ಕೀವಿ ಹಣ್ಣು ಡೆಂಗಿಗೆ ಉತ್ತಮ ಔಷಧ..!

Video Description

ಕೀವಿ ಹಣ್ಣು ಡೆಂಗಿಗೆ ಉತ್ತಮ ಔಷಧ..! ಕಿವಿ ಹಣ್ಣು ಸಿಹಿ ಮತ್ತು ಹುಳಿ 2 ರ ಅನುಭವವನ್ನ ನೀಡುವ ರುಚಿಕರವಾದ ಹಣ್ಣು ತನ್ನ ವಿಲಕ್ಷಣ ರುಚಿ ಜೊತೆಗೆ ಹಲವು ಆರೋಗ್ಯಕರ ಉಪಯೋಗಗಳನ್ನು ದೇಹಕ್ಕೆ ನೀಡುತ್ತದೆ. ಇವುಗಳಲ್ಲಿ ಡೆಂಗಿ ಜ್ವರ ಕೂಡ ಒಂದು ಕಿವಿ ಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶ ಜೀವಕೋಶಗಳು ನಾಶವಾಗದಂತೆ ತಡೆಯುತ್ತದೆ ಹೀಗಾಗಿ ಡೆಂಗೆ ಜ್ವರದಿಂದ ಬಳಲುತ್ತಿರುವವರಿಗೆ ಕಿವಿ ಹಣ್ಣು ದಿವ್ಯ ಔಷಧ ಅಂತ ಹೇಳಬಹುದು ವೈದ್ಯರು ಕೂಡ ರೋಗಿಗಳಿಗೆ ಬೆಂಗಿ ಬಂದಾಗ ಕಿವಿ ಹಣ್ಣನ್ನು ತಿನ್ನಲು ಸೂಚಿಸುತ್ತಾರೆ. ಡೆಂಗಿ ಮಾತ್ರವಲ್ಲ ದೇಹದ ಉರಿಯೂತವನ್ನು ತಡೆಗಟ್ಟುವುದಕ್ಕೆ ಕೂಡ ಕಿವಿಹಣ್ಣು ಸಹಕರಿಸುತ್ತದೆ, ಇನ್ನು ಕಣ್ಣಿನ ಆರೋಗ್ಯ ಜೊತೆಗೆ ದೃಷ್ಟಿ ಹೀನತೆ ಸಮಸ್ಯೆಯನ್ನು ಕೂಡ ತಡೆಗಟ್ಟತದೆ ಕಿವಿ ಹಣ್ಣು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುವುದಕ್ಕೆ ಹಾಗೆ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸು ದಕ್ಕೆ ಕಿವಿ ಹಣ್ಣು ಸಹಕಾರಿ. ಸಾಮಾನ್ಯವಾಗಿ ವಿಟಮಿನ್ ಇ ಇರುವ ಆಹಾರದಲ್ಲಿ ಕೊಬ್ಬಿನಂಶವಿರುತ್ತದೆ ಆದರೆ ಕಿವಿ ಹಣ್ಣಿನಲ್ಲಿ ಕೊಬ್ಬಿನಂಶ ತುಂಬಾ ಕಡಿಮೆ ಇದ್ದು ವಿಟಮಿನ್ ಇ ಇರುವುದರಿಂದ ತ್ವಚೆ ಮತ್ತು ಹೃದಯದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಕಿವಿ ಹಣ್ಣಿನಲ್ಲಿ ಇತರ ಹಣ್ಣಿನಲ್ಲಿ ಇರುವುದಕ್ಕಿಂತ ಅಧಿಕ ಪ್ರಮಾಣದಲ್ಲಿ ಫಾಲಿಕ್ ಆಸಿಡ್ ಇರೋದು ಗರ್ಭಿಣಿಯರಿಗೆ ಮತ್ತು ಹೆರಿಗೆಯ ನಂತರ ತಾಯಂದಿರಿಗೆ ಒಳ್ಳೆಯದು ಇದಿಷ್ಟೇ ಅಲ್ಲ ತ್ವಚೆ ಕೂದಲು ಮತ್ತು ಉಗುರಿನ ಆರೋಗ್ಯವನ್ನು ಕಾಪಾಡುವಲ್ಲಿ ಕಿವಿ ಹಣ್ಣು ಬಹಳ ಸಹಕಾರಿ. ಅಸ್ತಮಾದಂತಹ ಕಾಯಿಲೆಗಳು ಉಸಿರಾಟದ ತೊಂದರೆ ಪ್ಲೇಟ್ಲೆಟ್ ಸಂಖ್ಯೆ ವೃದ್ಧಿಸಲು ಕಿವಿ ಹಣ್ಣನ್ನು ತಿನ್ನಬೇಕು ಮಕ್ಕಳು ವಾರದಲ್ಲಿ 5ರಿಂದ 6 ಕಿವಿ ಹಣ್ಣು ತಿಂದರೆ ಅಸ್ತಮಾ ಉಸಿರಾಟದ ತೊಂದರೆಗಳಿಂದ ದೂರವಿರಬಹುದು.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.