ಲೋ ಬೀಪಿ - ಪ್ರಾಣ ತೆಗೆಯಬಹುದು..!

Video Description

ಲೊ ಬೀಪಿ ದೇಹಕ್ಕೆ ಉಂಟಾಗುವ ಪರಿಣಾಮಗಳೇನು? ಲೋ ಬೀಪಿ - ಪ್ರಾಣ ತೆಗೆಯಬಹುದು..! ಅಧಿಕ ರಕ್ತದೊತ್ತಡದ ಬಗ್ಗೆ ಹಲವರು ಮಾತನಾಡುತ್ತಾರೆ. ಹಾಗೂ ಜನರಿಗೂ ಸಹ ಅಧಿಕ ರಕ್ತದೊತ್ತಡದ ಲಕ್ಷಣಗಳು ಮತ್ತು ಪರಿಣಾಮಗಳ ಬಗ್ಗೆಯೂ ಜನರಿಗೆ ಅರಿವಿದೆ. ಆದರೆ, ಕಡಿಮೆ ರಕ್ತದೊತ್ತಡ ಅಥವಾ ಲೋ ಬಿಪಿ ಬಗ್ಗೆ ಮಾತ್ರ ಹೆಚ್ಚು ಜನರಿಗೆ ಮಾಹಿತಿಯ ಕೊರತೆ ಇದೆ. ಇನ್ನು, ಕಡಿಮೆ ರಕ್ತದೊತ್ತಡ ಹೃದಯ, ಎಂಡೋಕ್ರೈನ್ ಅಥವಾ ನರ ಸಂಬಂಧಿ ಕಾಯಿಲೆಗಳಂತಹ ಗಂಭೀರ ವಿಚಾರಗಳಿಂದಲೂ ಬಳಲುತ್ತಿರುವ ಸಾಧ್ಯತೆಗಳಿವೆ. ಲೋ ಬಿಪಿ ಹೆಚ್ಚಾದಲ್ಲಿ ಮೆದುಳಿನಿಂದ ಹರಿಯುವ ಆಮ್ಲಜನಕ ಹಾಗೂ ಪ್ರಮುಖ ಪೋಷಕಾಂಶಗಳು ನಿಲ್ಲುವ ಸಾಧ್ಯತೆ ಇದೆ. ಹೀಗಾಗಿ, ಯಾರೂ ಇದನ್ನು ಹಗುರವಾಗಿ ಪರಿಣಮಿಸುವ ಆಗಿಲ್ಲ. ನಿಮ್ಮ ಆರೋಗ್ಯ ಕಾಪಾಡಲು ಹೆಚ್ಚು ನೀರು ಕುಡಿಯುವುದು ಅತಿ ಅಗತ್ಯವಾಗಿದೆ. ಹೀಗಾಗಿ, ನಿಮಗೆ ಆಗಾಗ್ಗೆ ನಿರ್ಜಲೀಕರಣವಾಗುವುದು ಸಾಮಾನ್ಯವಾಗಿದ್ದರೆ ನೀವು ಈ ಬಗ್ಗೆ ಯೋಚಿಸಬೇಕಾಗುತ್ತದೆ. ಒಬ್ಬ ಮನುಷ್ಯ ಕಳೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ದ್ರವ ರೂಪದ ಆಹಾರವನ್ನು ಕುಡಿಯಬೇಕಾಗುತ್ತದೆ. ನೀವು ಕಚೇರಿ ಅಥವಾ ನಾಲ್ಕು ಗೋಡೆಗಳ ಮಧ್ಯೆ ಕೆಲಸ ಮಾಡದೆ ಹೊರಗಡೆ ಕೆಲಸ ಮಾಡುವುದಾದರೆ ಆಗಾಗ್ಗೆ ನಿಂಬೆಹಣ್ಣಿನ ಜ್ಯೂಸ್‌ ಅನ್ನು ಹೆಚ್ಚು ಕುಡಿಯಬೇಕಾಗುತ್ತದೆ. ಇದರಿಂದ, ನಿಮ್ಮ ನಿರ್ಜಲೀಕರಣದ ದುರ್ಬಲತೆಯನ್ನು ತಡೆಗಟ್ಟಬಹುದು. ನೀವು ಗರ್ಭವತಿಯಾಗಿದ್ದರೆ, ರಕ್ತದೊತ್ತಡ ಕಡಿಮೆಯಾಗುವ ಹಲವು ಅವಕಾಶಗಳಿರಬಹುದು. ಆ ಸಮಯದಲ್ಲಿ ಇದು ಸಾಮಾನ್ಯ ಎನಿಸಿಕೊಂಡರೂ, ರಕ್ತದೊತ್ತಡ ಆಗಾಗ್ಗೆ ಕಡಿಮೆಯಾಗುತ್ತಿದ್ದರೆ ವೈದ್ಯರ ಬಳಿ ಪರೀಕ್ಷೆ ಮಾಡಿಸುವುದು ಅಗತ್ಯವಾಗಿದೆ. ಕೆಲ ಅಗತ್ಯಪೋಷಕಾಂಶಗಳಾದ ಬಿ - 12 ಹಾಗೂ ಐರನ್ ಕೊರತೆಯಾದರೆ ಅನೀಮಿಯಾಗೆ ಕಾರಣವಾಗಬಹುದು. ಬಳಿಕ ಲೋ ಬಿಪಿಗೆ ಕಾರಣಗಳಾಗಬಹುದು. ಸಾಮಾನ್ಯವಾಗಿ ಉಪ್ಪು ಸೇವನೆ ಕಡಿಮೆ ಮಾಡಿ ಎಂದು ಜನರಿಗೆ ಹೇಳಲಾಗುತ್ತದೆ. ಆದರೆ, ಲೋ ಬಿಪಿಯಿಂದ ಬಳಲುತ್ತಿರುವವರಿಗೆ ಉಪ್ಪಿನಿಂದ ಸಹಾಯವಾಗಬಹುದು. ಆದರೆ, ಹೆಚ್ಚು ಉಪ್ಪಿನಂಶವಿರುವ ಆಹಾರ ಸೇವನೆಗೂ ಮುನ್ನ ವೈದ್ಯರ ಬಳಿ ಪರೀಕ್ಷೆ ಮಾಡಿಸಿ. ದೇಹದ ಸಾಮಾನ್ಯ ಕಾರ್ಯಚಟುವಟಿಕೆಗೆ ನೀರು ಕುಡಿಯುವುದು ಅಗತ್ಯವಾಗಿದೆ. ಅಲ್ಲದೆ, ನಿರ್ಜಲೀಕರಣ ತಡೆಯಲು ಸಹ ಇದು ಸಹಾಯವಾಗಲಿದೆ. ಇನ್ನು, ನಿಮಗೆ ಹೆಚ್ಚು ತಲೆ ಸುತ್ತುವ ಸಮಸ್ಯೆಯಿದ್ದರೂ ನೀರಿನ ಸೇವನೆ ಜಾಸ್ತಿ ಮಾಡಬೇಕಾದ ಅಗತ್ಯವೂ ಇದೆ. ಪ್ರತಿದಿನ ಎರಡು ಬಾರಿ ಹಸಿ ಬೀಟ್‌ರೂಟ್‌ ಜ್ಯೂಸ್‌ ಕುಡಿಯಿರಿ. ಕಡಿಮೆ ರಕ್ತದೊತ್ತಡ ಸಮಸ್ಯೆಗೆ ಇದು ಉತ್ತಮ ಮನೆ ಮದ್ದುಗಳಲ್ಲಿ ಒಂದಾಗಿದೆ. ಇನ್ನು, ಸ್ಟ್ರಾಂಗ್ ಬ್ಲಾಕ್‌ ಕಾಫಿ ಕುಡಿದರೂ ಸಹ ಸಹಾಯವಾಗಬಹುದು. ಬಾದಾಮಿ ಪೇಸ್ಟ್‌ ಮಾಡಿಕೊಂಡು ಉಗುರು ಬೆಚ್ಚಗಿನ ಹಾಲಿನೊಂದಿಗೆ ಕುಡಿದರೂ ಸಹಾಯವಾಗುತ್ತದೆ ಎಂದು ಸಹ ಕೆಲವರು ಸಲಹೆ ನೀಡುತ್ತಾರೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.