ಇದು ಕರಾವಳಿಯ ಸ್ವರ್ಗ..!

Video Description

ಕರಾವಳಿಯ ಸ್ವರ್ಗವೆಂದು ಮುರುಡೇಶ್ವರವನ್ನು ಏಕೆ ಕರೆಯುತ್ತಾರೆ? ಇದು ಕರಾವಳಿಯ ಸ್ವರ್ಗ..! ಮುರುಡೇಶ್ವರ...!!!! ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿದೆ. ಇಲ್ಲಿರುವ ಮುರುಡೇಶ್ವರ ಸ್ವಾಮಿಯ ದೇವಸ್ಥಾನವು ಧಾರ್ಮಿಕ ಪುಣ್ಯ ಸ್ಠಳವಾಗಿದ್ದು, ಐತಿಹಾಸಿಕವಾಗಿ ಪ್ರಖ್ಯಾತಿಯನ್ನು ಹೊಂದಿದೆ. ಅರಬ್ಬೀ ಸಮುದ್ರದ ತೀರದಲ್ಲಿರುವ ಈ ಊರು, ಪ್ರಪಂಚದ ಅತ್ಯಂತ ಎತ್ತರದ ಶಿವನ ವಿಗ್ರಹಕ್ಕೆ ಹೆಸರುವಾಸಿ ಯಾಗಿದೆ. ಮುರುಡೇಶ್ವರ ಕೇವಲ ಧಾರ್ಮಿಕ ಕ್ಷೇತ್ರ ಮಾತ್ರವಲ್ಲ, ಪ್ರವಾಸಿ ತಾಣವೂ ಆಗಿದೆ. ಮುರುಡೇಶ್ವರ ಕರ್ನಾಟಕ ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡದ ಭಟ್ಕಳ ತಾಲೂಕಿನ ಒಂದು ಪುಣ್ಯ ಕ್ಷೇತ್ರ. ಮುರುಡೇಶ್ವರದಲ್ಲಿ ಶಿವನ ಲಿಂಗವಿದ್ದು, ಜೊತೆಗೆ ಏಷ್ಯಾದಲ್ಲಿಯೆ ೨ನೇ ಎತ್ತರದ ಶಿವನ ಪ್ರತಿಮೆ ಇದೆ ಮತ್ತು ಜಗತ್ತಿನಲ್ಲಿಯೇ ಅತಿ ಎತ್ತರವಾದ ರಾಜ ಗೋಪುರವಿದೆ. ಇದು ಧಾರ್ಮಿಕರನ್ನಷ್ಟೇ ತನ್ನತ್ತ ಸೆಳೆಯದೆ ವಿಹಾರಿಗಳನ್ನೂ ಆಕರ್ಷಿಸುತ್ತಿದೆ. ಇತ್ತೀಚೆಗೆ ಇಲ್ಲಿ ರಾಮ, ಲಕ್ಷ್ಮಣ ಮತ್ತು ಸೀತಾ ಪ್ರತಿಮೆಯ ರಾಮಮಂದಿರವನ್ನು ಮತ್ತು ಶನಿ ದೇವಾಲಯವನ್ನು ಮಾಡಲಾಗಿದೆ. ಇಲ್ಲಿನ ಸಮುದ್ರದಲ್ಲಿ ಜಲ ಕ್ರೀಡೆ ಆಡುವುದೆ ಒಂದು ಅನನ್ಯ ಅನುಭವ. ರಾಷ್ಟ್ರೀಯ ಹೆದ್ದಾರಿಯಿಂದ ಊರನ್ನು ಪ್ರವೇಶಿಸುವಾಗ ಮಹಾದ್ವಾರವು ಕಲಾತ್ಮಕವಾಗಿದ್ದು ದೇವಾಲಯದ ಬಳಿಸಾರಿದಂತೆ ಎರಡು ಆನೆಗಳು ಪ್ರವಾಸಿಗರ ಮನ ಸೆಳೆಯುತ್ತವೆ. ಗೋಕರ್ಣದ ಆತ್ಮಲಿಂಗ ಸ್ಥಾಪನೆಯಾದಾಗಲೇ ರಾವಣನಿಂದಲೆ ಇನ್ನು ನಾಲ್ಕು ಲಿಂಗಗಳು ಈ ಜಿಲ್ಲೆಯಲ್ಲಿ ಸ್ಥಾಪಿಸಲ್ಪಟ್ಟವು ಎಂಬುದು ಪುರಾಣದ ಕತೆ. ಇನ್ನಿತರ ನಾಲ್ಕು ಕ್ಷೇತ್ರ ಗಳೆಂದರೆ ಮುರುಡೇಶ್ವರ, ಗುಣವಂತೇಶ್ವರ, ಧಾರೇಶ್ವರ ಮತ್ತು ಸಜ್ಜೇಶ್ವರ. ಮುರ್ಡೇಶ್ವರವು ಕಡಲದಂಡೆಯಲ್ಲಿದ್ದು ಪ್ರಾಚೀನಕಾಲದಿಂದಲೂ ಧಾರ್ಮಿಕತೆ ಹಾಗೂ ಐತಿಹಾಸಿಕ ತೆಗಳ ಪ್ರಸಿದ್ಧ ತಾಣವಾಗಿತ್ತು. ಅಂತೆಯೆ ಇಂದಿಗೂ ಅಲ್ಲಿ ಹಾಡುವಳ್ಳಿಯ ಸಾಳ್ವ ದೊರೆಗಳು ನಿರ್ಮಿಸಿದ ಬಸದಿ, ತೀರ್ಥಂಕರರ ಮೂರ್ತಿಗಳು, ಹಲವು ದೇವಾಲಯಗಳು, ಕೆರೆ, ವೀರರ ಮನೆ, ವೀರಗಲ್ಲು ಗಳು, ಮರದಿಂದ ತಯಾರಿಸಿದ ೧೬ ಮಾಸತಿಯರ ಕುರುಹುಗಳು, ಇವೆಲ್ಲಕ್ಕೂ ಕಿರೀಟವಿಟ್ಟಂತೆ ಸುಂದರ ನೆಲೆಯಲ್ಲಿ ಶೋಭಿಸುತ್ತಿರುವ ಮುರುಡೇಶ್ವರ ದೇವಾಲಯ ಹಾಗೂ ಹಳೆಯ ದೇವಾಲಯಗಳ ಅವಶೇಷಗಳನ್ನೆಲ್ಲ ಕಾಣಬಹುದು. ಒಂದೆಡೆ ಎತ್ತರದ ಗೋಪುರ, ಇನ್ನೊಂದೆಡೆ ಬೃಹತ್ತಾದ ಭವ್ಯವಾದ ಶಿವನ ಪ್ರತಿಮೆ ಅದೂ ಕೂಡ ಕಡಲ ತೀರವಿರುವ ಪ್ರದೇಶದಲ್ಲಿ....ಅಬ್ಬಾ, ಬಯಸಿದ್ದಕ್ಕಿಂತ ಹೆಚ್ಚೇ ಇರುವ ಈ ಸ್ಥಳಕ್ಕೆ ಭೇಟಿ ನೀಡದೆ ಇರುವುದಾದರೂ ಹೇಗೆ? ಹಾಗಾಗಿ ಈ ತಾಣಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುವುದು ಸಾಮಾನ್ಯ. ಆದರೆ ಗಮನದಲ್ಲಿಡಬೇಕಾದ ಒಂದು ಸಂಗತಿ ಎಂದರೆ ಮುರುಡೇಶ್ವರ ಕಡಲ ತೀರವು ಅಪಾರವಾದ ಸಂಖ್ಯೆಯಲ್ಲಿ ಏಡಿಗಳಿಂದ ತುಂಬಿದ್ದು ಎಚ್ಚರವಹಿಸುವುದು ಅಗತ್ಯವಾಗಿದೆ. ಮುರುಡೇಶ್ವರವು ಬೆಂಗಳೂರಿನಿಂದ 465 ಕಿ.ಮೀ ಗಳಷ್ಟು ದೂರವಿದ್ದು ರೈಲು ಹಾಗೂ ಬಸ್ಸಿನ ಮೂಲಕ ಸುಲಭವಾಗಿ ತೆರಳಬಹುದಾಗಿದೆ. ಆದರೆ ಮಂಗಳೂರು ಹಾಗೂ ಮುಂಬೈನ ಕೆಲವು ನಿಗದಿತ ರೈಲುಗಳು ಮಾತ್ರ ಮುರುಡೇಶ್ವರ ರೈಲು ನಿಲ್ದಾಣದಲ್ಲಿ ನಿಲುಗಡೆ ಹೊಂದಿದ್ದು, ಇತರೆಡೆಯಿಂದ ತೆರಳಬೇಕೆಂದರೆ ಮೊದಲು ಮಂಗಳೂರಿಗೆ ತೆರಳಿ ಅಲ್ಲಿಂದ ಮುರುಡೇಶ್ವರಕ್ಕೆ ತಲುಪಬಹುದು. ಮಂಗಳೂರು ಹತ್ತಿರದ ರೈಲು ನಿಲ್ದಾಣವಾಗಿದೆ. ಅಲ್ಲದೆ ಬಸ್ಸುಗಳು ಮಂಗಳೂರು ಸೇರಿದಂತೆ ಬೆಂಗಳೂರಿನಿಂದಲೂ ಸಹ ಮುರುಡೇಶ್ವರಕ್ಕೆ ದೊರೆಯುತ್ತವೆ.

@@include("partials/call_to_action.html") @@include("partials/footer.html") @@include("partials/base_scripts.html")