ತುಳುನಾಡಿನ ಬಂಗಾರ ಅದು- ಹಿಂಗಾರ..!

Video Description

ತುಳುನಾಡಿನ ಬಂಗಾರ ಅದು- ಹಿಂಗಾರ..! ಹಿಂಗಾರ ತುಳುನಾಡಿನಲ್ಲಿ ಏಕೆ ಪ್ರಸಿದ್ಧ ಹಿಂಗಾರಕ್ಕೆ ತುಳುನಾಡಿನಲ್ಲಿ ಹೆಚ್ಚು ಮಹತ್ವವಿದೆ ಯಾವುದೇ ದೈವ ಕಾರ್ಯ , ನಾಗರಾಧನೆ, ಪೂಜೆಗಳಲ್ಲಿ ಹಿಂಗಾರಕ್ಕೆ ಇರುವ ಬೆಲೆ ಬೇರೆ ಯಾವ ಹೂವಿಗೂ ಇಲ್ಲ ಅಂದರೆ ತಪ್ಪಿಲ್ಲ. ಅಡಿಕೆ ಹೂವನ್ನು ಕನ್ನಡದಲ್ಲಿ ಹಿಂಗಾರವೆಂದು ಕರೆದರೆ ತುಳುವಿನಲ್ಲಿ ಪಿಂಗಾರ ಎಂದು ಪ್ರಸಿದ್ಧಿ ಪಡೆದಿದೆ. ದೈವರಾಧನೆ ಹಾಗೂ ನಾಗರಾಧನೆಯಲ್ಲಿ ಹಿಂಗಾರದ್ದೆ ಮೆಲುಗೈ ಹೌದು ತುಳುನಾಡಿನ ಸಂಸ್ಕೃತಿಗೆ ದೈವರಾಧನೆ,ನಾಗರಾಧನೆಯಲ್ಲಿ ಹಿಂಗಾರಕ್ಕೆ ಹೆಚ್ಚು ಮಹತ್ವ ಪಡೆದಿದೆ. ಆಕಾಶದೆತ್ತರಕ್ಕೆ ಬೆಳೆದು ಸೂರ್ಯನ ಕಿರಣವು ಸ್ವರ್ಶಿಸುವ ಮುನ್ನ ಅಂದರೆ ಹಿಂಗಾರ ಕವಲೆಯೊಡೆಯುವ ಮುನ್ನ ದೈವ ದೇವರಿಗೆ ಅರ್ಪಿತವಾಗ ಬೇಕು.ಇಲ್ಲವಾದರೆ ಅದು ಪೂಜೆಗೆ ಆರ್ಹವಲ್ಲ ಅನ್ನುವುದು ವಾಡಿಕೆ. ದೈವರಾಧನೆಯಲ್ಲಿ ಮಲ್ಲಿಗೆ ಹೂವಿನ ಜೊತೆ ಹಿಂಗಾರ ಹೂವಿನ ಅಲಂಕಾರ ನೋಡುವುದೇ ಒಂದು ಹಬ್ಬ. ನಾಗರಾಧನೆಯಲ್ಲಿ ಹಿಂಗಾರದ ಸುರಿಮಳೆಯನ್ನೆ ಸುರಿದಷ್ಟು ಸ್ವೀಕರಿಸುವ ನಾಗದೇವರು ಸಂತೋಷವಾಗುತ್ತಾರೆ. ದೇವಸ್ಥಾನದಲ್ಲಿ ಗಂಧ ಪ್ರಸಾದದ ಜೊತೆ ಹಿಂಗಾರ ಹೂವಿನ ಪ್ರಸಾದ ಹೆಚ್ಚು ಮಹತ್ವ ಪಡೆದಿದೆ. ಹಿಂಗಾರವನ್ನು ಬಾಳೆಯ ನಾರಿನಲ್ಲಿ ನೇಯ್ದು ದಾರವನ್ನೂ ತಯಾರಿಸುತ್ತಾರೆ ಮುಖ್ಯವಾಗಿ ಸೀಮಂತದಲ್ಲಿ ಹಾಳೆಯ ಸಮೇತ ಮಡಿಲಿಗೆ ತುಂಬಿಸುತ್ತಾರೆ.ಸೀಮಂತಕ್ಕೆ ಬಂದ ಎಲ್ಲಾ ಮುತೈದೆಯರಿಗೂ ಹಿಂಗಾರವನ್ನು ನೀಡುತ್ತಾರೆ. ಹಿಂಗಾರವನ್ನು ಮುಡಿದ ಮುತೈದೆಯರು ಸೀಮಂತಕ್ಕೆ ಹೋಗಿದ್ದಾರೆ ಎಂದು ಮೊದಲು ಅರ್ಥಮಾಡಿಕೊಳ್ಳಲಾಗುತ್ತಿತ್ತು. ದೇವಸ್ಥಾನಗಳ ಅಲಂಕಾರದಲ್ಲಿ ಹೆಚ್ಚಾಗಿ ಬಳಸುವ ಹಿಂಗಾರದ ಮಹತ್ವ ಈಗೀನ ಪೀಳಿಗೆಗೆ ತಿಳಿದಿರುವುದೆ ಕಡಿಮೆ. ಹಿರಿಯರ ಕಟ್ಟುಪಾಡುಗಳ ಒಂದೊಂದು ವಸ್ತುಗಳ , ಆಚರಣೆಗಳ ವಿಶೇಷತೆ ತಿಳಿದಾಗ ಮಾತ್ರ ಆ ವಸ್ತುವಿನ ಮೇಲಿನ ಗೌರವ ಇಮ್ಮಡಿಯಾಗುದಂತೂ ಸುಳ್ಳಲ್ಲ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.