ಸಾಸಿವೆ ಎಣ್ಣೆಯಿಂದ ನಿಮ್ಮ ಆರೋಗ್ಯದ ಮೇಲಾಗುವ ಲಾಭವೇನು..?

Video Description

ಸಾಸಿವೆ ಎಣ್ಣೆಯ ಹತ್ತು ಹಲವು ಆರೋಗ್ಯ ಪ್ರಯೋಜನಗಳು ಸಾಸಿವೆ ಎಣ್ಣೆಯಿಂದ ನಿಮ್ಮ ಆರೋಗ್ಯದ ಮೇಲಾಗುವ ಲಾಭವೇನು ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವ ಎಣ್ಣೆಯೆಂದರೆ ಸಾಸಿವೆ ಎಣ್ಣೆ. ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಹಾಗೂ ಕೆಲವು ಆರೋಗ್ಯ ಸುಧಾರಣೆಯ ಆರೈಕೆಯಲ್ಲಿ ಬಳಸುತ್ತಾರೆ. ಇದನ್ನು ವೈಜ್ಞಾನಿಕವಾಗಿ ಬ್ರಾಸಿಕಾ ಜುನ್ಸಿಕಾ ಎಂದು ಕರೆಯುವರು. ತೀಕ್ಷ್ಣವಾದ ಸುವಾಸನೆಯನ್ನು ಹೊಂದಿರುವ ಈ ಎಣ್ಣೆಯನ್ನು ಉಪ್ಪಿನಕಾಯಿ ತಯಾರಿ ಸೇರಿದಂತೆ ಇನ್ನಿತರ ಆಹಾರಪದಾರ್ಥಗಳು ಹಾಳಾಗದಂತೆ ಕಾಯ್ದಿರಿಸಲು ಸಹ ಬಳಸುತ್ತಾರೆ. ಅಲ್ಲದೆ ಕೆಲವು ಆರೋಗ್ಯ ಸಮಸ್ಯೆಗಳಿಗೆ ಇದರ ಲೇಪನ ಹಾಗೂ ಮಸಾಜ್ ಮೂಲಕ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಸಾಸಿವೆ ಎಣ್ಣೆಯ ಉಪಯೋಗಗಳು ಸಾಸಿವೆ ಬೀಜದಿಂದ ಪ್ರಾರಂಭಗೊಂಡು, ಎಣ್ಣೆಯ ರೂಪದಲ್ಲಿ ಮುಕ್ತಾಯಗೊಳ್ಳುತ್ತದೆ. ಸಾಸಿವೆ ಕಾಳಿನ ಮೂಲ ಗ್ರೀಸ್, ರೋಮ್ ಮತ್ತು ಭಾರತದ ಪ್ರಾಚೀನ ಸಂಸ್ಕೃತಿಯಷ್ಟು ಹಳೆಯದ್ದು. ಸುಮಾರು 1700 ದಶಕದ ಕಾಲಕ್ಕೆ ಸಾಸಿವೆ ಕಾಳಿನಿಂದ ಅದರ ಎಣ್ಣೆಯನ್ನು ಹಿಂಡಿ ತೆಗೆಯುವ ತಂತ್ರ ಬೆಳಕಿಗೆ ಬಂದಿದೆ. ಅದರ ನಂತರ, ಈ ಎಣ್ಣೆಯನ್ನು ವಿವಿಧ ಬಗೆಯ ಅಡುಗೆಗಳಲ್ಲಿ ಬಳಸಲಾಗುತ್ತಿದೆ. ಆಯುರ್ವೇದದ ಚಿಕಿತ್ಸಾ ವಿಧಾನದಲ್ಲಿ ಸಾಸಿವೆ ಎಣ್ಣೆ ಬಹಳ ಶ್ರೇಷ್ಠ ಸ್ಥಾನವನ್ನು ಪಡೆದುಕೊಂಡಿದೆ. ಮೈಕೈ ನೋವು ನಿವಾರಕವಾಗಿ, ಮಸಾಜ್ ಗಳಿಗೆ, ಸೌಂದರ್ಯ ವರ್ಧಕ ಉತ್ಪನ್ನವನ್ನಾಗಿಯೂ ಸಹ ಉಪಯೋಗಿಸುತ್ತಾರೆ. ಸಮೃದ್ಧವಾದ ವಿಟಮಿನ್‌ಗಳು ಮತ್ತು ಪೋಷಕಾಂಶಗಳನ್ನು ಒಳಗೊಂಡಿರುವ ಈ ಎಣ್ಣೆ ಆಂತರಿಕವಾಗಿ ಹಾಗೂ ಬಾಹ್ಯ ಆರೋಗ್ಯಕ್ಕೆ ಅತ್ಯುತ್ತಮ ದಿವ್ಯ ಔಷಧಿಯಾಗಿ ಕಾರ್ಯ ನಿರ್ವಹಿಸುತ್ತದೆ. ಸಾಸಿವೆ ಎಣ್ಣೆಯು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರಲ್ಲಿ ಮತ್ತು ಉತ್ತಮ ಕೊಲೆಸ್ಟರಾಲ್ ಅನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಏಕೆಂದರೆ ಇದು ಅಸಂಘಟಿತ ಕೊಬ್ಬುಗಳು ಮತ್ತು ಬಹುಅಪರ್ಯಾಪ್ತ ಕೊಬ್ಬುಗಳಲ್ಲಿ ಸಮೃದ್ಧವಾಗಿದೆ ಎಂದು ಹೇಳಲಾಗುತ್ತದೆ. ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳನ್ನು ಸಹ ಒಳಗೊಂಡಿದೆ. ಇದು ಆರೋಗ್ಯಕರ ಹೃದಯ ಮತ್ತು ರಕ್ತನಾಳಗಳ ಸ್ಥಿತಿ ಸ್ಥಾಪಕತ್ವವನ್ನು ಕಾಪಾಡುತ್ತದೆ. ಸಾಸಿವೆ ಎಣ್ಣೆಯಲ್ಲಿ ಕ್ಯಾನ್ಸರ್ ತಡೆಗಟ್ಟುವ ಗುಣಲಕ್ಷಣಗಳಿವೆ ಎಂದು ಅಧ್ಯಯನಗಳು ತೋರಿಸಿವೆ. ಸಾಸಿವೆ ತೈಲದ ಬಳಕೆಯಿಂದ ಹೊಟ್ಟೆ ಮತ್ತು ಕೊಲೊನ್ ಕ್ಯಾನ್ಸರ್ ತಡೆಯಬಹುದು. ತೈಲದಲ್ಲಿ ಕಂಡುಬರುವ ಗ್ಲುಕೋಸಿನೋಲೇಟ್, ಕ್ಯಾನ್ಸರ್ ಮತ್ತು ಗೆಡ್ಡೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಸಂಧಿ ನೋವು ಮತ್ತು ಊತವನ್ನು ಸರಾಗಗೊಳಿಸುವಲ್ಲಿ ಸಾಸಿವೆ ತೈಲ ಬಹು ಉಪಯೋಗಿ. ಇದು ಉರಿಯೂತ ಹಾಗೂ ಸಂಧಿವಾತಗಳಿಗೆ ಉತ್ತಮ ರೀತಿಯಲ್ಲಿ ಆರೈಕೆ ಮಾಡುವುದು.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.