ಕಾಮಕಸ್ತೂರಿ ಬೀಜ - ನೀವರಿಯದ ಸಂಗತಿ..!

Video Description

ಕಾಮಕಸ್ತೂರಿ ಬೀಜ - ನೀವರಿಯದ ಸಂಗತಿ..! ತುಳಸಿ ಬೀಜಗಳಂತೆ ಕಾಣುವ ಕಾಮಕಸ್ತೂರಿ ಬೀಜ ನೋಡೋದಕ್ಕೆ ಕಪ್ಪಾಗಿ ಕಾಣಿಸುತ್ತದೆ. ಈ ಕಾಮಕಸ್ತೂರಿ ಬೀಜಗಳನ್ನು ನೀರಿನಲ್ಲಿ ನೆನೆಸಿ ತಿನ್ನುವುದರಿಂದ ಕೆಲವೊಂದು ಸಂದರ್ಭಗಳಲ್ಲಿ ನಾನಾ ರೀತಿಯ ಸಮಸ್ಯೆ ದೂರವಾಗುತ್ತದೆ. ಅಷ್ಟೇ ಅಲ್ಲದೆ ಸಲಾಡ್, ಮೊಸರು ಮತ್ತು ಸೂಪ್ ಜೊತೆಗೂ ಇದನ್ನು ಸೇವಿಸಬಹುದು. ಇನ್ನು ಕಾಮಕಸ್ತೂರಿ ಬೀಜವನ್ನ ನಾವು ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆ. ಈ ಬೀಜದಲ್ಲಿರುವ ಫ್ಲೇವನಾಯ್ಡ್ ಅಂಶ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಸಹಕರಿಸುತ್ತದೆ, ಉಪವಾಸ ವಿದ್ದಾಗ ಅಸಿಡಿಟಿ ಮತ್ತು ಮಲಬದ್ಧತೆ ಸಾಮಾನ್ಯವಾದ ಸಮಸ್ಯೆ ಅಂತ ಹೇಳಬಹುದು. ಇಂತಹ ಸಂದರ್ಭದಲ್ಲಿ ಕಾಮಕಸ್ತೂರಿ ಬೀಜಗಳು ಹೊಟ್ಟೆಗೆ ತಂಪನ್ನು ನೀಡುತ್ತದೆ, ಒಂದು ಚಮಚದಷ್ಟು ಬೀಜಗಳನ್ನ ಹಾಲಿನಲ್ಲಿ ಬೆರೆಸಿಕೊಂಡು ಸೇವಿಸಬೇಕು. ಇದು ಅಸಿಡಿಟಿಯಿಂದ ನಿಮಗೆ ನಿರಾಳತೆಯ ನೀಡುತ್ತದೆ. ಆಹಾರಕ್ರಮದಲ್ಲಿ ಮತ್ತು ಸೇವನೆ ಸಮಯದಲ್ಲಿ ಉಂಟಾಗುವ ಬದಲಾವಣೆಯಿಂದ ಮಲಬದ್ಧತೆ ಸಮಸ್ಯೆ ತಲೆದೋರುತ್ತದೆ. ಈ ಮಲಬದ್ಧತೆ ಸಮಸ್ಯೆಗೆ ಕೂಡ ಹಾಲಿನೊಂದಿಗೆ ಬೀಜಗಳನ್ನು ಸೇರಿಸಿ ಸೇವಿಸುವುದರಿಂದ ಸಮಸ್ಯೆಯನ್ನ ಪರಿಹರಿಸಿಕೊಳ್ಳಬಹುದು. ಕಾಮಕಸ್ತೂರಿ ಬೀಜ ಗಳಲ್ಲಿ ಉಷ್ಣತೆಯನ್ನು ಕಡಿಮೆ ಮಾಡುವ ಗುಣಗಳಿವೆ, ಇದು ದೇಹದ ಉಷ್ಣತೆಯನ್ನು ಹಿರಿ ದೇಹಕ್ಕೆ ತ್ವರಿತ ತಂಪನ್ನು ನೀಡುತ್ತದೆ ಜ್ಯೂಸ್ ಹಾಗೂ ಇತರ ಹಣ್ಣಿನೊಂದಿಗೆ ಇದನ್ನ ಮಿಶ್ರ ಮಾಡಿಕೊಂಡು ಸೇವಿಸಬೇಕಾಗುತ್ತದೆ ಈಗ ಬೀಜಗಳನ್ನು ನೀರಿನಲ್ಲಿ ನೆನೆ ಹಾಕಿ ಪ್ರತಿದಿನ ನೀರಿನ ಸೇವಿಸಿದರೆ ಉಷ್ಣತೆ ಕಡಿಮೆಯಾಗುತ್ತದೆ ಇನ್ನು ತುಂಬಾ ಹೊಟ್ಟೆ ಹಸಿತಾ ಇದೆ ಅನ್ನೋ ಸಂದರ್ಭದಲ್ಲಿ ಕಾಮಕಸ್ತೂರಿ ಬೀಜಗಳನ್ನು ನೀರಿನಲ್ಲಿ ನೆನೆಹಾಕಿ ಅಥವಾ ಹಣ್ಣುಗಳ ಜೊತೆ ಸೇವಿಸಿದರೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ ಒಟ್ಟಾರೆ ದೇಹಕ್ಕೆ ಬೇಕಾಗಿರುವ ಅಗತ್ಯ ರೀತಿಯಾದಂತಹ ಅಂಶಗಳನ್ನು ಒದಗಿಸುವಲ್ಲಿ ಕಾಮಕಸ್ತೂರಿ ವರದಾನ..

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.