಿಸುತ್ತಾರೆ. ಅಂಥವರಿಗಾಗಿ ನೋಸ್‌ ರಿಂಗುಗಳು ಕ್ಲಿಪ್‌ ಮಾದರಿಯಲ್ಲಿಯೂ ದೊರೆಯುವುದರಿಂದ ಫ್ಯಾಷನ್‌ಪ್ರಿಯರ ಆಕರ್ಷಣೆಗೊಳಗಾಗುತ್ತದೆ ಈ ಬಗೆಯ ನೋಸ್‌ ರಿಂಗುಗಳು. ಕೇವಲ ಸಾಂಪ್ರದಾಯಿಕ ಆಭರಣವಾಗಿ ಬಳಸಲ್ಪಡುತ್ತಿದ್ದ ಈ ಮೂಗುತಿಗಳು ಕಾಲಕ್ರಮೇಣ ಟ್ರೆಂಡಿ ಆಭರಣವಾಗಿ ಪರಿಣಮಿಸಿ ಇಂದು ಹಲವು ಬಗೆಗಳಲ್ಲಿ ದೊರೆಯತೊಡಗಿವೆ. ಮೂಗುತಿಯನ್ನು ಧರಿಸುವುದರಿಂದ ಹೆಣ್ಣು ಮಕ್ಕಳು ಅಂದವಾಗಿ ಲಕ್ಷಣವಾಗಿ ಕಾಣಿಸುತ್ತಾರೆ. ಮೂಗುತಿ ಧರಿಸುವುದರಿಂದ ಮೂಗಿನ ಬಿಂದುವಿನ ಮೇಲೆ ಹೆಚ್ಚು ಒತ್ತಡವು ನಿರ್ಮಾಣವಾಗುತ್ತದೆ ಅದುದ್ದರಿಂದ ಅಲ್ಲಿ ಆಕ್ಯುಪ್ರೆಶರ್ ಉಂಟಾಗಿ ಅಲ್ಲಿನ ಕಪ್ಪು ಶಕ್ತಿಯು ಕಡಿಮೆಯಾಗುತ್ತದೆ. ಯಾವುದೇ ರೀತಿಯ ಕೆಟ್ಟ ಶಕ್ತಿಗಳಿಂದ ಉಸಿರಾಟದ ಮಾರ್ಗದಲ್ಲಿ ಹಲ್ಲೆಯಾಗದಂತೆ ಮೂಗುತಿಯು ನಮ್ಮ ಮೂಗು ಮತ್ತು ಶ್ವಾಸಮಾರ್ಗವನ್ನು ರಕ್ಷಿಸುತ್ತದೆ. ಮೂಗುತಿಯಲ್ಲಿರುವ ಸಾತ್ತ್ವಿಕತೆ ಮತ್ತು ಚೈತನ್ಯದಿಂದ ಮೂಗಿನ ಸುತ್ತಲೂ ಚೈತನ್ಯದ ವಲಯವು ನಿರ್ಮಾಣವಾಗುತ್ತದೆ. ಮೂಗಿನ ಸುತ್ತಲು ಇರುವ ವಾಯುಮಂಡಲವು ಶುದ್ಧವಾಗುತ್ತದೆ. ಇದರಿಂದ ಶ್ವಾಸಮಾರ್ಗದಿಂದ ಶುದ್ಧಗಾಳಿಯು ದೇಹವನ್ನು ಪ್ರವೇಶ ಮಾಡುತ್ತದೆ. ಇದರ ಜೊತೆಗೆ ಇನ್ನೊಂದು ಮುಖ್ಯವಾದ ವಿಷಯ ಇದೆ ಅದು ಏನೆಂದರೆ ಮೂಗುತಿಯನ್ನು ಕೇವಲ ಮಹಿಳೆಯರು ಮಾತ್ರ ಧರಿಸಬೇಕು ಎಂದು ನಮ್ಮ ಶಾಸ್ತ್ರ ಹೇಳುತ್ತದೆ ಅಲ್ಲವೇ ಇದು ಏಕೆ ಎಂದು ನೋಡುವುದಾದರೆ ಸ್ತ್ರೀಯರ ಮನಸ್ಸು ತುಂಬಾ ಬೇಗ ಹಾಗೂ ಹೆಚ್ಚಾಗಿ ಚಂಚಲತೆ ಒಳಗಾಗುತ್ತದೆ ಅದುದ್ದರಿಂದ ಮಹಿಳೆಯರು ಮೂಗುತಿಯನ್ನು ಧರಿಸುವುದರಿಂದ ಸ್ತ್ರೀಯರ ಚಂದ್ರನಾಡಿ ಕಾರ್ಯನಿರತವಾಗಿ ಮನಸ್ಸು ಸ್ಥಿರವಾಗುತ್ತದೆ. ಸ್ತ್ರೀಯರು ಯಾವುದೇ ಕಾರ್ಯವನ್ನು ಮಾಡುವಾಗ ಯೋಗ್ಯ ನಿರ್ಣಯ ತೆಗೆದುಕೊಳ್ಳಲು ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಮಹಿಳೆಯರು ಮಾತ್ರ ಮೂಗುತಿ ಧರಿಸಲು ಹೇಳಿದ್ದಾರೆ. ಮಹಿಳೆಯರು ಮೂಗುತಿಯನ್ನು ಧರಿಸುವುದರಿಂದ ಋತು ಚಕ್ರದ ಸಮಯದಲ್ಲಿ ಉಂಟಾಗುವ ನೋವುಗಳು ಕಡಿಮೆಯಾಗುತ್ತದೆ ಇದೆ ಕಾರಣಕ್ಕಾಗಿ ಹುಡುಗಿಯರು ಋತುಮತಿಯರಾಗುತ್ತಿದ್ದಂತೆ ಅವರಿಗೆ ಮೂಗುತಿ ಚುಚ್ಚಿಸುತ್ತಾರೆ. ಮಹಿಳೆಯರು ಮೂಗುತಿಯನ್ನು ಮೂಗಿನ ಎಡಭಾಗಕ್ಕೆ ಹಾಕಿಕೊಳ್ಳುತ್ತಾರೆ ಇದರ ಕಾರಣ ಏನು ಗೊತ್ತೇ. ಮಹಿಳೆಯರ ಗರ್ಭಕೋಶ ಮತ್ತಿತರ ಜನನಾಂಗಗಳಿಗೆ ಸಂಬಂಧಿಸಿದ ನರವು ಮೂಗಿನ ಎಡಭಾಗದೊಂದಿಗೆ ಸಂಬಂಧ ಹೊಂದಿರುತ್ತದೆ ಇದೆ ಕಾರಣದಿಂದಾಗಿ ಮೂಗುತಿಯನ್ನು ಎಡ ಭಾಗಕ್ಕೆ ಹಾಕಿಕೊಳ್ಳುತ್ತಾರೆ. ಜೊತೆಗೆ ಇದು ಮಹಿಳೆಯರ ಹೆರಿಗೆಯ ಸಮಯದಲ್ಲಿ ಅವರ ನೋವನ್ನು ಕಡಿಮೆ ಮಾಡಲು ಕೂಡ ತುಂಬಾ ಸಹಾಯ ಮಾಡುತ್ತದೆ. ಹಾಗಾಗಿ ಮಹಿಳೆಯರಿಗೆ ಮೂಗುತಿ ಅವರ ಅಂದವನ್ನು ಹೆಚ್ಚಿಸುವ ಜೊತೆಗೆ ಅವರ ಆರೋಗ್ಯವನ್ನು ಕೂಡ ಹತೋಟಿಯಲ್ಲಿ ಇಡುತ್ತದೆ ಹಾಗಾಗಿ ಮೂಗುತಿ ಧರಿಸಲು ಮೂಗು ಮುರಿಯುವ ಎಲ್ಲ ಮಹಿಳೆಯರು ತಪ್ಪದೆ ಮೂಗುತಿ ಧರಿಸಿ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.