ಕಾಟನ್ ಹೇಗೆಲ್ಲಾ ಬಳಕೆ ಮಾಡಬಹುದು ಗೊತ್ತಾ..?

Video Description

ಮನೆಯಲ್ಲಿ ಹತ್ತಿಯನ್ನು ಹೇಗೆ ಬಳಸಬಹುದು? ಕಾಟನ್ ಹೇಗೆಲ್ಲಾ ಬಳಕೆ ಮಾಡಬಹುದು ಗೊತ್ತಾ..? ಮನೆಯಲ್ಲಿ ಒಂದಿಷ್ಟು ಹತ್ತಿ ಇರಲೇಬೇಕು. ಹತ್ತಿಯ ಬಳಕೆಯನ್ನು ಬರಿಯ ಬಟ್ಟೆಯಾಗಿ ಮಾತ್ರವಲ್ಲದೆ ನಮ್ಮ ದೈನಂದಿನ ಜೀವನದಲ್ಲಿ ಕೂಡ ಬಳಸಬಹುದಾಗಿದೆ. ನಮ್ಮ ಇಂದಿನ ಲೇಖನದಲ್ಲಿ ಹತ್ತಿಯ ಬಳಕೆಯ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಅರಿಯೋಣ. ಹತ್ತಿ ಬಟ್ಟೆಗಳು ನಮಗೆ ಅನುಕೂಲಕರವಾಗಿದ್ದು ಬೇಸಿಗೆ ಸಮಯದಲ್ಲಿ ಆರಾಮದಾಯಕವಾಗಿರುತ್ತದೆ. ಅದೂ ಅಲ್ಲದೆ ಹತ್ತಿ ಬಟ್ಟೆಗಳನ್ನು ತೊಳೆಯುವುದೂ ತುಂಬಾ ಸುಲಭ. ಒಂದು ತುಂಡು ಹತ್ತಿ ಮನೆಯಲ್ಲಿದ್ದರೆ ಏನೆಲ್ಲಾ ಲಾಭ ಪಡೆಯಬಹುದು ಎಂಬುದನ್ನು ನೋಡೋಣ. ಹತ್ತಿಯ ಬಿಲ್ಲೆಗಳಿಂದ ಮುಖ ಕ್ಲೀನ್ ಮಾಡಲು ಹೌದು ಹತ್ತಿ ಬಿಲ್ಲೆಗಳನ್ನು ಬಳಸಿ ನಿಮ್ಮ ಮುಖದ ಮೇಕಪ್ ಅನ್ನು ಸುಲಭವಾಗಿ ನಿವಾರಿಸಬಹುದಾಗಿದೆ. ಮುಖವನ್ನು ಮೃದುವಾಗಿ ಇದು ಮಸಾಜ್‌ನಂತೆ ಮಾಡುವುದರಿಂದ ರಕ್ತಪರಿಚನೆ ಕೂಡ ಉಂಟಾಗುತ್ತದೆ. ಕನ್ನಡಿ ಕ್ಲೀನ್ ಮಾಡಲು ಮನೆಯಲ್ಲಿರುವ ಕನ್ನಡಿ ಕೊಳಕಾಗಿದೆ ಎಂದಾದಲ್ಲಿ ಹತ್ತಿ ತುಂಡನ್ನು ತೆಗೆದುಕೊಂಡು ಸುಮ್ಮನೆ ಒಮ್ಮೆ ಒರೆಸಿ. ಕನ್ನಡಿ ಫಳ ಫಳನೆ ಹೊಳೆಯುವುದನ್ನು ನೀವು ನೋಡಬಹುದು. ಶೂಗಳು ವಾಸನೆ ಬರುತ್ತಿದ್ದರೆ ಇನ್ನು ಶೂಗಳು ಒದ್ದೆಯಾದರೆ ಅಥವಾ ಕಾಲುಗಳ ಬೆವರಿನಿಂದ ಶೂ ವಾಸನೆ ಬರುತ್ತಿದ್ದಲ್ಲಿ ಹತ್ತಿಯ ತುಂಡಿಗೆ ಸುಗಂಧ ದ್ರವ್ಯಗಳನ್ನು ಪೂಸಿ ಶೂವಿನ ಒಳಗೆ ಇಡಿ ಇದರಿಂದ ಶೂಗಳು ಬೀರುವ ಕೆಟ್ಟ ವಾಸನೆ ಮುಕ್ತಾಯವಾಗುತ್ತದೆ ಹಾಲುಣಿಸುವ ತಾಯಂದಿರಿಗೆ ಹಾಲುಣಿಸುವ ತಾಯಂದಿರು ಬ್ರೆಸ್ಟ್ ಪ್ಯಾಡ್‌ಗೆ ಬದಲಾಗಿ ಹತ್ತಿಯನ್ನು ಬಳಸಬಹುದು ಕೂದಲಿನ ಜಿಡ್ಡಿಗೆ ಕೂದಲು ಜಿಡ್ಡಾಗಿದೆ ಎಂದಾದಲ್ಲಿ ಹತ್ತಿಯನ್ನು ಬಳಸಿಕೊಂಡು ಕೂದಲನ್ನು ಒಮ್ಮೆ ಉಜ್ಜಿಕೊಳ್ಳಿ. ಇದರಿಂದ ತಲೆಯ ಜಿಡ್ಡು ದೂರಾಗುತ್ತದೆ ಮತ್ತು ಜಿಡ್ಡಿನಂಶ ದೂರಾಗಿ ಕೂದಲು ತಾಜಾವಾಗುತ್ತದೆ ಕಣ್ಣಿನ ಒತ್ತಡ ನಿವಾರಿಸಲು ಹತ್ತಿ ತುಂಡನ್ನು ಫ್ರಿಜ್‌ನಲ್ಲಿಟ್ಟು ನಂತರ ಇದನ್ನು ಕಣ್ಣಿನ ಮೇಲೆ ಇರಿಸುವುದರಿಂದ ಕಣ್ಣಿನ ಉರಿ ಕಣ್ಣು ಭಾರವಾಗುವುದು ಕಡಿಮೆಯಾಗುತ್ತದೆ ಗೋಡೆಯ ಬಟ್ಟೆಯ ಮೇಲಿನ ಕಲೆ ನಿವಾರಿಸಲು ಗೋಡೆಯ ಮೇಲೆ ಬಟ್ಟೆಯ ಮೇಲೆ ಕಲೆ ಇದ್ದಲ್ಲಿ ಹತ್ತಿಯನ್ನು ಬಳಸಿ ಈ ಕಲೆಗಳನ್ನು ನೀವು ನಿವಾರಿಸಬಹುದಾಗಿದೆ. ಅದೂ ಅಲ್ಲದೆ ಹೆಚ್ಚಿನ ನಾಜೂಕು ಕೆಲಸಗಳಲ್ಲಿ ಹತ್ತಿ ಬಳಕೆಗೆ ಬರುತ್ತದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.