ಜಿಗಣೆ ನಿಮ್ಮ ಆರೋಗ್ಯ ಕಾಯುತ್ತೆ..!

Video Description

ಜಿಗಣೆ ನಿಮ್ಮ ಆರೋಗ್ಯದ ಸಂರಕ್ಷಕ ಹೇಗೆ? ಜಿಗಣೆ ನಿಮ್ಮ ಆರೋಗ್ಯ ಕಾಯುತ್ತೆ..! ಜಿಗಣೆ ಇದು ಅನೆಲಿಡ ವಿಭಾಗದ ಹಿರುಡೀನಿಯ[೧] ವರ್ಗಕ್ಕೆ ಸೇರಿದ ಅಕಶೇರುಕ (ಲೀಚ್). ಭಾರತ, ಮ್ಯಾನ್ಮಾರ್ ಮತ್ತು ಶ್ರೀಲಂಕಾಗಳನ್ನೊಳಗೊಂಡು ಉಷ್ಣಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಸಿಹಿನೀರಿನ ಕೊಳ, ಕೆರೆ, ಜೌಗು ಪ್ರದೇಶ ಮತ್ತು ನಿಧಾನವಾಗಿ ಹರಿಯುವ ಹಳ್ಳಗಳಲ್ಲಿ ಇದರ ವಾಸ. ನೀರಿನಲ್ಲಿ ತನ್ನ ಮಾಂಸಲವಾದ ದೇಹವನ್ನು ಅಲೆಗಳಂತೆ ಬಳುಕಿಸಿ ಈಜುತ್ತದೆ. ಆಹಾರಾರ್ಜನೆಗಾಗಿ ನೆಲದ ಮೇಲೂ ಬರುವುದುಂಟು. ನೆಲದ ಮೇಲೆ ದೇಹದ ಎರಡೂ ತುದಿಗಳಲ್ಲಿರುವ ಹೀರುಬಟ್ಟಲುಗಳ ನೆರವಿನಿಂದ ದೇಹವನ್ನು ಕುಣಿಕೆಯಂತೆ ಬಾಗಿಸಿ ಚಲಿಸುತ್ತದೆ. ಜಿಗಣೆ ಒಂದು ರೀತಿಯಲ್ಲಿ ಬಹಿರ್ ಪರತಂತ್ರ ಜೀವಿ ; ಇದು ವಾಸಿಸುವ ನೆಲೆಯ ಬಳಿಗೆ ನೀರು ಕುಡಿಯಲು ಬರುವ ಕಶೇರುಕಗಳ ರಕ್ತವನ್ನು ಹೀರಿ ಬದುಕುತ್ತ ನೀರಿನಲ್ಲಿಯೇ ವಾಸಿಸುವ ಮೀನು, ಆಮೆಗಳ ಪರಾವಲಂಬಿಯಾಗಿ ಬದುಕುವುದೂ ಉಂಟು. ಜಿಗಣೆಯ ಕೆಲವು ಪ್ರಭೇದಗಳು ಮನುಷ್ಯ ಮತ್ತು ಸಾಕುಪ್ರಾಣಿಗಳ ರಕ್ತವನ್ನು ಹೀರಿ ಮಾಡಿದರೂ ಕೆಲವು ಮನುಷ್ಯನಿಗೆ ಉಪಕಾರಿಗಳೂ ಆಗಿವೆ. ಹಿರುಡೊ ಮೆಡಿಸಿನ್ಯಾಲಿಸ್ ಎಂಬ ಪ್ರಭೇದದ ಜಿಗಣೆಗಳನ್ನು ಹುಣ್ಣು, ಕುರು ಇತ್ಯಾದಿಗಳಿಂದ ಕೆಟ್ಟ ರಕ್ತವನ್ನು ತೆಗೆಯಲು ವೈದ್ಯರು ಉಪಯೋಗಿಸುತ್ತಾರೆ. ಇವು ರಕ್ತವನ್ನು ಹೀರುವಾಗ ಮನುಷ್ಯನಿಗೆ ನೋವಾಗುವುದಿಲ್ಲವಾದುದರಿಂದ ಈ ವಿಧಾನವನ್ನು ಅನುಸರಿಸುತ್ತಾರೆ. ಅಲ್ಲದೆ ಜಿಗಣೆಗಳಿಂದ ಪ್ರತ್ಯೇಕಿಸಿದ ಕೆಲವು ರಾಸಾಯನಿಕಗಳನ್ನು ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಬಳಸುತ್ತಾರೆ. ಪಿಡುಗುಗಳಾಗಿ ಮನುಷ್ಯನಿಗೆ ಹಾನಿಕಾರಕವಾದ ಕೀಟ ಡಿಂಬಗಳು, ಹುಳುಗಳು, ಮೃದ್ವಂಗಿಗಳು ಮುಂತಾದ ಪ್ರಾಣಿಗಳನ್ನು ಜಿಗಣೆಗಳು ಆಹಾರವಾಗಿ ಬಳಸುವುದರಿಂದ ಅವುಗಳನ್ನು ನಾಶಪಡಿಸಿ ಮನುಷ್ಯನಿಗೆ ಉಪಕಾರವೆಸಗುತ್ತವೆ. ಜಿಗಣೆ ರಕ್ತ ಹೀರಿದಷ್ಟೂ ಮನುಷ್ಯ ಆರೋಗ್ಯವಂತನಾಗಿರುತ್ತಾನೆ ಅಂತಾ ಹೇಳುತ್ತಾರೆ. ಇದೀಗ ಸೋರಿಯಾಸಿಸ್ ಕಾಯಿಲೆಗೆ ಜಿಗಣೆಯನ್ನೇ ಮದ್ದಾಗಿ ಬಳಸಲಾಗುತ್ತಿದೆ. ಪಂಚಕರ್ಮ ಚಿಕಿತ್ಸೆಗಳಾದ ವಮನ, ವಿರೇಚನ, ಬಸ್ತಿ, ನಸ್ಯ ಮತ್ತು ರಕ್ತಮೋಕ್ಷಣಗಳಿಗೆ ಆಯುರ್ವೇದದಲ್ಲಿ ವಿಶೇಷ ಸ್ಥಾನ ನೀಡಲಾಗಿದೆ. ಯಾವುದೇ ವ್ಯಾಧಿಗೆ ಅಭ್ಯಂತರ ಔಷಧಿ ಪ್ರಯೋಗಿಸುವ ಮೊದಲು ಶರೀರದ ದೂಷಿತ ದೋಷಗಳನ್ನು ಹೊರಹಾಕಿ ಶರೀರ ಶುದ್ಧವಾದ ನಂತರವಷ್ಟೇ ಇತರೆ ಶಮನೌಷಧಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ. ಈ ಶರೀರ ಶೋಧನಾ ಕ್ರಿಯೆಗಳೇ ಈ ಪಂಚಕರ್ಮಗಳು. ಸುಶ್ರುತ ಶಲ್ಯ ತಂತ್ರದಲ್ಲಿ ರಕ್ತಮೋಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾನೆ. ರಕ್ತಮೋಕ್ಷಣ ಎಂದರೆ ಶರೀರದಿಂದ ದೂಷಿತ ರಕ್ತವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಹೊರಹಾಕುವುದು. ಇದರಲ್ಲಿ ಅನೇಕ ವಿಧಗಳುಂಟು.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.