ಚೆಂಡು ಹೂವಿನ ಹಲವು ಗುಣಗಳ ಬಗ್ಗೆ ತಿಳಿಯಿರಿ..!

Video Description

ತೋಟದ ಅಂದ ಹೆಚ್ಚಿಸುವ ಚೆಂಡು ಹೂವು ರೋಗಗಳಿಗೆ ರಾಮಬಾಣ ಚೆಂಡು ಹೂವಿನ ಹಲವು ಗುಣಗಳ ಬಗ್ಗೆ ತಿಳಿಯಿರಿ..! ತೋಟದ ಅಂದ ಹೆಚ್ಚಿಸುವ ಚೆಂಡು ಹೂವು ವರ್ಷಪೂರ್ತಿ ಬೆಳೆ ನೀಡುವ ಹೂವಾಗಿದೆ ಇದು ಆರೋಗ್ಯವರ್ಧಕ ಜೊತೆಗೆ ಸೌಂದರ್ಯ ವರ್ಧಕವೂ ಹೌದು ಇದನ್ನು ಇಂಗ್ಲಿಷ್‌ನಲ್ಲಿ 'ಮಾರಿ ಗೋಲ್ಡ್' ಎಂದೂ ಹಿಂದಿಯಲ್ಲಿ 'ಗೆಂದ ಪೂಲ್' ಎಂದೂ ಕರೆಯುತ್ತಾರೆ. ಇದರ ಚಹಾ ಮಾಡಿ ಕುಡಿದರೆ ಅಥವಾ ಹೂವಿನ ರಸ ಸೇವಿಸಿದರೆ ರಕ್ತ ಶುದ್ಧವಾಗುತ್ತದೆ. ಎಲ್ಲೆಂದರೆಲ್ಲಿ ಸುಲಭವಾಗಿ ಬೆಳೆಯಬಹುದಾದ ಚೆಂಡು ಹೂವು ಮಾರಕ ಕಾಯಿಲೆಗಳಾದ ಕ್ಯಾನ್ಸರ್ ಸೇರಿದಂತೆ, ಅಲ್ಸರ್, ಉರಿಯೂತ, ಮುಟ್ಟು, ಕಣ್ಣಿನ ಸಮಸ್ಯೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಚೆಂಡೂ ಹೂ ಗಣೇಶ ಸೇರಿದಂತೆ ಹಲವು ದೇವರಿಗೆ ಪ್ರಿಯವಾದ ಪುಷ್ಟ. ಇತರ ಹೂಗಳಿಗಿಂತ ಹೆಚ್ಚು ಆಕರ್ಷಣೆಯನ್ನು, ಗಾಢ ಬಣ್ಣವನ್ನು ಹೊಂದಿರುವ ಚೆಂಡು ಹೂ ಕಡಿಮೆ ಬೆಲೆಗೆ ಸಿಗುವ ಹೂವು ಸಹ ಹೌದು. ಈ ಹೂಗಳನ್ನು ಇಷ್ಟಕ್ಕೆ ಸೀಮಿತಗೊಳಿಸದೇ, ಎಣ್ಣೆ, ಕ್ರೀಮ್ ಗಳು, ಜೆಲ್, ಟಿಂಚರ್, ಟೀ, ಸೌಂದರ್ಯ ವೃದ್ಧಿಸುವ ಪ್ರಾಡಕ್ಟ್ ಗಳು, ಸಲಾಡ್ಸ್, ಟೂಥ್ ಪೇಸ್ಟ್, ಹಲವು ಖಾದ್ಯಗಳನ್ನು ತಯಾರಿಸಲು ಸಹ ಬಳಸುವ ಬಹುಪಕಾರಿ ಔಷಧೀಯ ಮದ್ದಾಗಿದೆ. ನಿಮಗೆ ನಂಬಲು ಅಚ್ಚರಿ ಎನಿಸಬಹುದು ಚೆಂಡು ಹೂವಿನ ಪ್ರಬೇಧವನ್ನು ಬರೋಬ್ಬರಿ 200 ವಿಧಧ ಶ್ಯಾಂಪು, ಸೋಪು, ಕ್ರೀಮ್ ಗಳ ತಯಾರಿಕೆಗೆ ಬಳಸುತ್ತಾರೆ ಎನ್ನಲಾಗಿದೆ. ಈ ಹೂವಿನಲ್ಲಿ ಉರಿಯೂತ ಹಾಗೂ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಹೊಂದಿರುವುದರಿಂದ ಆರೋಗ್ಯ ವೃದ್ಧಿಗೂ ಈ ಹೂವು ಸಹಕಾರಿ. ಸ್ಪೆಕ್ಟ್ರೋಫೊಟೋಮೆಟ್ರಿ ಮೂಲಕ ಚೆಂಡು ಹೂವಿನಿಂದ ಜೈವಿಕವಾಗಿ ಸಕ್ರಿಯವಾಗಿರುವ ಸಂಯುಕ್ತಗಳ ಮೌಲ್ಯಮಾಪನದ ಬಗ್ಗೆ 2012ರಲ್ಲಿ ಅಧ್ಯಯನ ನಡೆಸಲಾಗಿತ್ತು. ಅಧ್ಯಯನದ ವರದಿಯಂತೆ ಚೆಂಡು ಹೂವು ಫ್ಲೇವೊನಾಯ್ಡ್ ಮತ್ತು ಕರೋಟಿನಾಯ್ಡ್ ಎಂಬ ರೋಗ ನಿರೋಧಕಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಹೂವಿನ ದಳಗಳು ಸಾಕಷ್ಟು ರೋಗನಿರೋಧಕ ಮತ್ತು ಕ್ಯಾಲೆಂಡ್ರಿಕ್ ಮತ್ತು ಲಿನೋಲಿಸ್ ಎಂಬ ಕೊಬ್ಬಿನಾಮ್ಲಗಳ ಅಂಶಗಳನ್ನು ಹೊಂದಿದೆ. ಅಲ್ಲದೇ ಹೂವಿನ ಎಲೆಗಳು ಸಹ ಬೆಟಾ ಕರೋಟಿನ್ (ವಿಟಮಿನ್ ಎ) ಎಂಬರೋಗ ನಿರೋಧಕ ಗುಣವನ್ನು ಹೊಂದಿದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ.ಚೆಂಡು ಹೂವಿನ ದಳಗಳಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಆಂಶವನ್ನು ಹೊಂದಿದೆ. ಅದರಲ್ಲೂ ದೊಡ್ಡ ಕರುಳಿನಲ್ಲಿ ಉಂಟಾಗುವ ಉರಿಯೂತದ ಕಾಯಿಲೆಯನ್ನು ಗುಣಪಡಿಸುವ ಸಾಮರ್ಥ್ಯವನ್ನು ಈ ಹೂವು ಹೊಂದಿದೆ. ಹೂವಿನಲ್ಲಿರುವ ಆಂಟಿಆಕ್ಸಿಡೆಂಟ್ ಅಂಶಗಳು ಕಣ್ಣಿನ ದೃಷ್ಟಿಯನ್ನು ಅಭಿವೃದ್ದಿಪಡಿಸುವಲ್ಲಿ ಸಹ ಸಹಕಾರಿಯಾಗಿದೆ. ಕಣ್ಣಿನ ಪೊರೆ ಮತ್ತು ಮ್ಯಾಕ್ಯುಲರ್ ಕ್ಷೀಣತೆಯನ್ನು ತಪ್ಪಿಸುವಲ್ಲಿ ಬೆಟಾ ಕರೋಟಿನ್ ಅಂಶ ಸಹಕಾರಿಯಾಗಿದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.