ನೇಲ್ ಪಾಲಿಶ್ ರಿಮೂವರ್ ಹೇಗೆಲ್ಲಾ ಉಪಯೋಗವಾಗುತ್ತೆ ಗೊತ್ತಾ..?

Video Description

ನೇಲ್ ಪಾಲಿಶ್ ರಿಮೂವರ್ ಬರೇ ನೇಲ್ ಪೇಂಟ್ ತೆಗೆಯಲು ಮಾತ್ರವಲ್ಲ ನೇಲ್ ಪಾಲಿಶ್ ರಿಮೂವರ್ ಹೇಗೆಲ್ಲಾ ಉಪಯೋಗವಾಗುತ್ತೆ ಗೊತ್ತಾ..? ಕೈಗಳ ಸೌಂದರ್ಯ ಹೆಚ್ಚಾಗಬೇಕೆಂದರೆ ಉದ್ದವಾದ ಉಗುರು, ಅದಕ್ಕೆ ಸೂಕ್ತವಾದ ಆಕಾರ, ಉಡುಗೆಗೆ ಹೋಲುವ ಬಣ್ಣಗಳಿಂದ ಅಲಂಕಾರ ಮಾಡಿದರೆ ಅದರ ಸೊಬಗೆ ಬೇರೆ. ಸಾಮಾನ್ಯವಾಗಿ ಅನೇಕ ಮಹಿಳೆಯರು ತಮ್ಮ ಕೈ ಉಗುರು ಸುಂದರವಾಗಿ ಕಾಣಿಸಬೇಕೆಂದು ಬಯಸುತ್ತಾರೆ. ಅದಕ್ಕೆ ವಿವಿಧ ಬಗೆಯ ಬಣ್ಣಗಳಿಂದ ಅಲಂಕಾರಗೊಳಿಸುವುದು ಎಂದರೆ ಅದೇನೋ ಒಂದು ರೀತಿಯ ಖುಷಿ ಹಾಗೂ ಉತ್ಸಾಹ. ಉಗುರಿಗೆ ಹಚ್ಚಿದ ನೇಲ್ ಪೇಂಟ್ ಅನ್ನು ತೆಗೆಯಲು ನೇಲ್ ಪಾಲಿಶ್ ರಿಮೂವರ್ ಬೇಕೇ ಬೇಕು. ಆದರೆ ಬರಿ ಉಗುರಿನ ಬಣ್ಣವನ್ನು ತೆಗೆಯಲು ಮಾತ್ರವಲ್ಲದೆ ಈ ರಿಮೂವರ್‌ನ ಬಳಕೆಯನ್ನು ನಮ್ಮ ದೈನಂದಿನ ಜೀವನದಲ್ಲಿ ಕೂಡ ಮಾಡಬಹುದು ಎಂಬುದು ನಿಮಗೆ ಗೊತ್ತೇ? ಬಟ್ಟೆಯ ಶಾಯಿ ಕಲೆ ಹೋಗಲಾಡಿಸಲು ರಿಮೂವರ್ ಬಳಸಬಹುದು. ಕಲೆಯಾದ ಜಾಗಕ್ಕೆ ರಿಮೂವರ್ ಹಚ್ಚಿ ನಂತರ ಸೋಪಿನಿಂದ ತೊಳೆಯಬೇಕು. ಬಟ್ಟೆಯ ಮೇಲೆ ಮಾತ್ರವಲ್ಲದೆ ನೆಲದ ಮೇಲೆ ಇರುವ ಕಲೆಯನ್ನು ನಿವಾರಿಸಲು ಕೂಡ ರಿಮೂವರ್ ಬಳಸಬಹುದಾಗಿದೆ. ನೇಲ್ ಪಾಲಿಶ್ ರಿಮೂವರ್ ಹಾಕಿ ಕಲೆಯಾದ ಜಾಗದಲ್ಲಿ ತಿಕ್ಕಿದರೆ ಆಯಿತು ಇದರಿಂದ ಕಲೆ ಮಾಯವಾಗುತ್ತದೆ. ಲೆದರ್ ಶೂಗಳನ್ನು ಸ್ವಚ್ಛ ಮಾಡಲು ಕೂಡ ನೀವು ರಿಮೂವರ್ ಬಳಸಬಹುದು. ಲೆದರ್ ಶೂವಿನ ಮೇಲೆ ಇರುವ ಕಲೆ ಹೋಗಲಾಡಿಸಲು ನೀವು ರಿಮೂವರ್ ಬಳಸಬಹುದು. ಫೆವಿಕ್ವಿಕ್ ಹಚ್ಚುವಾಗ ಕೈಗೆ ಅಂಟಿಕೊಳ್ಳುತ್ತದೆ. ಅಂಟಿಕೊಂಡ ಫೆವಿಕ್ವಿಕ್ ತೆಗೆಯಲು ರಿಮೂವರ್ ಬಳಸಬಹುದಾಗಿದೆ. ಲೋಹದ ಸ್ಟಿಕ್ಕರ್ ತೆಗೆಯುವುದು ಸುಲಭವಲ್ಲ. ಒಂದು ವೇಳೆ ಸ್ಟಿಕ್ಕರ್ ಸುಲಭವಾಗಿ ಬಂದ್ರೂ ಅದರ ಕಲೆ ಹಾಗೆ ಉಳಿದುಬಿಡುತ್ತದೆ. ಆಗ ನೇಲ್ ಪಾಲಿಶ್ ರಿಮೂವರ್ ಬಳಸಿದ್ರೆ ಕಲೆ ಸುಲಭವಾಗಿ ಹೋಗುತ್ತದೆ. ಇನ್ನು ನಿಮ್ಮ ಶೂಗಳನ್ನು ಫಳಫಳನೆ ಹೊಳೆಯುವಂತೆ ಮಾಡಬೇಕು ಎಂದಾದಲ್ಲಿ ರಿಮೂವರ್ ಬಳಕೆಯನ್ನು ಮಾಡಬಹುದು. ನಿಮ್ಮ ಟಿ ಕಪ್‌ಗಳಲ್ಲಿ ಟಿ ಕಲೆ ಹೋಗುತ್ತಿಲ್ಲ ಎಂದಾದಲ್ಲಿ ರಿಮೂವರ್‌ನಲ್ಲಿ ಹತ್ತಿಯ ಬಟ್ಟೆಯನ್ನು ಅದ್ದಿ ನಂತರ ಕಪ್‌ ಅನ್ನು ತಿಕ್ಕಿ ಆಮೇಲೆ ಸಾದಾ ನೀರಿನಿಂದ ಕಪ್‌ಗಳನ್ನು ತೊಳೆಯಿರಿ. ಮಾರ್ಕರ್ ಕಲೆಗಳನ್ನು ಹೋಗಲಾಡಿಸಲು ರಿಮೂವರ್‌ಗೆ ಕಾಟನ್ ಅದ್ದಿ ಕಲೆಯನ್ನು ನಿವಾರಿಸಿ. ದುಬಾರಿ ರೇಜರ್ ಬ್ಲೇಡ್‌ಗಳ ಕಲೆ ನಿವಾರಿಸಲು ರಿಮೂವರ್‌ನಲ್ಲಿ ಬ್ಲೇಡ್‌ಗಳನ್ನು ಅದ್ದಿದರೆ ಆಯಿತು. ನಂತರ ಒಣ ಬಟ್ಟೆಯಿಂದ ಅದನ್ನು ಒರೆಸಿ. ಕಿಟಕಿಯ ಗಾಜಿನ ಕಲೆಗಳನ್ನು ನಿವಾರಿಸಲು ರಿಮೂವರ್‌ನ ಬಳಕೆಯನ್ನು ಮಾಡಬಹುದಾಗಿದೆ. ರಿಮೂವರ್‌ನಿಂದ ಗಾಜನ್ನು ಒರೆಸಿ ಸ್ವಲ್ಪ ಕಾಲ ಹಾಗೆಯೇ ಬಿಡಿ. ನಂತರ ಸ್ವಚ್ಛ ಬಟ್ಟೆಯಿಂದ ಗಾಜನ್ನು ಒರೆಸಿ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.