ಬೆಲ್ಲ ತಿನ್ನೋದ್ರಿಂದ ಏನಾಗುತ್ತೆ ಗೊತ್ತಾ..?

Video Description

ಬೆಲ್ಲ ತಿನ್ನಿ ಕಾಯಿಲೆಗಳನ್ನು ದೂರವಿಡಿ ಬೆಲ್ಲ ತಿನ್ನೋದ್ರಿಂದ ಏನಾಗುತ್ತೆ ಗೊತ್ತಾ..? ಬೆಲ್ಲ ಬಾಯಿಗೆ ಮಾತ್ರ ಸಿಹಿ ಅಲ್ಲ, ಆರೋಗ್ಯಕ್ಕೂ ಸಿಹಿ ಎಂಬುದು ನಿಮಗೆ ಗೊತ್ತೆ. ಸಕ್ಕರೆಗೆ ಬದಲಿಯಾಗಿ ಬೆಲ್ಲ ಉಪಯೋಗಿಸುವುದು ಹಣ ಹಾಗೂ ಆರೋಗ್ಯ ಎರಡೂ ದೃಷ್ಟಿಯಿಂದಲೂ ಉತ್ತಮ. ಖನಿಜಾಂಶ, ಅದರಲ್ಲೂ ಕಬ್ಬಿಣಾಂಶವನ್ನು ಹೊಂದಿರುವ ಬೆಲ್ಲವನ್ನು ಹಿತವಾಗಿ, ಮಿತವಾಗಿ ಪ್ರತಿದಿನ ಬೆಲ್ಲ ತಿನ್ನುವುದು ನಿಜಕ್ಕೂ ಆರೋಗ್ಯದ ಮೇಲೆ ಅದ್ಭುತ ಪರಿಣಾಮ ಬೀರಬಲ್ಲದು. ಈ ಹಿನ್ನೆಲೆಯಲ್ಲಿ ಪೂರ್ವಜರು ಬೆಲ್ಲ ತಿಂದು ನೀರು ಕುಡಿಯುತ್ತಿದ್ದರು. ಬೆಲ್ಲ ತಿಂದರೆ ಅದ್ಭುತವಾದ ಆರೋಗ್ಯಕರ ಗುಣಗಳನ್ನು ಪಡೆಯಬಹುದೆಂದು ಹೆಚ್ಚಿನ ಜನರಿಗೆ ಗೊತ್ತಿರುವುದಿಲ್ಲ. ಬೆಲ್ಲವನ್ನು ತಿಂದರೆ ಅನೇಕ ಸಣ್ಣ ಪುಟ್ಟ ಸಮಸ್ಯೆಗಳನ್ನು ಮಾತ್ರವಲ್ಲ, ದೊಡ್ಡ ಸಮಸ್ಯೆಗಳನ್ನೂ ದೂರವಿಡಬಹುದು. , ಬೆಲ್ಲದಲ್ಲಿರುವ ಆರೋಗ್ಯಕರ ಗುಣಗಳೇನು ಎಂದು ನೋಡೋಣ: ೧.ರಕ್ತವನ್ನು ಶುದ್ಧೀಕರಿಸುತ್ತದೆ. ಈ ಸಿಹಿ ವಸ್ತು ರಕ್ತವನ್ನು ಶುದ್ಧೀಕರಿಸುತ್ತದೆ. ಆದ್ದರಿಂದ ದಿನಾ ಸ್ವಲ್ಪ ಬೆಲ್ಲವನ್ನು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಜೀರ್ಣಕ್ರಿಯೆಗೆ ಒಳ್ಳೆಯದು ಇದು ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಅಜೀರ್ಣವಾದಾಗ ಸ್ವಲ್ಪ ಬೆಲ್ಲವನ್ನು ಈರುಳ್ಳಿ ಜೊತೆ ತಿಂದರೆ ಒಳ್ಳೆಯದು. ಬೆಲ್ಲ ಹೊಟ್ಟೆಯನ್ನು ತಂಪಾಗಿಸುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಒಂದು ತುಂಡು ಬೆಲ್ಲವನ್ನು ಬಾಯಿಗೆ ಹಾಕಿಕೊಳ್ಳಿ. - ಊಟವಾದ ಮೇಲೆ ಸಣ್ಣ ತುಂಡು ಬೆಲ್ಲ ತಿನ್ನುವುದು ಜೀರ್ಣಕ್ರಿಯೆಗೆ ಉತ್ತಮ. ಇದು ಜೀರ್ಣಕ್ರಿಯೆಯನ್ನು ಸಕ್ರಿಯಗೊಳಿಸುತ್ತದೆ. ಹೀಗಾಗಿ ಮಲಬದ್ಧತೆಯನ್ನು ದೂರ ಮಾಡುತ್ತದೆ. ಮಲಗುವಾಗ ಬೆಲ್ಲ ತಿಂದು ಮಲಗಿದ್ರೆ ನಿದ್ರೆ ಸರಿಯಾಗಿ ಬರುವುದರ ಜತೆಗೆ ಗ್ಯಾಸ್ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ ಕೀಲು ನೋವು ಸಮಸ್ಯೆ ಇರುವವರು ಪ್ರತಿದಿನ ಶುಂಠಿ ಜತೆ ಬೆಲ್ಲ ಸೇವಿಸಬೇಕು ಶುಂಠಿಯನ್ನು ಬೆಲ್ಲದ ಜತೆ ಬಿಸಿ ಮಾಡಿ ಸ್ವಲ್ಪ ಬೆಚ್ಚಗಿರುವಾಗಲೇ ತಿಂದರೆ ಗಂಟಲು ನೋವು ಶಮನವಾಗುತ್ತದೆ ಬೆಲ್ಲವು ಮೂತ್ರಪಿಂಡದಲ್ಲಿರುವ ವಿಷಕಾರಿ ರಾಸಾಯನಿಕ ಅಂಶಗಳನ್ನು ಹೊರ ಹಾಕಲು ನೆರವಾಗುತ್ತದೆ. ಶೀತ, ಕಫ ಇದ್ದಾಗ ಬಿಸಿ ನೀರಿನಲ್ಲಿ ಬೆಲ್ಲವನ್ನು ಕರಗಿಸಿ ಕುಡಿಯಬೇಕು ಅಥವಾ ಚಹಾಗೆ ಸಕ್ಕರೆ ಬದಲು ಬೆಲ್ಲ ಹಾಕಿ ಕುಡಿಯಬಹುದು. ರಕ್ತ ಶುದ್ಧಿಗೊಳ್ಳುತ್ತದೆ. ಹಿಮೊಗ್ಲೋಬಿನ್ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ರಕ್ತಹೀನತೆಯನ್ನು ತಡೆಯುತ್ತದೆ. ಬೆಲ್ಲವು ಶ್ವಾಸಕೋಶ, ಶ್ವಾಸನಾಳ, ಕರುಳು, ಹೊಟ್ಟೆ ಮತ್ತು ಅನ್ನನಾಳವನ್ನು ಸ್ವಚ್ಛಗೊಳಿಸುತ್ತದೆ. ಅತೀ ಮಾಲಿನ್ಯವಿರುವ ಜಾಗದಲ್ಲಿ ಕೆಲಸ ಮಾಡುವವರು ಬೆಲ್ಲ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಋುತುಸ್ರಾವದ ಸಮಯದಲ್ಲಿ ಮೂಡ್‌ನಲ್ಲಿ ವ್ಯತ್ಯಾಸವಾಗುವುದು ಸಾಮಾನ್ಯ. ಈ ಸಮಯದಲ್ಲಿ ಬೆಲ್ಲ ತಿಂದರೆ ಮೂಡ್‌ನಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.